newsfirstkannada.com

ಹಾಸನ ಅಶ್ಲೀಲ ವಿಡಿಯೋ ಕೇಸ್​​.. ಪ್ರಜ್ವಲ್​ ರೇವಣ್ಣ ಬಗ್ಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

Share :

Published April 29, 2024 at 8:46pm

    ಕಳೆದ ಎರಡು ದಿನಗಳಿಂದ ಹಾಸನ ಅಶ್ಲೀಲ ವಿಡಿಯೋ ಕೇಸ್​​ ಭಾರೀ ಸದ್ದು

    ಮಾಜಿ ಸಚಿವ ಹೆಚ್​​.ಡಿ ರೇವಣ್ಣ, ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್..!

    ಈ ಕೇಸ್​ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಏನಂದ್ರು?

ಕಳೆದ ಎರಡು ದಿನಗಳಿಂದ ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಹಾಸನ ಅಶ್ಲೀಲ ವಿಡಿಯೋ ಕೇಸ್​​ನಲ್ಲಿ ಮಾಜಿ ಸಚಿವ ಹೆಚ್​​.ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​​​​ ಸರ್ಕಾರ ಕೇಸ್​ ತನಿಖೆಗಾಗಿ ಎಸ್​ಐಟಿ ರಚನೆ ಮಾಡಿ ಆದೇಶಿಸಿದೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾತಾಡಿದ್ದಾರೆ.

ನೂರಾರು ಹೆಣ್ಣುಮಕ್ಕಳ ಜೀವನ ಹಾಳು ಮಾಡಿದ ವ್ಯಕ್ತಿಯ ಭುಜದ ಮೇಲೆ ಪ್ರಧಾನಿ ಮೋದಿ ಕೈಯಿಟ್ಟು ಫೋಟೋಗೆ ಫೋಸ್ ನೀಡಿದ್ರು. 10 ದಿನಗಳ ಹಿಂದೆ ಆ ನಾಯಕನನ್ನೇ ಮೋದಿ ಹಾಡಿ ಹೊಗಳಿದ್ರು. ಈಗ ಅದೇ ನಾಯಕ ದೇಶದಿಂದ ಪರಾರಿಯಾಗಿದ್ದಾನೆ. ಅವನ ಘೋರ ಅಪರಾಧಗಳ ಬಗ್ಗೆ ಕೇಳಿದ್ರೆ ಹೃದಯ ಕಂಪಿಸುತ್ತೆ. ಅವನು ನೂರಾರು ಮಹಿಳೆಯರ ಬದುಕನ್ನೇ ಹಾಳು ಮಾಡಿದ್ದಾನೆ. ಮೋದಿಜಿ ಇನ್ನೂ ಸುಮ್ಮನಿರುತ್ತೀರಾ? ಎಂದು ಪ್ರಿಯಾಂಕಾ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.

ಹಾಸನವಷ್ಟೇ ಅಲ್ಲ ರಾಜ್ಯದ ಗಲ್ಲಿ ಗಲ್ಲಿಯಲ್ಲೂ ಅಶ್ಲೀಲ ವಿಡಿಯೋ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ನಾಗರಿಕ ಸಮಾಜವೇ ಆತಂಕ ಪಡುವ ಸಂಗತಿಗೆ ಇಡೀ ಕರುನಾಡೇ ತಲೆತಗ್ಗಿಸಿದೆ. ಜೆಡಿಎಸ್ ಸಂಸದನ ವಿರುದ್ಧ ಕೇಳಿಬಂದಿರೋ ಆರೋಪ ದೋಸ್ತಿಗಳ ಸುತ್ತಲೂ ಸುತ್ತಿಕೊಂಡಿದೆ. ಅಶ್ಲೀಲ ಹಣೆಪಟ್ಟಿಯನ್ನ ಮೋದಿಗೆ ಕಟ್ಟಲು ಕೈ ಪಾಳಯ ಮುಂದಾಗಿದೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್.. ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಡಿಸಿ ಸಿ. ಸತ್ಯಭಾಮ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಅಶ್ಲೀಲ ವಿಡಿಯೋ ಕೇಸ್​​.. ಪ್ರಜ್ವಲ್​ ರೇವಣ್ಣ ಬಗ್ಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

https://newsfirstlive.com/wp-content/uploads/2024/04/Priyanka-Gandhi_Prajwal.jpg

Load More