ಮದುವೆ ಸಂಭ್ರಮದಲ್ಲಿ ಪ್ರಿಯಾಂಕ ಚೋಪ್ರಾ.. ಪಿಂಕಿ ಡೈಮಂಡ್ ನೆಕ್ಲೇಸ್ ಬೆಲೆ ಎಷ್ಟು?

author-image
Gopal Kulkarni
Updated On
ಮದುವೆ ಸಂಭ್ರಮದಲ್ಲಿ ಪ್ರಿಯಾಂಕ ಚೋಪ್ರಾ.. ಪಿಂಕಿ ಡೈಮಂಡ್ ನೆಕ್ಲೇಸ್ ಬೆಲೆ ಎಷ್ಟು?
Advertisment
  • ಸಹೋದರನ ವಿವಾಹ ಸಂಭ್ರಮದಲ್ಲಿ ಮಿಂಚಿದ ಪ್ರಿಯಾಂಕ ಚೋಪ್ರಾ
  • ಇನ್​ಸ್ಟಾದಲ್ಲಿ ಫೋಟೋ ಪೋಸ್ಟ್, ಮನಸೆಳೆದ ಪಿಂಕಿ ಡೈಮಂಡ್ ನೆಕ್ಲೆಸ್​
  • ಪ್ರಿಯಾಂಕ ಹಾಕಿಕೊಂಡ ಡೈಮಂಡ್​ ನೆಕ್ಲೆಸ್ ಬೆಲೆ ಕೇಳಿದ್ರೆ ಶಾಕ್ ಪಕ್ಕಾ

ಪ್ರಿಯಾಂಕ ಚೋಪ್ರಾ ಸದ್ಯ ಸಹೋದರ ಸಿದ್ಧಾರ್ಥ್ ಚೋಪ್ರಾ ಮದುವೆ ಸಂಭ್ರಮದಲ್ಲಿದ್ದಾರೆ. ಸಿದ್ಧಾರ್ಥ್ ತಮ್ಮ ಬಾಲ್ಯದ ಗೆಳತಿ ನೀಲಮಾ ಉಪಾಧ್ಯಾಯ ಅವರ ಕೈ ಹಿಡಿಯುತ್ತಿದ್ದಾರೆ. ಪ್ರಿ ವೆಡ್ಡಿಂಗ್ ಸಂಭ್ರಮ ಈಗಾಗಲೇ ಕಳೆಗಟ್ಟಿದೆ. ಅದರಲ್ಲೂ ದೇಸಿ ಉಡುಗಡೆಯಲ್ಲಿ ಬರುವ ಹೆಣ್ಣು ಮಕ್ಕಳ ಸೌಂದರ್ಯವನ್ನು ಹೊಗಳು ಪದಗಳು ಬೇಕೆ? ಹಾಗೆ ಸಿಂಗಾರಗೊಂಡು ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಸಂಬಂಧಿಕರು.

ಅದರಲ್ಲೂ ಪ್ರಿಯಾಂಕ ಚೋಪ್ರಾ ತನ್ನ ವಿಶೇಷ ಸ್ಟೈಲ್​ಗಳಿಂದಲೇ ಗುರುತಿಸಿಕೊಂಡವರು. ಸಹೋದರನ ಮದುವೆಯಲ್ಲಿ ಅವರು ಇನ್ನೆಷ್ಟು ಚೆನ್ನಾಗಿ ಸಿಂಗಾರಗೊಂಡು ಬಂದಿರಬೇಡ. ನೋಡಲು ಎರಡು ಕಣ್ಣು ಸಾಲದಂತೆ ಪಿಂಕಿ ರೆಡಿಯಾಗಿ ಬಂದಿದ್ದರು. ರೋಮಾಂಚಕ ಮಿನುಗು ಮತ್ತು ಬೀಡ್​ವರ್ಕ್ ಇರುವ ಫ್ಲೊರಲಾ ಗೌನ್​ನಲ್ಲಿ ಮಿರಿ ಮಿರಿ ಮಿಂಚುತ್ತಿದ್ದರು. ಆದ್ರೆ ಇದೆಲ್ಲದಕ್ಕಿಂತ ಪಿಂಕಿ ಜನರನ್ನು ಸೆಳೆದಿದ್ದು ಅವರು ಕೊರಳಲ್ಲಿ ಹಾಕಿಕೊಂಡಿದ್ದ ವಜ್ರದ ನೆಕ್ಲೆಸ್​ನಿಂದ.

ಬೆಳಗ್ಗೆ ಹಳದಿ ಅಂದರೆ ಅರಿಶಿಣ ಶಾಸ್ತ್ರ ಮುಗಿದ ಬಳಿಕ ಸಂಜೆ ಎಲ್ಲರೂ ಪ್ರಿವೆಡ್ಡಿಂಗ್ ಕಾರ್ಯಕ್ರಮಕ್ಕೆ ಸೇರಿದ್ದರು. ಪಿಂಕಿ ಕೂಡ ಈಗಾಗಲೇ ಹೇಳಿದ ಡ್ರೆಸ್​ನಲ್ಲಿ ಬಂದಿದ್ದರು. ಭಾರತೀಯ ಸಂಪ್ರದಾಯ ಲುಕ್​ನಲ್ಲಿ ಮಿಂಚುತ್ತಿದ್ದ ಪಿಂಕಿ ಫ್ಲೊರಲಾ ಗೌನ್​ನಲ್ಲಿ ಕೊರಳಿಗೆ ಬ್ಲಗರಿ ಪಿಂಕ್​ ಗೋಲ್ಡ್ ಮತ್ತು ಡೈಮಂಡ್​ನ ನೆಕ್ಲೆಸ್ ಹಾಕಿಕೊಂಡಿದ್ದರು. ಈಗ ಅವರು ಧರಿಸಿಕೊಂಡು ಬಂದಿದ್ದ ನೆಕ್ಲೆಸ್​ ಟಾಕ್ ಆಫ್ ಟೌನ್ ಆಗಿದೆ. ಅದರ ಬೆಲೆಯ ಬಗ್ಗೆ ದೊಡ್ಡದಾಗಿ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ವೀರೇಂದ್ರ ಸೆಹ್ವಾಗ್​​ ಬಳಿ ಇದೆ ಭಾರೀ ದುಡ್ಡು.. ಎಷ್ಟು ಕೋಟಿ ಒಡೆಯ..?

publive-image

ಹಾಗಾದ್ರೆ ಪಿಂಕಿ ಧರಿಸಿದ್ದ ಬ್ಲಗರಿ ಪಿಂಕ್​ ಗೋಲ್ಡ್ ಮತ್ತು ಡೈಮಂಡ್​ ನಕ್ಲೆಸ್​ನ ಬೆಲೆ ಎಷ್ಟು ಅಂತೀರಾ ಕೇವಲ 10 ರಿಂದ 12 ಕೋಟಿ ರೂಪಾಯಿ ಎಂದು ಅಂದಾಜಿ ಮಾಡಲಾಗಿದೆ. ಇನ್ನು ಪಿಂಕಿ ಸರ್ಪೆಂಟಿ ವೈಪರ್ ಬ್ರಾಸ್ಲೆಟ್​ ಕೂಡ ಕೈಯಲ್ಲಿ ಧರಿಸಿದ್ದರು ಅದರ ಬೆಲೆ 10 ಲಕ್ಷ 60 ಸಾವಿರ ರೂಪಾಯಿ ಎನ್ನಲಾಗಿದೆ. ಇದು ಒಂದು ಸುತ್ತಿನ 18 ಕ್ಯಾರೆಟ್​ನ ವೈಟ್ ಗೋಲ್ಡ್​ನಿಂದ ಸಿದ್ಧಗೊಂಡಿದ್ದು ಎಂದು ಹೇಳಲಾಗಿದೆ.

ಅದರ ಜೊತೆಗೆ ವಜ್ರದಿಂದ ಅದನ್ನು ಅಲಂಕರಿಸಲಾಗಿರುತ್ತದೆ. ಇದರ ಬೆಲೆ 3 ಲಕ್ಷ 50 ಸಾವಿರ ಎಂದು ಮತ್ತೊಂದು ವೆಬ್​ಸೈಟ್ ಹೇಳಿದರೆ ಅಧಿಕೃತ ವೆಬ್​ಸೈಟ್​ನಲ್ಲಿ ನೋಡಿದಾಗ ಅದರ ಬೆಲೆ ಬರೋಬ್ಬರಿ 10 ಲಕ್ಷ 60 ಸಾವಿರ ರೂಪಾಯಿ ಎಂದು ಉಲ್ಲೇಖವಾಗಿದೆ.

ಇನ್ನು ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೂ ಮೊದಲು ಪ್ರಿಯಾಂಕ ಚೋಪ್ರಾ ಫೆಬ್ರವರಿ 5 ರಂದು ಅರಿಶಿಣ ಶಾಸ್ತ್ರದಲ್ಲಿಯೂ ಕೂಡ ಭಾಗಿಯಾಗಿದ್ದರು ಇಲ್ಲಿ ಹಳದಿ ಬಣ್ಣದ ಸ್ಲೀವಲೆಸ್​ ಶಾರ್ಟ್ ಖುರ್ತಾ ಮತ್ತು ಲೆಹಂಗಾದೊಂದಿಗೆ ಮಿಂಚಿದ ಪಿಂಕಿ ಚಂದಾಬಲಿಸ್​ ಇಯರ್​ ರಿಂಗ್ ಹಾಕಿಕೊಂಡಿಡದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment