ಮುಂಬೈಗೆ ಮಣ್ಣು ಮುಕ್ಕಿಸಿದ ಪಂಜಾಬ್ ಕಿಂಗ್ಸ್​, ಜಯಭೇರಿ.. IPL ಪಾಯಿಂಟ್​ ಟೇಬಲ್​ನಲ್ಲಿ ಬದಲಾವಣೆ!

author-image
Bheemappa
Updated On
ಮುಂಬೈಗೆ ಮಣ್ಣು ಮುಕ್ಕಿಸಿದ ಪಂಜಾಬ್ ಕಿಂಗ್ಸ್​, ಜಯಭೇರಿ.. IPL ಪಾಯಿಂಟ್​ ಟೇಬಲ್​ನಲ್ಲಿ ಬದಲಾವಣೆ!
Advertisment
  • ಐಪಿಎಲ್​ನ ಕೊನೆಯ ಲೀಗ್​ ಪಂದ್ಯ ಆಡಿದ ಮುಂಬೈ, ಸೋಲು
  • ಪಂಜಾಬ್​ ಕಿಂಗ್ಸ್​ ಪರ ಇಬ್ಬರು ಬ್ಯಾಟ್ಸ್​ಮನ್ಸ್​​ ಹಾಫ್​​ಸೆಂಚುರಿ
  • ಆಕರ್ಷಕ ಅರ್ಧಶತಕ ಬಾರಿಸಿದ ಸೂರ್ಯಕುಮಾರ್ ಯಾದವ್

2025ರ ಐಪಿಎಲ್​ನ ಅಂತಿಮ ಲೀಗ್​ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ನೇತೃತ್ವದ ಪಂಜಾಬ್​ ಕಿಂಗ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ಸೋಲುಂಡಿದೆ. ಈ ಸೋಲಿನಿಂದ ಹಾರ್ದಿಕ್ ಪಾಂಡ್ಯ ಪಡೆ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದರೆ, 7 ವಿಕೆಟ್​​ಗಳಿಂದ ಜಯ ಸಾಧಿಸಿರುವ ಪಂಜಾಬ್ 19 ಅಂಕಗಳಿಂದ ಅಗ್ರಸ್ಥಾನಕ್ಕೆ ಏರಿದೆ.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಬ್ಯಾಟಿಂಗ್ ಮಾಡಿ, ಆರಂಭದಲ್ಲೇ ಹಿನ್ನಡೆಗೆ ಒಳಗಾಯಿತು. ಓಪನರ್​ಗಳಾಗಿ ಕ್ರೀಸ್​ಗೆ ಆಗಮಿಸಿದ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಬೇಗನೆ ಹೊರ ನಡೆದರು. ರಯಾನ್ 27 ರನ್​ಗೆ ವಿಕೆಟ್ ಒಪ್ಪಿಸಿದ್ರೆ ರೋಹಿತ್ ಶರ್ಮಾ 24 ರನ್​ಗೆ ಔಟ್​ ಆದರು.

ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಆಗಮಿಸಿ 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ನಿಂದ ಹಾಫ್​ಸೆಂಚುರಿ ಸಿಡಿಸಿದರು. 57 ರನ್​ ಗಳಿಸಿ ಬ್ಯಾಟಿಂಗ್ ಮಾಡುವಾಗ ಎಲ್​ಬಿಗೆ ಬಲಿಯಾದರು. ತಿಲಕ್ 1, ವಿಲ್ ಜಾಕ್ಸ್​ 17, ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ 2 ಬೌಂಡರಿ, 2 ಸಿಕ್ಸರ್​​​ನಿಂದ 15 ಬಾಲ್​ಗೆ 26 ರನ್​ ಸಿಡಿಸಿ ಔಟ್ ಆದರು. ನಮನ್​ ಧೀರ್ 20 ರನ್​ಗೆ ಆರ್ಷ್​ದೀಪ್ ಸಿಂಗ್​ಗೆ ವಿಕೆಟ್​ ಒಪ್ಪಿಸಿದರು. ಹೀಗಾಗಿ 20 ಓವರ್​ಗಳಲ್ಲಿ 7 ವಿಕೆಟ್​ಗೆ 185 ರನ್​ಗಳ ಗುರಿಯನ್ನು ಎದುರಾಳಿ ಪಂಜಾಬ್​ಗೆ ನೀಡಿತ್ತು.

