newsfirstkannada.com

ಅಯೋಧ್ಯೆಯಲ್ಲಿ ಬಾಲಿವುಡ್​ ಸ್ಟಾರ್ ನಟಿ.. ಸೀರೆಯುಟ್ಟು, ಮಗು ಎತ್ತಿಕೊಂಡು ರಾಮಲಲ್ಲಾ ದರ್ಶನ ಪಡೆದ ಪಿಗ್ಗಿ

Share :

Published March 21, 2024 at 6:24am

  ಅಯೋಧ್ಯೆಯಲ್ಲಿ ಸಂಪ್ರದಾಯವಾಗಿ ಹಳದಿ ಸ್ಯಾರಿಯಲ್ಲಿ ಕಾಣಿಸಿದ ಪಿಗ್ಗಿ

  ರಾಮಮಂದಿರಕ್ಕೆ ಬಾಲಿವುಡ್​ನ ಸ್ಟಾರ್​ ನಟಿ ಫ್ಯಾಮಿಲಿ ಸಮೇತ ಭೇಟಿ

  ಪ್ರಿಯಾಂಕ ಆಗಮನವಾಗ್ತಿದ್ದಂತೆ ಫೋಟೋಗೆ ಮುಗಿಬಿದ್ದ ಅಭಿಮಾನಿಗಳು

ಪ್ರಿಯಾಂಕಾ ಚೋಪ್ರಾ ಅವರ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಬಾಲಿವುಡ್‌ ಬ್ಯೂಟಿ, ಹಾಲಿವುಡ್‌ಗೂ ಎಂಟ್ರಿ ಕೊಟ್ಟು ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಸದ್ಯ ದೇಶದ್ಯಾಂತದ ರಾಮಭಕ್ತರು ಯಾವಾಗ ಅಯೋಧ್ಯೆಯ ರಾಮಮಂದಿರ ದರ್ಶನ ಪಡೆಯುವುದೆಂದು ಕಾಯುತ್ತಿದ್ದಾರೆ. ಅಷ್ಟೊಂದು ಜನ ಶ್ರೀಬಾಲರಾಮನ ಆಶೀರ್ವಾದ ಪಡೆಯಲು ಉತ್ಸುಕರಾಗಿದ್ದಾರೆ. ಇದರ ಮಧ್ಯೆ ಬಾಲಿವುಡ್​ನ ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ತನ್ನ ಫ್ಯಾಮಿಲಿ ಜೊತೆ ಬಾಲರಾಮನ ದರ್ಶನ ಪಡೆದುಕೊಂಡಿದ್ದಾರೆ.

ಉತ್ತರಪ್ರದೇಶದ ಅಯೋಧ್ಯೆಯ ರಾಮಮಂದಿರಕ್ಕೆ ನಟಿ ಪ್ರಿಯಾಂಕ ಚೋಪ್ರಾ ಅವರು ತನ್ನ ಪತಿ ನಿಕ್​ ಜೋನಾಸ್ ಹಾಗೂ ಮಗಳು ಮಾಲ್ಟಿ ಮೇರಿ ಜೊತೆ ಭೇಟಿ ನೀಡಿದ್ದಾರೆ. ಈ ವೇಳೆ ರಾಮಲಲ್ಲಾನ ದರ್ಶನ ಪಡೆದುಕೊಂಡು ಪುನೀತಾಗಿದ್ದಾರೆ. ಮಂದಿರಕ್ಕೆ ಭೇಟಿ ನೀಡಿರುವ ಪ್ರಿಯಾಂಕ ಚೋಪ್ರಾ ಭಾರತದ ಸಂಪ್ರದಾಯದಂತೆ ಹಳದಿ ಬಣ್ಣದ ಸೀರೆ ಧರಿಸಿದ್ರೆ, ಇತ್ತ ನಿಕ್​ ಕುರ್ತಾ, ಪ್ಯಾಂಟ್​ನಲ್ಲಿ ಕಂಡರು. ಇನ್ನು ಮಗಳು ಕೂಡ ಹೊಸ ಡ್ರೆಸ್​ನಲ್ಲಿ ಕಾಣಿಸಿತು. ಮಂದಿರ ಟ್ರಸ್ಟ್​ನವರು ದಂಪತಿಗೆ ಕೇಸರಿ ಶಾಲು ಹಾಕಿ ಗೌರವಿಸಿದರು.

ಇನ್ನು ಪ್ರಿಯಾಂಕ ಚೋಪ್ರಾ ಫ್ಯಾಮಿಲಿ ಅಯೋಧ್ಯೆ ಏರ್​ಪೋರ್ಟ್​ನಲ್ಲಿ ವಿಮಾನದಿಂದ ಕೆಳಗಿಳಿದು ಹೊರ ಬರುತ್ತಿದ್ದಂತೆ ಅವರ ಅಭಿಮಾನಿಗಳು ನೋಡಲು ಮುಗಿ ಬಿದ್ದರು. ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಆದರೆ ಭದ್ರತಾ ಸಿಬ್ಬಂದಿ ಜನರನ್ನು ತಡೆದು ಅವರನ್ನು ಮಂದಿರದೆಡೆಗೆ ಹೋಗಲು ಅನುಕೂಲ ಮಾಡಿಕೊಟ್ಟರು ಎಂದು ಹೇಳಲಾಗಿದೆ.

ಜನವರಿ 22 ರಂದು ಪ್ರಧಾನಿ ಮೋದಿಯವರು ಅಯೋಧ್ಯೆಯ ರಾಮಮಂದಿರವನ್ನು ಉದ್ಘಾಟನೆ ಮಾಡಿದ್ದರು. ಅಂದಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಮಭಕ್ತರು ಮಂದಿರಕ್ಕೆ ತೆರಳಿ ಶ್ರೀರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯಲ್ಲಿ ಬಾಲಿವುಡ್​ ಸ್ಟಾರ್ ನಟಿ.. ಸೀರೆಯುಟ್ಟು, ಮಗು ಎತ್ತಿಕೊಂಡು ರಾಮಲಲ್ಲಾ ದರ್ಶನ ಪಡೆದ ಪಿಗ್ಗಿ

https://newsfirstlive.com/wp-content/uploads/2024/03/PRIYANKA_CHOPRA.jpg

Load More