newsfirstkannada.com

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕುತ್ತಿಗೆಗೆ ಗಾಯ; ಅಭಿಮಾನಿಗಳಲ್ಲಿ ಆತಂಕ; ಏನಾಯ್ತು?

Share :

Published June 20, 2024 at 6:10am

  'ದಿ ಬ್ಲಫ್' ಸಿನಿಮಾದಲ್ಲಿ ದರೋಡೆಕೋರನ ಪಾತ್ರದಲ್ಲಿ ನಟಿ ಪ್ರಿಯಾಂಕ ನಟನೆ

  ಬಾಲಿವುಡ್​ನಿಂದ ಹಾಲಿವುಡ್​ಗೆ ಹಾರಿ ಸಿನಿಮಾಗಳಲ್ಲಿ ನಟಿ ಸಖತ್​ ಬ್ಯುಸಿ

  ಸಾಮಾಜಿಕ ಜಾಲತಾಣದಲ್ಲಿ ಫೋಟೋ ನೋಡಿ ಅಭಿಮಾನಿಗಳು ಆತಂಕ

ಒಂದಲ್ಲಾ ಒಂದು ವಿಚಾರಕ್ಕೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸುದ್ದಿಯಲ್ಲಿ ಇರುತ್ತಾರೆ. ಆದರೆ ಇದೀಗ ಅಭಿಮಾನಿಗಳು ಆತಂಕ ಪಡುವಂತ ಫೋಟೋವೊಂದನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋ ನೋಡಿದ ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಬಾಲಿವುಡ್​ನಿಂದ ಹಾಲಿವುಡ್​ಗೆ ಎಂಟ್ರಿ ಕೊಟ್ಟು ಕೆಲ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಪ್ರಿಯಾಂಕಾ ಚೋಪ್ರಾ ಸದ್ಯ ಈ ವಿಚಾರಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಲಿವುಡ್‌ನ ‘ದಿ ಬ್ಲಫ್’ ಸಿನಿಮಾ ಶೂಟಿಂಗ್​ ವೇಳೆ ನಟಿ ಪ್ರಿಯಾಂಕ್ ಚೋಪ್ರಾ ಅವರು ಗಾಯಗೊಂಡಿದ್ದಾರೆ. ಈ ಬಗ್ಗೆ ಖುದ್ದು ನಟಿ ಪ್ರಿಯಾಂಕ ಚೋಪ್ರಾ ಅವರೇ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್​ಸ್ಟಾ ಸ್ಟೋರಿಯಲ್ಲಿ ಕುತ್ತಿಗೆಗೆ ಗಾಯವಾದ ಫೋಟೋವನ್ನು  ಪೋಸ್ಟ್ ಮಾಡಿ ಅದಕ್ಕೆ ‘Oh the professional hazards on my jobs” ಎಂದು ಅಡಿ ಬರಹವನ್ನು ಬರೆದುಕೊಂಡಿದ್ದಾರೆ.

ಇನ್ನು, ‘ದಿ ಬ್ಲಫ್’ ಮಾಜಿ ಮಹಿಳಾ ದರೋಡೆಕೋರರ ಕಥೆಯ ಸಿನಿಮಾವಾಗಿದೆ. ದರೋಡೆಕೋರನ ಪಾತ್ರದಲ್ಲಿ ನಟಿ ಪ್ರಿಯಾಂಕ ನಟಿಸಿದ್ದಾರೆ. ಇದೇ ಸಿನಿಮಾದ ವೇಳೆ ನಟಿ ಕುತ್ತಿಗೆಯ ಭಾಗಕ್ಕೆ ಗಾಯವಾಗಿದೆ. ಸದ್ಯ ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕುತ್ತಿಗೆಗೆ ಗಾಯ; ಅಭಿಮಾನಿಗಳಲ್ಲಿ ಆತಂಕ; ಏನಾಯ್ತು?

https://newsfirstlive.com/wp-content/uploads/2024/06/priyanka1.jpg

Load More