ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಶತಕ.. ಈ ಯಂಗ್ ಬ್ಯಾಟರ್​ನ ಟ್ರ್ಯಾಕ್​ ರೆಕಾರ್ಡ್​ ಹೇಗಿದೆ ಎಂದ್ರೆ..?

author-image
Bheemappa
Updated On
ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಶತಕ.. ಈ ಯಂಗ್ ಬ್ಯಾಟರ್​ನ ಟ್ರ್ಯಾಕ್​ ರೆಕಾರ್ಡ್​ ಹೇಗಿದೆ ಎಂದ್ರೆ..?
Advertisment
  • DPL​ನಲ್ಲಿ ವಿಧ್ವಂಸ.. ಆರ್ಯ 1 ಓವರ್​ನಲ್ಲಿ ಎಷ್ಟು ಸಿಕ್ಸರ್ ಸಿಡಿಸಿದ್ದ?
  • ಒಮ್ಮೆ ಅನ್​ಸೋಲ್ಡ್​ ಪ್ಲೇಯರ್, ಈಗ 2025ರ ಐಪಿಎಲ್ ಸೆನ್ಸೇಷನ್
  • ಇಂಡಿಯನ್ ಕ್ರಿಕೆಟ್​ನ ನಯಾ ಸೂಪರ್ ಸ್ಟಾರ್ ಪ್ರಿಯಾಂಶ್ ಆರ್ಯ

ಪ್ರಿಯಾಂಶ್​.. ಪ್ರಿಯಾಂಶ್.. ಸದ್ಯ ಐಪಿಎಲ್ ಅಂಗಳದ ಹಾಟ್ ಟಾಪಿಕ್ ಹೆಸರೇ ಈ ಪ್ರಿಯಾಂಶ್ ಆರ್ಯ. ಈತನ ಸೆನ್ಸೇಷನಲ್​ ಸೆಂಚುರಿ ನೋಡಿ ಬಹುತೇಕರು, ಟೀಮ್ ಇಂಡಿಯಾದ ಫ್ಯೂಚರ್ ಅಂತಿದ್ದಾರೆ. ಆರ್​ಸಿಬಿ ಫ್ಯಾನ್ಸ್​ ಮಾತ್ರ, ಆರ್​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಬೇಸರಗೊಂಡಿದ್ದಾರೆ. ಆರ್​ಸಿಬಿಗೂ ಪಂಜಾಬ್​​ನ ಪ್ರಿಯಾಂಶ್​ಗೂ ಏನ್​ ಸಂಬಂಧ?.

ಪಂಜಾಬ್​ ಕಿಂಗ್ಸ್​​​ ಪ್ರಿಯಾಂಶ್ ಆರ್ಯ, ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್​ನ ಸೆನ್ಸೇಷನ್​. ಚೆನ್ನೈ ಸೂಪರ್ ಕಿಂಗ್ಸ್​ ಎದುರಿನ ಒಂದು ಪಂದ್ಯದಲ್ಲಿ ಆಡಿದ ಆ ಒಂದು ಆತ್ಯದ್ಭುತ ಇನ್ನಿಂಗ್ಸ್​, ಒಂದು ಸೆನ್ಸೇಷನಲ್​ ಶತಕ, ಯುವ ಆಟಗಾರನನ್ನ ಇಂದು ಇಂಡಿಯನ್ ಕ್ರಿಕೆಟ್​ನ ನಯಾ ಸೂಪರ್ ಸ್ಟಾರ್ ಮಾಡಿದೆ. ಭಾರತ ತಂಡದ ಭವಿಷ್ಯದ ತಾರೆಯ ಉಗಮವಾಗಿದೆ.

publive-image

ಶರವೇಗದ ಶತಕಕ್ಕೆ ಫ್ಯಾನ್ಸ್ ಬಹುಪರಾಕ್.!

ಚೆನ್ನೈ ಎದುರು ಪ್ರಿಯಾಂಶ್, ಸಾಲಿಡ್ ಬ್ಯಾಟಿಂಗ್ ನಡೆಸಿದರು. ಸ್ಟಾರ್ ಬ್ಯಾಟರ್​ಗಳೇ ಪೆವಿಲಿಯನ್ ಪರೇಡ್ ನಡೆಸ್ತಿದ್ರೆ, ಮತ್ತೊಂದು ತುದಿಯಲ್ಲಿದ್ದ ಯಂಗ್​ ಬ್ಯಾಟರ್​ ಏಕಾಂಗಿಯಾಗಿ ಬೌಲರ್​ಗಳ ಚೆಂಡಾಡಿದ್ರು. ಈತನ ಫಿಯರ್​ಲೆಸ್​ ಆಟ ಹೇಗಿತ್ತು ಅಂದ್ರೆ, ಅದ್ರಲ್ಲೂ ಮತೀಶಾ ಪತಿರಣರಂಥ ಎಫೆಕ್ಟೀವ್​​​​​​​​​ ಬೌಲರ್​ನೇ ಚಿಂದಿ ಉಡಾಯಿಸಿದರು. 42 ಎಸೆತಗಳಲ್ಲೇ 7 ಬೌಂಡರಿ, 9 ಸಿಕ್ಸರ್ ಒಳಗೊಂಡ 103 ರನ್ ಚಚ್ಚಿದರು.

10 ಮ್ಯಾಚ್.. 608 ರನ್​.. 3.8 ಕೋಟಿಗೆ ಖರೀದಿ..!

ಐಪಿಎಲ್​ ಟೂರ್ನಿಯಲ್ಲಿ ಆಡಿದ 4ನೇ ಪಂದ್ಯದಲ್ಲೇ ಶರವೇಗದ ಶತಕ ಸಿಡಿಸಿರುವ ಪ್ರಿಯಾಂಶ್ ಆರ್ಯ, ಇವತ್ತು ಐಪಿಎಲ್​ ಸೆನ್ಸೇಷನ್ ಆಗಿದ್ದಾರೆ. ಈ ಪ್ರಿಯಾಂಶ್ ಆರ್ಯ, 2024ರ ಐಪಿಎಲ್ ಹರಾಜಿನಲ್ಲಿ ಅನ್​​ಸೋಲ್ಡ್​ ಆಗಿದ್ರು. ಆವತ್ತು ಯಾವೊಂದು ಫ್ರಾಂಚೈಸಿ ಕೂಡ ಕನಿಷ್ಠ ಬೇಸ್ ಪ್ರೈಸ್ ನೀಡಿಯೂ ಖರೀದಿಸಲು ಮುಂದಾಗಿರಲಿಲ್ಲ.

ಆ ಬಳಿಕ 2024ರ ಆಗಸ್ಟ್​ನಲ್ಲಿ ಚೊಚ್ಚಲ ಡೆಲ್ಲಿ ಪ್ರೀಮಿಯರ್ ಲೀಗ್ ನಡೆಯಿತು. ಈ ಟೂರ್ನಿಯಲ್ಲಿ ಸೌತ್​ ಡೆಲ್ಲಿ ಸೂಪರ್​ ಸ್ಟಾರ್ಸ್ ಪರ ಆಡಿದ್ದ ಪ್ರಿಯಾಂಶ್, ಒಂದೇ ಓವರ್​ನಲ್ಲಿ ಆರು ಸಿಕ್ಸರ್ ಸಿಡಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಟೂರ್ನಿಯುದ್ದಕ್ಕೂ ಅದ್ಭುತ ಆಟವಾಡಿದ್ದ ಪ್ರಿಯಾಂಶ್, 10 ಪಂದ್ಯಗಳಿಂದ 198.69ರ ಸ್ಟ್ರೈಕ್​ರೇಟ್​ನಲ್ಲಿ 608 ರನ್ ಗಳಿಸಿದ್ದರು. ಈ ಪೈಕಿ 2 ಶತಕ, 4 ಅರ್ಧಶತಕ ಸಿಡಿಸಿದ್ದ ಪ್ರಿಯಾಂಶ್, ಬರೋಬ್ಬರಿ 46 ಬೌಂಡರಿ, 43 ಸಿಕ್ಸರ್ ಚಚ್ಚಿದ್ದರು.

ಇದಿಷ್ಟೇ ಅಲ್ಲ, 2024ರ ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲೂ ಡೆಲ್ಲಿ ಪರ ಅದ್ಬುತ ಪ್ರದರ್ಶನ ನೀಡಿದ್ದ ಪ್ರಿಯಾಂಶ್, 9 ಪಂದ್ಯಗಳಿಂದ 176.63ರ ಸ್ಟ್ರೈಕ್​ರೇಟ್​ನಲ್ಲಿ 325 ರನ್ ಸಿಡಿಸಿದ್ದರು. ಈ ಆಟ ನೋಡಿದ ಬಳಿಕ ಐಪಿಎಲ್​ ಫ್ರಾಂಚೈಸಿಗಳು ಈ ಬಾರಿಯ ಹರಾಜಿನಲ್ಲಿ ಖರೀದಿಗೆ ಪೈಪೋಟಿ ನಡೆಸಿದ್ವು. ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್​ ಕಿಂಗ್ಸ್​ ಬಿಡ್ಡಿಂಗ್​ ವಾರ್​ ನಡೆಸಿದ್ವು. ಪ್ರಿಯಾಂಶ್​ ಕೂಡ ಆರ್​​ಸಿಬಿ ಆಡಬೇಕು ಅನ್ನೋದೆ ನನ್ನಾಸೆ ಅಂತಾ ಹೇಳಿಕೊಂಡಿದ್ರು. ಆರಂಭದಲ್ಲಿ ಬಿಡ್​ ಮಾಡಿದ ಆರ್​ಸಿಬಿ ಬಳಿಕ ಸುಮ್ಮನಾಯ್ತು. ಅಂತಿಮವಾಗಿ 3.80 ಕೋಟಿ ಮೊತ್ತಕ್ಕೆ ಪಂಜಾಬ್ ಖರೀದಿಸಿತು.

ಇದನ್ನೂ ಓದಿ:ತವರಲ್ಲಿ ಕ್ಯಾಪ್ಟನ್​ ರಜತ್​​ಗೆ ಪ್ರತಿಷ್ಠೆಯ ಪಂದ್ಯ.. ಡೆಲ್ಲಿ ಗೆಲುವಿನ ದಂಡಯಾತ್ರೆಗೆ ಬ್ರೇಕ್ ಹಾಕುತ್ತಾ RCB?

publive-image

ಗಂಭೀರ್​ಗೂ ಪ್ರಿಯಾಂಶ್​ ಆರ್ಯಗೂ ಇದೆ ವಿಶೇಷ ನಂಟು..!

ಪ್ರಿಯಾಂಶ್ ಆರ್ಯಗೂ ಟೀಮ್​ ಇಂಡಿಯಾ ಹೆಡ್​ ಕೋಚ್​ ಗೌತಮ್ ಗಂಭೀರ್​ಗೂ ವಿಶೇಷ ನಂಟಿದೆ. ಈತ ಪಳಗಿದ್ದು ಗಂಭೀರ್​​​ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್​ ಗುರುಕುಲದಲ್ಲೇ. ಈ ಅಕಾಡೆಮಿಯ ನೆಟ್ಸ್​ನಲ್ಲಿ ಆಗ ಗೌತಮ್​ ಗಂಭೀರ್​ ಕೂಡ ಅಭ್ಯಾಸ ನಡೆಸ್ತಿದ್ರು. ಯಾವಾಗ್ಲೂ ಗಂಭೀರ್​ ಆಭ್ಯಾಸವನ್ನ ಕುತೂಹಲದಿಂದ ಪ್ರಿಯಾಂಶ್​ ಗಮನಿಸ್ತಾ ಇದ್ರಂತೆ. ಇದ್ರಿಂದಿಲೇ ಬ್ಯಾಟಿಂಗ್​ ಟೆಕ್ನಿಕ್​ನಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ರಂತೆ. ಗಂಭೀರ್​ ಕೂಡ ಆಗಾಗ ಪ್ರಿಯಾಂಶ್​ಗೆ ಬ್ಯಾಟಿಂಗ್​ ಪಾಠ ಮಾಡಿದ್ದಾರೆ.

2020ರ ಅಂಡರ್-19 ವಿಶ್ವಕಪ್​ನಲ್ಲಿ ಪ್ರಿಯಾಂಶ್​ ಆರ್ಯ, ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸುವ ಕನಸು ಕಂಡಿದ್ದ. ಆಗ ಚಾನ್ಸ್​ ಸಿಗದೇ ಕನಸು ಭಗ್ನವಾಗಿತ್ತು. ಆದ್ರೆ, ಪ್ರಯತ್ನ ನಿಲ್ಲಿಸದ ಪ್ರಿಯಾಂಶ್, ಸಿಕ್ಕ ಅವಕಾಶಗಳನ್ನೇ ಬಳಸಿಕೊಂಡು ಹಂತ ಹಂತವಾಗಿ ಬೆಳೆದು ನಿಂತಿದ್ದಾರೆ. ಇದೀಗ ಐಪಿಎಲ್​ನಲ್ಲಿ ಸ್ಫೋಟಕ ಶತಕ ಸಿಡಿಸಿದ ಭವಿಷ್ಯದ ತಾರೆ ಎನಿಸಿದ್ದಾರೆ. ಇದೇ ಆಟವನ್ನ ಪ್ರಿಯಾಂಶ್​ ಮುಂದುವರೆಸಲಿ. ಶೀಘ್ರ ಟೀಮ್​ ಇಂಡಿಯಾ ಪರ ಆಡಲಿ ಅನ್ನೋದು ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment