Pro Kabaddi: ಪ್ರೊ ಕಬಡ್ಡಿ ವೇಳಾಪಟ್ಟಿ ರಿಲೀಸ್​​​​​​​.. ಪಂದ್ಯ ಯಾವಾಗಿಂದ ಪ್ರಾರಂಭ?

author-image
AS Harshith
Updated On
Pro Kabaddi: ಪ್ರೊ ಕಬಡ್ಡಿ ವೇಳಾಪಟ್ಟಿ ರಿಲೀಸ್​​​​​​​.. ಪಂದ್ಯ ಯಾವಾಗಿಂದ ಪ್ರಾರಂಭ?
Advertisment
  • 12 ನಗರಗಳಲ್ಲಿ ನಡೆಯಲಿದೆ ಪ್ರೊ ಕಬಡ್ಡಿ ಪಂದ್ಯ
  • ಅಹ್ಮದಾಬಾದ್​​ನಲ್ಲಿ ನಡೆಯಲಿದೆ ಉದ್ಘಾಟನಾ ಪಂದ್ಯ
  • ಮೊದಲ ಪಂದ್ಯ ಗುಜರಾತ್ ಟೈಟನ್ಸ್ ಹಾಗೂ ತೆಲುಗು ಟೈಟನ್ಸ್​

IPL ಬಳಿಕ ಭಾರತೀಯರು ಹೆಚ್ಚಾಗಿ ವೀಕ್ಷಿಸುವ ಪಂದ್ಯವೆಂದರೆ ಅದು ಕಬಡ್ಡಿ. ಇದೀಗ ಜನಪ್ರಿಯ ಪ್ರೊ ಕಬಡ್ಡಿ ಮುಂಬರುವ ತಿಂಗಳಲ್ಲೇ ಅರಂಭವಾಗಲಿದೆ. 10ನೇ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಗೊಂಡಿದೆ.

ಡಿಸೆಂಬರ್​​​​ 2 ರಿಂದ ಟೂರ್ನಿ ಆರಂಭಗೊಳ್ಳಲಿದ್ದು, 12 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಅಹ್ಮದಾಬಾದ್​​ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ತೆಲುಗು ಟೈಟನ್ಸ್​ ತಂಡಗಳು ಕಾದಾಡಲಿವೆ.

ಲೀಗ್​​ ಪಂದ್ಯಗಳು ಡಿಸೆಂಬರ್​​​ 8 ರಿಂದ 13 ರ ತನಕ ಬೆಂಗಳೂರಿನಲ್ಲಿ ನಡೆಯಲಿವೆ. ಫೆಬ್ರವರಿ 21 ಕ್ಕೆ ಲೀಗ್​​ ಸ್ಟೇಜ್​ ಮ್ಯಾಚಸ್​ ಮುಗಿಯಲಿದ್ದು, ಪ್ಲೇ ಆಫ್​ ವೇಳಾಪಟ್ಟಿ ನಂತರ ಪ್ರಕಟಗೊಳ್ಳಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment