/newsfirstlive-kannada/media/post_attachments/wp-content/uploads/2025/04/Priyansh_Arya-3.jpg)
ಓಪನರ್ಗಳಾದ ಪ್ರಿಯಾಂಶ್ ಆರ್ಯ ಹಾಗೂ ಪ್ರಭಾಸಿಮ್ರನ್ ಅವರ ಭರ್ಜರಿ ಅರ್ಧಶತಕದಿಂದ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಪಂಜಾಬ್ ಕಿಂಗ್ಸ್ 202 ರನ್ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ತೆಗೆದುಕೊಂಡರು. ಪಂಜಾಬ್ ಪರ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಪ್ರಿಯಾಂಶ್ ಆರ್ಯ ಹಾಗೂ ಪ್ರಭಾಸಿಮ್ರನ್ ಸಿಂಗ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೆಕೆಆರ್ ಬೌಲರ್ಗಳನ್ನು ಎಡೆಬಿಡದೇ ಕಾಡಿದ ಈ ಜೋಡಿಯಾಟ ಮೊದಲ ವಿಕೆಟ್ಗೆ 120 ರನ್ಗಳನ್ನ ಗಳಿಸಿದರು.
ಇದನ್ನೂ ಓದಿ:ಪೃಥ್ವಿ ಶಾ ಕ್ರಿಕೆಟ್ನಿಂದ ದೂರ ದೂರ.. ಗರ್ಲ್ಫ್ರೆಂಡ್ಗೆ ತೀರ ಸನಿಹ.. ಸನಿಹ!
ಓಪನರ್ ಪ್ರಿಯಾಂಶ್ ಆರ್ಯ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿ ಕೆಕೆಆರ್ ತಂಡಕ್ಕೆ ಕಾಡಿದರು. ಪಂದ್ಯದಲ್ಲಿ ಒಟ್ಟು 35 ಎಸೆತಗಳನ್ನು ಎದುರಿಸಿದ ಸ್ಫೋಟಕ ಬ್ಯಾಟರ್ 8 ಬೌಂಡರಿ, 4 ಅಮೋಘವಾದ ಸಿಕ್ಸರ್ಗಳಿಂದ 69 ರನ್ಗಳ ಕಾಣಿಕೆಯನ್ನ ಪಂಜಾಬ್ ತಂಡಕ್ಕೆ ನೀಡಿದರು. ರಸೆಲ್ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟು ಹೊರ ನಡೆದರು.
ಪ್ರಿಯಾಂಶ್ ಆರ್ಯ ಜೊತೆ ಕ್ರೀಸ್ಗೆ ಆಗಮಿಸಿದ್ದ ಓಪನರ್ ಪ್ರಭಾಸಿಮ್ರನ್ ಕೂಡ ಕೆಕೆಆರ್ ಬೌಲರ್ಗಳ ವಿರುದ್ಧ ಗುಡುಗಿದರು. ಆರ್ಯಗಿಂತ ತುಸು ಜೋರಾಗಿಯೇ ಬ್ಯಾಟ್ ಬೀಸಿದ ಪ್ರಭಾಸಿಮ್ರನ್ ಸ್ಫೋಟಕ 83 ರನ್ಗಳನ್ನು ಬಾರಿಸಿದರು. ಕೇವಲ 49 ಬಾಲ್ಗಳನ್ನು ಆಡಿದ ಪ್ರಭಾಸಿಮ್ರನ್ 6 ಬೌಂಡರಿ 6 ಆಕಾಶದೆತ್ತರ ಸಿಕ್ಸರ್ಗಳನ್ನು ಸಿಡಿಸಿದರು. ಜೋಶ್ ಇಂಗ್ಲಿಷ್ 11 ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅಜೇಯ 25 ರನ್ಗಳಿಂದ ಪಂಜಾಬ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 202 ರನ್ಗಳ ಗುರಿ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