/newsfirstlive-kannada/media/post_attachments/wp-content/uploads/2024/08/pro-kabaddi-1.jpg)
ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಹರಾಜಿನ ಮೊದಲ ದಿನ ಹಲವು ಆಟಗಾರರ ಮೇಲೆ ಮೇಲೆ ಹಣದ ಮಳೆಯಾಗಿದೆ. ಆದರೆ ಕೆಲವು ಸ್ಟಾರ್ ಪ್ಲೇಯರ್ಸ್ ನಿರೀಕ್ಷಿಸಿದಷ್ಟು ಹಣವನ್ನು ಪಡೆದಿಲ್ಲ.
ಡಿಫೆಂಡರ್ ಸಚಿನ್ ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗಿದ್ದಾರೆ. ಸಚಿನ್ ಮೂಲ ಬೆಲೆ ಎ ಕೆಟಗರಿಯಲ್ಲಿ 30 ಲಕ್ಷ ರೂಪಾಯಿ ನಿಗಧಿ ಆಗಿತ್ತು. ತಮಿಳ್ ತಲೈವಾಸ್ ಅವರನ್ನು 2.15 ಕೋಟಿಗೆ ಖರೀದಿಸಿದೆ. ಪಾಟ್ನಾ ಪೈರೇಟ್ಸ್ FBM ಕಾರ್ಡ್ ಬಳಸಲಿಲ್ಲ. ಸಚಿನ್‌ಗಾಗಿ ಯುಪಿ ಯೋಧಾ ಮತ್ತು ಗುಜರಾತ್ ಜೈಂಟ್ಸ್ ನಡುವೆ ಬಿಡ್ಡಿಂಗ್ ವಾರ್ ನಡೆದಿತ್ತು.
ಇದನ್ನೂ ಓದಿ:ಹೆಣ್ಣನ್ನು ಮನೆಯ ಲಕ್ಷ್ಮಿ ಅನ್ನೋದು ಯಾಕೆ..? ವರಮಹಾಲಕ್ಷ್ಮಿ ಹಬ್ಬದ ದಿನ ಈ ವಿಚಾರ ನಿಮಗೆ ಗೊತ್ತಿರಲಿ
ಇರಾನ್ ಆಲ್‌ರೌಂಡರ್ ಮೊಹಮ್ಮದ್ರೇಜಾ ಚಿಯಾನೆ (Mohammadreza Chiyaneh ) ಮೇಲೆ ಸಾಕಷ್ಟು ಹಣ ಸುರಿಯಲಾಗಿದೆ. ಎ ಕೆಟಗರಿಯಲ್ಲಿ ಚಿಯಾನೆಯ ಮೂಲ ಬೆಲೆ 30 ಲಕ್ಷ ರೂಪಾಯಿ ಆಗಿತ್ತು. ಹರಿಯಾಣ ಸ್ಟೀಲರ್ಸ್ 2.7 ಕೋಟಿಗೆ ಖರೀದಿಸಿದೆ. ಯು ಮುಂಬಾ ಮತ್ತು ಗುಜರಾತ್ ಜೈಂಟ್ಸ್ ಇವರಿಗಾಗಿ ಬಿಡ್ ಮಾಡಿದ್ದವು.
ಪವನ್ ಸೆಹ್ರಾವತ್
A ಕೆಟಗರಿ ಆಲ್ ರೌಂಡರ್ ಪವನ್ ಸೆಹ್ರಾವತ್ ಅವರನ್ನು ತೆಲುಗು ಟೈಟಾನ್ಸ್ 1,72,50,000 ರೂಪಾಯಿಗೆ ಖರೀದಿಸಿದೆ. ಪವನ್ ಸೆಹ್ರಾವತ್ಗಾಗಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ನಡುವೆ ತೀವ್ರ ಬಿಡ್ಡಿಂಗ್ ವಾರ್ ನಡೆದಿತ್ತು. ಅಂತಿಮವಾಗಿ ಪವನ್ ಸೆಹ್ರಾವತ್ ತೆಲುಗು ಟೈಟಾನ್ಸ್ ಖರೀದಿಸಿತು.
ಇದನ್ನೂ ಓದಿ:ವಿನಯ್ ಕುಮಾರ್, ಬಾಲಾಜಿ ಸೈಡ್ಲೈನ್.. ಟೀಂ ಇಂಡಿಯಾಗೆ ಮಾರ್ಕೆಲ್ ಎಂಟ್ರಿ ಹಿಂದಿದೆ ಭಾರೀ ಲಾಬಿ..!
ಭರತ್
ಬಿ ಕೆಟಗರಿಯಲ್ಲಿ ಸೇರ್ಪಡೆ ಆಗಿರುವ ಆಲ್ ರೌಂಡರ್ ಭರತ್ ಅವರನ್ನು ಯುಪಿ ಯೋಧಾ 1.30 ಕೋಟಿ ರೂ.ಗೆ ಖರೀದಿಸಿದೆ. ಭರತ್ ಅವರ ಮೂಲ ಬೆಲೆ 20 ಲಕ್ಷ ರೂಪಾಯಿ ಆಗಿತ್ತು. ತೆಲುಗು ಟೈಟಾನ್ಸ್ ಮತ್ತು ಯುಪಿ ಯೋಧಾ ಭರತ್ಗಾಗಿ ಬಿಡ್ ಮಾಡಿದ್ದರು.
ಸುನಿಲ್ ಕುಮಾರ್
ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಮಾಜಿ ನಾಯಕ ಸುನಿಲ್ ಕುಮಾರ್ ಅವರನ್ನು ಯು ಮುಂಬಾ 1 ಕೋಟಿ 1 ಲಕ್ಷ 50 ಸಾವಿರಕ್ಕೆ ಖರೀದಿಸಿದೆ. ದಬಾಂಗ್ ಡೆಲ್ಲಿ ಮತ್ತು ಬೆಂಗಳೂರು ಬುಲ್ಸ್ ಬಿಡ್ಡಿಂಗ್ ವಾರ್ ಮಾಡಿತ್ತು. ಆದರೆ ಯು ಮುಂಬಾ ಗೆದ್ದಿದೆ.
ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್