/newsfirstlive-kannada/media/post_attachments/wp-content/uploads/2024/10/RCB_VIRAT.jpg)
ಅಕ್ಟೋಬರ್ 31ರೊಳಗೆ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ರೆಟೆನ್ಶನ್ ಲಿಸ್ಟ್ ಬಿಡುಗಡೆ ಮಾಡಬೇಕು. ಹೀಗಾಗಿ ತಂಡಗಳ ಮ್ಯಾನೇಜ್ಮೆಂಟ್ನಲ್ಲಿ ಗಂಭೀರ ಚರ್ಚೆ ಆಗುತ್ತಿದೆ.
ಫ್ರಾಂಚೈಸಿಗಳು ಡೈರೆಕ್ಟ್ ರೆಟೆನ್ಶನ್ ಅಥವಾ ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಮೂಲಕ ಆಟಗಾರರನ್ನು ಉಳಿಸಿಕೊಳ್ಳಲಿವೆ. ಇತ್ತ ಅಭಿಮಾನಿಗಳೂ ಕೂಡ ಎಕ್ಸೈಟ್ ಆಗಿದ್ದಾರೆ. ತನ್ನ ನೆಚ್ಚಿನ ತಂಡ ಯಾವೆಲ್ಲ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬುವುದನ್ನು ತಿಳಿದುಕೊಳ್ಳಲು.
ಇದನ್ನೂ ಓದಿ:Rohit Sharma: ಬ್ಯಾಟ್ ಖರೀದಿಸಲು ಹಣ ಇರಲಿಲ್ಲ.. ಇಂದು ₹182 ಕೋಟಿ ಒಡೆಯನಾದ ರೋಚಕ ಜರ್ನಿ!
ಉಳಿಸಿಕೊಳ್ಳುವ ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ
- ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ, ಮತಿಶಾ ಪತಿರಣರನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಒಂದು ವೇಳೆ ಧೋನಿ ಐಪಿಎಲ್ ಆಡೋದು ಕನ್ಫರ್ಮ್ ಆದರೆ ಅವರೂ ಕೂಡ ತಂಡದ ಭಾಗವಾಗಲಿದ್ದಾರೆ.
- ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬೂಮ್ರಾರನ್ನು ನೇರವಾಗಿ ಉಳಿಸಿಕೊಂಡು, ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ಗೆ ಆರ್ಟಿಎಂ ಆಪ್ಷನ್ ಮೊರೆ ಹೋಗಬಹುದು.
- ಆರ್ಸಿಬಿ: ವಿರಾಟ್ ಕೊಹ್ಲಿ, ವಿಲ್ ಜಾಕ್ಸ್ ಹಾಗೂ ಸಿರಾಜ್ ಹೆಸರು ಡೈರೆಕ್ಟ್ ರಿಟೆನ್ಷನ್ ಲಿಸ್ಟ್ನಲ್ಲಿ ಕೇಳಿಬರುತ್ತಿದೆ. ರಜತ್ ಪಾಟೀದರ್ ಮತ್ತು ಕ್ಯಾಮೆರೊನ್ ಗ್ರೀನ್ಗಾಗಿ ಆರ್ಟಿಎಂ ಅಪ್ಲೆ ಮಾಡುವ ಸಾಧ್ಯತೆ ಇದೆ.
- ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಬೋಲ್ಟ್ ಮತ್ತು ಚಹಾಲ್ರನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಜೊತೆಗೆ ಧ್ರುವ್ ಜುರೇಲ್ ಮೇಲೂ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ.
- ಕೆಕೆಆರ್: ಸುನಿಲ್ ನರೈನ್, ರಸೆಲ್, ಶ್ರೇಯಸ್ ಅಯ್ಯರ್ ಡೈರೆಕ್ಟ್ ರಿಟೆನ್ಷನ್. ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ಆರ್ಟಿಎಂ ಮೂಲಕ ಉಳಿಸಿಕೊಳ್ಳುವ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್