ಇದನ್ನೂ ಓದಿ: RCBಗೆ ಗುಡ್​ನ್ಯೂಸ್​; ವಾಪಸ್ ಬಂದ ಬಲಿಷ್ಠ ಪ್ಲೇಯರ್​.. ತಂಡಕ್ಕೆ ಬಂತು ಆನೆಬಲ

publive-image

185 ರನ್​ಗಳ ಟಾರ್ಗೆಟ್ ಬೆನ್ನು ಹತ್ತಿದ್ದ ಪಂಜಾಬ್​ ಕಿಂಗ್ಸ್​ ಪರ ಓಪನರ್​​ ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೇವಲ 28 ಎಸೆತದಲ್ಲಿ 8 ಬೌಂಡರಿ, 1 ಸಿಕ್ಸರ್​​​ನಿಂದ ಅರ್ಧಶತಕ ಬಾರಿಸಿದರು. ಆದರೆ ಇನ್ನೊಬ್ಬ ಓಪನರ್ ಪ್ರಭಸಿಮ್ರನ್ ಸಿಂಗ್​ ಕೇವಲ 13 ರನ್​ಗೆ ವಿಕೆಟ್​ ಕಳೆದುಕೊಂಡು ಪೆವಿಲಿಯನ್​ಗೆ ನಡೆದರು. 62 ರನ್​ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಆರ್ಯ, ಸೂರ್ಯಕುಮಾರ್​​ಗೆ ಕ್ಯಾಚ್ ಕೊಟ್ಟು ನಿರಾಸೆಗೆ ಒಳಗಾದರು.

ಪ್ರಭಸಿಮ್ರನ್ ಔಟ್ ಆದ ಬಳಿಕ ಕ್ರೀಸ್​ಗೆ ಆಗಮಿಸಿದ್ದ ಜೋಶ್ ಇಂಗ್ಲಿಸ್​ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಜೋಶ್ ಇಂಗ್ಲಿಸ್, ಪ್ರಿಯಾಂಶ್ ಆರ್ಯಗೆ ಉತ್ತಮ ಸಾಥ್ ಕೊಟ್ಟರು. ಇದರಿಂದ ಕೇವಲ 29 ಬಾಲ್​ಗಳಲ್ಲಿ ಅರ್ಧಶತಕ ಬಾರಿಸಿದರು. ಪಂದ್ಯದಲ್ಲಿ ಒಟ್ಟು 42 ಬಾಲ್​ಗಳನ್ನು ಆಡಿದ ಜೋಶ್ ಇಂಗ್ಲಿಸ್ 9 ಬೌಂಡರಿ, 3 ಸಿಕ್ಸ್​ ನೆರವಿನಿಂದ 73 ರನ್​ ಸಿಡಿಸಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿ ಎಲ್​ಬಿಗೆ ಬಲಿಯಾದರು. ನಾಯಕ ಶ್ರೇಯಸ್ ಅಯ್ಯರ್ ಅವರು 26 ರನ್​ ಗಳಿಸೋ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಂಜಾಬ್​ ಕಿಂಗ್ಸ್ 18.3 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 187 ರನ್​ ಬಾರಿಸಿ ಜಯಭೇರಿ ಬಾರಿಸಿತು. ಇದರಿಂದ 14 ಪಂದ್ಯಗಳಿಂದ ಒಟ್ಟು 19 ಅಂಕಗಳೊಂದಿಗೆ ಪಾಯಿಂಟ್​ ಟೇಬಲ್​ನಲ್ಲಿ ಗುಜರಾತ್​ ತಂಡವನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದೆ. ಇನ್ನು ಮುಂಬೈ 16 ಪಾಯಿಂಟ್​​ನಿಂದ ಆರ್​ಸಿಬಿ ನಂತರದ ಸ್ಥಾನ ಪಡೆದುಕೊಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment