ನಟ ದರ್ಶನ್​ ಆಪ್ತ ಸ್ನೇಹಿತನ ಮಗಳು ಈಗ ಮಹಾನಟಿ ವಿನ್ನರ್​​; ಯಾರಿದು ಪ್ರಿಯಾಂಕ ಆಚಾರ್​?

author-image
Veena Gangani
Updated On
ನಟ ದರ್ಶನ್​ ಆಪ್ತ ಸ್ನೇಹಿತನ ಮಗಳು ಈಗ ಮಹಾನಟಿ ವಿನ್ನರ್​​; ಯಾರಿದು ಪ್ರಿಯಾಂಕ ಆಚಾರ್​?
Advertisment
  • ಈ ಬಗ್ಗೆ ದರ್ಶನ್​ ನನಗೆ ಯಾವುದೇ ಮಾಹಿತಿ ಕೊಟ್ಟಿಲ್ಲ ಎಂದ ತರುಣ್​ ಸುಧೀರ್
  • ‘ಮಹಾನಟಿ’ ರಿಯಾಲಿಟಿ ಶೋ ರನ್ನರ್​ ಪಟ್ಟ ಸ್ವೀಕರಿಸಿದ ತರೀಕೆರೆಯ ಧನ್ಯಶ್ರೀ
  • ಪ್ರಿಯಾಂಕಗೆ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್​ಗಳಿಂದ ಶುಭಾಶಯ ಮಹಾಪೂರ

ಕನ್ನಡ ಕಿರುತೆರೆಯ ‘ಮಹಾನಟಿ’ ರಿಯಾಲಿಟಿ ಶೋ ವಿನ್ನರ್​ ಆಗಿ ಪ್ರಿಯಾಂಕ್ ಆರ್ಚಾರ್​ ಅವರು ಹೊರ ಹೊಮ್ಮಿದ್ದಾರೆ. ಸತತ ಮೂರುವರೆ ತಿಂಗಳಿಂದ ಎಲ್ಲರನ್ನು ರಂಜಿಸಿದ ಈ ಶೋ ಈಗ ಕೊನೆಗೊಂಡಿದೆ. ಅದ್ಧೂರಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಮೈಸೂರಿನ ಪ್ರಿಯಾಂಕ ಅವರು ಮಹಾನಟಿ ಸೀಸನ್‌ 1ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ತರೀಕೆರೆಯ ಧನ್ಯಶ್ರೀ ರನ್ನರ್‌ ಅಪ್‌ ಆಗಿದ್ದಾರೆ.

publive-image

ಇದನ್ನೂ ಓದಿ:ಮಹಾನಟಿ ಕಿರೀಟ ಮುಡಿಗೇರಿಸಿಕೊಂಡ ಪ್ರಿಯಾಂಕ ಆಚಾರ್; ರನ್ನರ್​ ಅಪ್​ ಪಟ್ಟ ಯಾರಿಗೆ ಗೊತ್ತಾ?

ಇನ್ನು, ಮಹಾನಟಿ ಪಟ್ಟವನ್ನು ಮುಡಿಗೇರಿಸಿಕೊಂಡ ಪ್ರಿಯಾಂಕ ಆರ್ಚಾರ್ ಅವರಿಗೆ ಸ್ಯಾಂಡಲ್​ವುಡ್​ ನಟ ದರ್ಶನ್​ ವಿಶ್​ ಮಾಡಿದ್ದರಂತೆ. ಇನ್ನು, ನಟ ದರ್ಶನ್​ ಅವರು ಪ್ರಿಯಾಂಕ ಆರ್ಚಾರ್ ತಂದೆಯ ಕ್ಲಾಸ್​ ಮೆಟ್ ಅಂತೆ. ಹೌದು, ಹಿಂದಿನ ಸಂಚಿಕೆಯಲ್ಲಿ ಪ್ರಿಯಾಂಕ ಆರ್ಚಾರ್ ಅವರೇ ಖುದ್ದು ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದರು.

publive-image

ಈ ಬಗ್ಗೆ ಹೇಳಿದ್ದ ಪ್ರಿಯಾಂಕ ಆರ್ಚಾರ್, ದರ್ಶನ್​ ಸರ್​ ನನ್ನ ಅಪ್ಪ ಸ್ನೇಹಿತರಾಗಿದ್ದಾರೆ. ಮಹಾನಟಿಗೆ ನಾನು ಸೆಲೆಕ್ಟ್ ಆದ ಕೂಡಲೇ ನನಗೆ ಫೋನ್​ ಮಾಡಿ ವಿಶ್​ ಮಾಡಿದ್ರು. ಎಲ್ಲವನ್ನು ಚೆನ್ನಾಗಿ ಕಲಿ ಅಂತ ಹೇಳಿದ್ರು. ಆಗ ನನಗೆ ತುಂಬಾ ಖುಷಿ ಆಯ್ತು ಎಂದಿದ್ದರು. ಈ ವಿಚಾರದ ಬಗ್ಗೆ ನಟ ನಿರ್ದೇಶಕ ತರುಣ್ ಸುಧೀರ್ ಅವರು ಕೂಡ ಮಾತಾಡಿದ್ರು, ಒಂದು ವಾರದ ಹಿಂದೆಯಷ್ಟೇ ದರ್ಶನ್​ ಅವರನ್ನು ಭೇಟಿಯಾಗಿದ್ದೇ. ಆದರೆ ಈ ಬಗ್ಗೆ ಅವರು ನನಗೆ ಯಾವುದೇ ಮಾಹಿತಿ ಕೊಟ್ಟಿಲ್ಲ ಅಂತ ಹೇಳಿದ್ರು.

publive-image

ಸದ್ಯ ಮಹಾನಟಿ ವಿಜೇತೆಯಾಗಿ ಹೊರ ಹೊಮ್ಮಿದ ಪ್ರಿಯಾಂಕ ಆವರಿಗೆ 15 ಲಕ್ಷ ಮೌಲ್ಯದ ಚಿನ್ನದ ಕಿರೀಟ ನೀಡಿದ್ದಾರೆ. ಎರಡನೇ ಸ್ಥಾನ ಪಡೆದ ಧನ್ಯಶ್ರೀಗೆ 10 ಲಕ್ಷ ನಗದು ಬಹುಮಾನ ಸಿಕ್ಕಿದೆ. ಮೂರನೇ ಸ್ಥಾನ ಪಡೆದ ಚಿತ್ರದುರ್ಗದ ಗಗನ, ನಾಲ್ಕನೇ ಸ್ಥಾನ ಪಡೆದ ಆರಾಧನಾ ಭಟ್‌, ಐದನೇ ಸ್ಥಾನ ಶ್ವೇತಾ ಭಟ್‌ಗೆ ತಲಾ ಒಂದು ಲಕ್ಷ ಬಹುಮಾನ ನೀಡಲಾಯಿತು. ಇನ್ನು, ಪ್ರಿಯಾಂಕ ಅವರು ವಿನ್ನರ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅವರು ಅಭಿಮಾನಿಗಳು ಹೊಸ ಹೊಸ ಫೋಟೋ ಶೇರ್ ಮಾಡಿ ಅವರಿಗೆ ವಿಶ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment