/newsfirstlive-kannada/media/post_attachments/wp-content/uploads/2025/04/Priyansh-Arya.jpg)
ಮುಲ್ಲಾಂಪುರ ಸ್ಟೇಡಿಯಂನಲ್ಲಿ ನಿನ್ನೆ ಯುವ ಆಟಗಾರನ ಅಬ್ಬರ ಜೋರಾಗಿತ್ತು. ಪಂಜಾಬ್ ಪಡೆಯ ಸೂಪರ್ ಸ್ಟಾರ್ಗಳೆಲ್ಲಾ ತಲೆ ಕೆಳಗಾಕಿ ಪೆವಿಲಿಯನ್ ಪರೇಡ್ ನಡೆಸಿದ್ರೆ ರನ್ಭೂಮಿ ಯುವ ಆಟಗಾರ ದಿಟ್ಟ ಹೋರಾಟ ನಡೆಸಿದೆ. 24 ವರ್ಷ ಯುವ ಆಟಗಾರನ ಬ್ಯಾಟಿಂಗ್ಗೆ ಚೆನ್ನೈನ ಲೆಜೆಂಡರಿ ಬೌಲರ್ಗಳು ಕಂಗಾಲಾದ್ರು.
ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಬ್ಯಾಟ್ಸ್ಮನ್ಗಳು ಕೈಕೊಟ್ರು. ಒಬ್ಬರ ಹಿಂದೊಬ್ಬರಂತೆ ಪಂಜಾಬ್ ಪಡೆಯ ಕಲಿಗಳು ಪರೇಡ್ ನಡೆಸಿದ್ರು. ಪ್ರಭ್ಸಿಮ್ರನ್ ಸಿಂಗ್ಯಿಂದ ಹಿಡಿದು ಮ್ಯಾಕ್ಸ್ವೆಲ್ವರೆಗೆ ಅಗ್ರ ಕ್ರಮಾಂಕದ ಬ್ಯಾಟರ್ಸ್ ಸಿಂಗಲ್ ಡಿಜಿಟ್ ಗಡಿ ದಾಟದೇ ಡಗೌಟ್ ಸೇರಿದ್ರು.
ಇದನ್ನೂ ಓದಿ: ಹೀನಾಯ ಸ್ಥಿತಿಗೆ ತಲುಪಿದ ಚೆನ್ನೈ ಸೂಪರ್ ಕಿಂಗ್ಸ್.. ಫಿನಿಷರ್ ಪಾತ್ರ ನಿರ್ವಹಿಸುವಲ್ಲಿ ಧೋನಿ ಮತ್ತೆ ಫೇಲ್..!
ಒಂದೆಡೆ ತಂಡದ ಪ್ರಮುಖ ಬ್ಯಾಟರ್ಸ್ ಅಲ್ಪ ಮೊತ್ತಕ್ಕೆ ಔಟಾದ್ರೆ ಯುವ ಪ್ರಿಯಾಂಶ್ ಆರ್ಯ ಸಿಡಿದೆದ್ರು. ಮುಲ್ಲಾಂಪುರ ಗ್ರೌಂಡ್ನಲ್ಲಿ ಬೌಲರ್ಗಳ ಬೆಂಡೆತ್ತಿದ ಪ್ರಿಶಾಂಯ್ ಬೌಂಡರಿ-ಸಿಕ್ಸರ್ಗಳಲ್ಲೇ ರನ್ ಡೀಲ್ ಮಾಡಿದ್ರು. ಸಿಕ್ಕ ಅದೃಷ್ಟದ ಅವಕಾಶವನ್ನ ಎರಡೂ ಕೈಗಳಲ್ಲಿ ಬಾಚಿಕೊಂಡ ಪ್ರಿಯಾಂಶ್ ಜಸ್ಟ್ 39 ಎಸೆತಕ್ಕೆ ಸೆಂಚುರಿ ಸಿಡಿಸಿದ್ರು. ಸೆಂಚುರಿ ಬೆನ್ನಲ್ಲೇ ಪ್ರಿಯಾಂಶ್ ಆರ್ಯ ಔಟಾದ್ರೆ ಆ ಬಳಿಕ ಶಶಾಂಕ್ ಸಿಂಗ್ ಅಬ್ಬರ ಮುಂದುವರೆಸಿದ್ರು. 2 ಬೌಂಡರಿ, 3 ಸಿಕ್ಸರ್ ಸಿಡಿಸಿದ ಶಶಾಂಕ್ 36 ಎಸೆತಕ್ಕೆ ಅಜೇಯ 52 ರನ್ ಸಿಡಿಸಿದ್ರು.
ಅಂತಿಮ ಹಂತದಲ್ಲಿ ಬಿರುಸಿನ ಆಟವಾಡಿದ ಮಾರ್ಕೋ ಯಾನ್ಸೆನ್ 19 ಎಸೆತಕ್ಕೆ 34 ರನ್ ಸಿಡಿಸಿದ್ರು. ಅಂತಿಮವಾಗಿ 20 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್ 219 ರನ್ಗಳ ಬಿಗ್ ಸ್ಕೋರ್ ಕಲೆಹಾಕಿತು. 220 ರನ್ಗಳ ಬಿಗ್ ಟಾರ್ಗೆಟ್ ಬೆನ್ನ್ತತ್ತಿದ ಚೆನ್ನೈ ಸೂಪರ್ ಕಿಂಗ್ಸ್ಗೆ ಉತ್ತಮ ಆರಂಭ ಸಿಗ್ತು. ರಚಿನ್ ರವಿಂದ್ರ, ಡಿವೊನ್ ಕಾನ್ವೆ ಪವರ್ ಪ್ಲೇನಲ್ಲಿ ಅಬ್ಬರಿಸಿದ್ರು. ಪವರ್ ಪ್ಲೇ ಅಂತ್ಯದ ಬೆನ್ನಲ್ಲೆ ರಚಿನ್ ರವೀಂದ್ರ ಎಲ್ಬಿ ಬಲೆಗೆ ಬಿದ್ರು. ಬಳಿಕ ಕಣಕ್ಕಿಳಿದ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ 1 ರನ್ಗಳಿಸುವಷ್ಟರಲ್ಲಿ ಸುಸ್ತಾದ್ರು.
ಡಿವೋನ್ ಕಾನ್ವೆ, ಶಿವಂ ದುಬೆ 4 ವಿಕೆಟ್ಗೆ 89 ರನ್ಗಳಿಸಿದ್ರು. 27 ಎಸೆತಗಳಲ್ಲೇ ಶಿವಂ ದುವೆ 42 ರನ್ ಸಿಡಿಸಿದ್ರು. ಸಾಲಿಡ್ ಆಟವಾಡ್ತಿದ್ದ ದುಬೆ, ಲಾಕಿ ಫರ್ಗೂಸನ್ ಎಸೆದ ಸ್ಲೋವರ್ ಎಸೆತಕ್ಕೆ ಕ್ಲೀನ್ಬೋಲ್ಡ್ ಆದ್ರು. 49 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿದ್ದ ಡಿವೋನ್ ಕಾನ್ವೆ 69 ರನ್ಗಳಿಸಿದ್ದ ವೇಳೆ ರಿಟೈರ್ಡ್ ಔಟ್ ಆದ್ರು.
ಇದನ್ನೂ ಓದಿ: ಪಾಂಡ್ಯಗೆ ಮತ್ತೊಂದು ಸೋಲಿನ ನೋವು.. ಸೋತ ಬೆನ್ನಲ್ಲೇ ಹೇಳಿದ್ದೇನು..?
5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ 225ರ ಸ್ಟ್ರೈಕ್ರೇಟ್ನಲ್ಲಿ ಅಬ್ಬರಿಸಿದ್ರು. 3 ಸಿಕ್ಸರ್, 1 ಬೌಂಡರಿ ಸಿಡಿಸಿ ಧೋನಿ ಮಿಂಚಿದ್ರು. ಆದ್ರೆ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದ್ರು. 27 ರನ್ಗಳಿಸಿ ಧೋನಿ ಔಟಾದ್ರು. 20 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ 201 ರನ್ಗಳಿಸಲಷ್ಟೇ ಶಕ್ತವಾಯ್ತು. ಪಂಜಾಬ್ ತಂಡ 18 ರನ್ಗಳ ಜಯ ಸಾಧಿಸಿದ್ರೆ, ಚೆನ್ನೈ ತಂಡ ಸತತ 4ನೇ ಸೋಲಿಗೆ ಶರಣಾಯ್ತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್