ಸ್ಯಾಂಡಲ್‌ವುಡ್‌ ನಿರ್ಮಾಪಕ ಕೆ.ಮಂಜು ಮಗನ BMW ಕಾರು ಅಪಘಾತ; ಆಗಿದ್ದೇನು?

author-image
admin
Updated On
ಸ್ಯಾಂಡಲ್‌ವುಡ್‌ ನಿರ್ಮಾಪಕ ಕೆ.ಮಂಜು ಮಗನ BMW ಕಾರು ಅಪಘಾತ; ಆಗಿದ್ದೇನು?
Advertisment
  • ಸ್ಯಾಂಡಲ್‌ವುಡ್‌ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು
  • ವಿಷ್ಣುಪ್ರಿಯ ಸಿನಿಮಾ ಪ್ರಮೋಷನ್‌ಗಾಗಿ ಹೋಗುವಾಗ ಕಾರಿಗೆ ಅಪಘಾತ
  • ಶ್ರೇಯಸ್ ಮಂಜು ನಟನೆಯ ವಿಷ್ಣುಪ್ರಿಯ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ

ಸ್ಯಾಂಡಲ್‌ವುಡ್‌ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಐಷಾರಾಮಿಗೆ ಕಾರು ಅಪಘಾತವಾಗಿದೆ. ವಿಷ್ಣುಪ್ರಿಯ ಸಿನಿಮಾ ಪ್ರಮೋಷನ್‌ಗಾಗಿ ಶ್ರೇಯಸ್ ಮಂಜು ದಾವಣಗೆರೆಗೆ ತೆರಳುತ್ತಿದ್ದ ವೇಳೆ ಈ ಆ್ಯಕ್ಸಿಡೆಂಟ್ ಸಂಭವಿಸಿದೆ.

ಶ್ರೇಯಸ್ ಮಂಜು ದಾವಣಗೆರೆಗೆ ತೆರಳುತ್ತಿದ್ದ ವೇಳೆ ಬಿಎಂಡಬ್ಲ್ಯೂ ಕಾರಿಗೆ ಡ್ಯಾಮೇಜ್ ಆಗಿದೆ. ಶ್ರೇಯಸ್ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿ ಡಿಕ್ಕಿಯಾದ ಹಿನ್ನೆಲೆಯ BMW ಕಾರಿನ ಒಂದು ಭಾಗ ನಜ್ಜುಗುಜ್ಜಾಗಿದೆ.

ಇದನ್ನೂ ಓದಿ: ಮೈಸೂರಲ್ಲಿ ಒಬ್ಬ ಕ್ರೇಜಿ ರೈತ.. ಈತನ 4 ಎಕರೆ ಜಮೀನು ಕಾಯೋದೇ ಈ ಮಾಡೆಲ್​​ಗಳು..! 

ಶ್ರೇಯಸ್ ಮಂಜು ಅಭಿನಯದ ವಿಷ್ಣುಪ್ರಿಯ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಶ್ರೇಯಸ್ ಮಂಜು ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ರು. ಈ ಮಧ್ಯೆ ಕಾರಿಗೆ ಲಾರಿ ಡಿಕ್ಕಿಯಾಗಿ, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

publive-image

ಬಿಎಂಡಬ್ಲ್ಯೂ ಕಾರಿಗೆ ಆ್ಯಕ್ಸಿಡೆಂಟ್‌‌ ಆಗಿರುವುದಕ್ಕೆ ನಿರ್ಮಾಪಕ ಕೆ. ಮಂಜು ಪುತ್ರ ಸ್ಥಳದಲ್ಲೇ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಬಿಎಂಡಬ್ಲ್ಯೂ ಕಾರಿಗೆ ಮಾತ್ರ ಡ್ಯಾಮೇಜ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment