Advertisment

ಪ್ರಿಯಾಂಕಾ ಗಾಂಧಿ ಆಸ್ತಿ ಕೇವಲ 12 ಕೋಟಿ ರೂಪಾಯಿ! ಪತಿ ರಾಬರ್ಟ್ ವಾದ್ರಾ ಸಂಪತ್ತು ಎಷ್ಟು ಗೊತ್ತಾ?

author-image
Gopal Kulkarni
Updated On
ಪ್ರಿಯಾಂಕಾ ಗಾಂಧಿ ಆಸ್ತಿ ಕೇವಲ 12 ಕೋಟಿ ರೂಪಾಯಿ! ಪತಿ ರಾಬರ್ಟ್ ವಾದ್ರಾ ಸಂಪತ್ತು ಎಷ್ಟು ಗೊತ್ತಾ?
Advertisment
  • ಮೊದಲ ಬಾರಿ ಚುನಾವಣೆ ಅಖಾಡಕ್ಕೆ ಇಳಿದ ಪ್ರಿಯಾಂಕಾ ಗಾಂಧಿ ವಾದ್ರಾ
  • ವಯನಾಡು ಕ್ಷೇತ್ರದ ಉಪಚುನಾವಣೆ ಅಖಾಡದಿಂದ ಪ್ರಿಯಾಂಕಾ ಸ್ಪರ್ಧೆ
  • ಪ್ರಿಯಾಂಕ ಬಳಿಯ ಆಸ್ತಿ ಎಷ್ಟು, ಅಫಿಡವಿಟ್​ನಲ್ಲಿ ಉಲ್ಲೇಖವಾಗಿರುವುದೇನು?

ಕಾಂಗ್ರೆಸ್ ಕಾರ್ಯಕರ್ತರ ಬಹುವರ್ಷದ ಬೇಡಿಕೆ ಹಾಗೂ ಕನಸು ಈಗ ನನಸಾಗಿದೆ. ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬರಬೇಕು ಎಂದು ಕೈ ಕಾರ್ಯಕರ್ತರು ದೇಶಾದ್ಯಂತ ಹಲವು ಬಾರಿ ಆಗ್ರಹ ಮಾಡಿದ್ದಿದೆ. 2019ರ ಲೋಕಸಭಾ ಚುನಾವಣೆಯಲ್ಲಿಯೇ ಪ್ರಿಯಾಂಕಾ ವಾದ್ರಾ ಗಾಂಧಿ ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ ಎಂಬ ಭರವಸೆಯಿತ್ತು. ಆದ್ರೆ ಅದು ಹುಸಿಯಾಗಿತ್ತು. 2024ರಲ್ಲಿಯೂ ಅದೇ ಭರವಸೆಯಲ್ಲಿ ಕೈ ನಾಯಕರು, ಕಾರ್ಯಕರ್ತರು ಕಾದಿದ್ದರು.

Advertisment

ಆದ್ರೆ ಪ್ರಿಯಾಂಕಾ ಯಾಕೋ ಮನಸ್ಸು ಮಾಡಲಿಲ್ಲ. ಈಗ ಅವರ ಸಹೋದರರ ಕ್ಷೇತ್ರವಾದ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಉಪಚುನಾವಣೆಯ ಅಖಾಡದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸದ್ಯ ಪ್ರಿಯಾಂಕಾ ಗಾಂಧಿ ಅಫಿಡವಿಟ್ ಸಲ್ಲಿಸಿದ್ದಾರೆ. ಅವರ ಅಫಿಡವಿಟ್ ಸಲ್ಲಿಕೆಯಾದ ಬಳಿಕ ಅವರ ಬಳಿ ಇರುವ ಆಸ್ತಿಯ ಮೌಲ್ಯವು ಚರ್ಚೆಗೆ ಬಂದಿದೆ.

ಇದನ್ನೂ ಓದಿ:VIDEO: ವಯನಾಡ್‌ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ; ಕಾಂಗ್ರೆಸ್‌ ಶಕ್ತಿ ಪ್ರದರ್ಶನ, ಸಿದ್ದು ಹವಾ ಹೇಗಿತ್ತು?

ಪ್ರಿಯಾಂಕಾ ಗಾಂಧಿ ವಾದ್ರಾ ಬಳಿ ಇರುವ ಆಸ್ತಿಯ ಮೌಲ್ಯದ ಬಗ್ಗೆ ಇಲ್ಲಿಯವರೆಗೂ ಯಾರಿಗೂ ಕೂಡ ಸ್ಪಷ್ಟ ಮಾಹಿತಿ ಇರಲಿಲ್ಲ. ಒಂದು ಕುತೂಹಲ ಒಂದು ಊಹೆಯಲ್ಲಿಯೇ ಅವರ ಆಸ್ತಿಯ ಬಗ್ಗೆ ಮಾತನಾಡಲಾಗುತ್ತಿತ್ತು. ಸದ್ಯ ಪ್ರಿಯಾಂಕಾ ಗಾಂಧಿ ವಾದ್ರಾ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಅವರ ಬಳಿ ಒಟ್ಟು 12 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದೆ. ಅವರ ಪತಿ ರಾಬರ್ಟ್ ವಾದ್ರಾ ಅವರಿಗಿಂತ ಐದು ಪಟ್ಟು ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ರಾಬರ್ಟ್ ಬಳಿ ಇರುವ ಆಸ್ತಿಯ ಮೌಲ್ಯ ಒಟ್ಟು 60 ಕೋಟಿ ರೂಪಾಯಿ.

Advertisment

ಇದನ್ನೂ ಓದಿ:ಜಸ್ಟ್‌ 50 ಪೈಸೆ ಹೆಚ್ಚು ವಸೂಲಿ ಮಾಡಿದ್ದಕ್ಕೆ ಅಂಚೆ ಇಲಾಖೆಗೆ ₹15 ಸಾವಿರ ದಂಡ; ಅಸಲಿಗೆ ಆಗಿದ್ದೇನು?

ಪ್ರಿಯಾಂಕಾ ಗಾಂಧಿ ವಾದ್ರಾ ಬಳಿ ಇರುವ ಅತಿದೊಡ್ಡ ಮೌಲ್ಯದ ಆಸ್ತಿ ಅಂದ್ರೆ ಅದು ಅವರು ಶಿಮ್ಲಾದಲ್ಲಿ ಹೊಂದಿರುವ 12 ಸಾವಿರ ಸ್ಕ್ವೇರ್​ಫೀಟ್​ನ ಫಾರ್ಮ್​ಹೌಸ್. ಅದರ ಮೌಲ್ಯ ಸದ್ಯ 5.64 ಕೋಟಿ ರೂಪಾಯಿ ಎಂದು ಅಫಿಡವಿಟ್​ನಲ್ಲಿ ಉಲ್ಲೇಖಿಸಲಾಗಿದೆ.ಅವರ ಬಳಿ 8 ಲಕ್ಷ ರೂಪಾಯಿ ಮೌಲ್ಯದ ಹೊಂಡಾ ಸಿಆರ್​ವಿ ಕಾರ್ ಇದೆ. ಅದು ಕೂಡ ಪತಿಯಿಂದ ಬಂದ ಗಿಫ್ಟ್ ಎಂದು ಅಫಿಡವಿಟ್​ನಲ್ಲಿ ಉಲ್ಲೇಖವಾಗಿದೆ. ಅದರ ಜೊತೆಗೆ ಪ್ರಿಯಾಂಕಾ2.24 ಕೋಟಿ ರೂಪಾಯಿಯ ಮ್ಯೂಚುವಲ್ ಫಂಡ್ ಹೊಂದಿದ್ದಾರೆ. 1.6 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಮೆಹ್ರೋಲಿಯಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿ ಜೊತೆ 2.10 ಕೋಟಿ ರೂಪಾಯಿ ಮೌಲ್ಯದ ಕೃಷಿ ಜಮೀನನ್ನು ಹೊಂದಿದ್ದಾರೆ.

ಇನ್ನು ಪ್ರಿಯಾಂಕಾ ಗಾಂಧಿಗೆ ಹೋಲಿಸಿದರೆ ಅವರ ಪತಿ ರಾಬರ್ಟ್​ ವಾದ್ರಾ ಬಳಿ ಐದು ಪಟ್ಟು ಆಸ್ತಿ ಹೆಚ್ಚು ಇದೆ. 53 ಲಕ್ಷ ರೂಪಾಯಿ ಮೌಲ್ಯದ ಲ್ಯಾಂಡ್​ ಕ್ರೂಸರ್ ಕಾರ್ ರಾಬರ್ಟ್ ಬಳಿ ಇದೆ. 1.5 ಲಕ್ಷ ರೂಪಾಯಿಯ ಮಿನಿಕೂಪರ್, 4.22 ಲಕ್ಷ ರೂಪಾಯಿಯ ಸುಜಕಿ ಮೋಟಾರ್ ಸೈಕಲ್, ಅನೇಕ ಸಂಸ್ಥೆಗಳಲ್ಲಿ ಪಾಲುದಾರಿಕೆ ಹೊಂದಿರುವ ರಾಬರ್ಟ್ ವಾದ್ರಾ ಬ್ಲ್ಯೂ ಬ್ರೀಜ್ ಟ್ರೇಡಿಂಗ್​ ಎಲ್​ಎಲ್​ಪಿಯಲ್ಲಿ 35.5 ಕೋಟಿ ರೂಪಾಯಿಯ ಪಾಲುದಾರಿಕೆ ಹೊಂದಿದ್ದಾರೆ. ನಾರ್ಥ್​ ಇಂಡಿಯಾ ಐಟಿ ಪಾರ್ಕ್, ಸ್ಕೈ ಲೈಟ್​ ಹಾಸ್ಪಿಟಾಲಿಟಿಯಲ್ಲಿ 31.93 ಕೋಟಿ ರೂಪಾಯಿಯ ಪಾಲುದಾರಿಕೆಯನ್ನು ಹೊಂದಿದ್ದಾರೆ. ಗುರುಗ್ರಾಮ್​ನಲ್ಲಿ 27.64 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೂ ಕೂಡ ವಾದ್ರಾ ಹೆಸರಿನಲ್ಲಿದೆ. ಅವರು ಈ ಹಿಂದೆ ಈ ಆಸ್ತಿಗಳನ್ನು ಸುಮಾರು 2.78 ಕೋಟಿಗೆ ಖರೀದಿಸಿದ್ದರು. ಅವುಗಳ ಅಭಿವೃದ್ಧಿಗಾಗಿ 3.62 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ ಎಂದು ಅಫಿಡವಿಟ್​ನಲ್ಲಿ ಉಲ್ಲೇಖವಾಗಿದೆ. ಅದರ ಜೊತೆಗೆ 10 ಕೋಟಿ ರೂಪಾಯಿ ಸಾಲವನ್ನು ಕೂಡ ಹೊಂದಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment