/newsfirstlive-kannada/media/post_attachments/wp-content/uploads/2025/04/UMAPATI-GOWDA.jpg)
ನಿರ್ಮಾಪಕ ಉಮಾಪತಿ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರದ ಹಲಗಡಿಕೊಪ್ಪದಲ್ಲಿ ನಡೆದ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಉಮಾಪತಿ ಗೌಡ ಭಾಗಿಯಾಗಿದ್ದರು.
ಇದನ್ನೂ ಓದಿ: ದಿನಕರ್ ತೂಗುದೀಪ ಪರವಾಗಿ ಅಣ್ಣಮ್ಮನಿಗೆ ಹರಕೆ ತೀರಿಸಿದ ದರ್ಶನ್​ ಪತ್ನಿ ವಿಜಯಲಕ್ಷ್ಮಿ
ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಉಮಾಪತಿಗೌಡ, ನಾನು ಅನೇಕ ತಂಟೆ ತಕರಾರುಗಳನ್ನ ಎದುರಿಸಿದ್ದೀನಿ. ಸುಮಾರು ಜನ ಕೇಳ್ತಿದ್ರು, ನೀನು ದೊಡ್ಡವರನ್ನ ಎದುರು ಹಾಕ್ಕೊಂಡು ಏನಪ್ಪಾ ಮಾಡ್ತಿಯಾ ಅಂತ. ನಾನು ಎದುರು ಹಾಕ್ಕೊಳಲ್ಲ, ನನ್ನ ಅವರು ಎದುರು ಹಾಕ್ಕೊಳ್ತಾರೆ. ನಾವು ಮಾಡೋ ಕೆಲ್ಸ ಒಳ್ಳೇದಿದ್ರೆ ನಾವು ಯಾರಿಗೂ ಭಯ ಬೀಳಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
ಇದನ್ನೂ ಓದಿ: ‘RCB ಅಂದ್ರೆ ನಮ್ಮ ಜೀವ, ಪ್ರಾಣ’.. ನೆಚ್ಚಿನ ಟೀಮ್ ಬಗ್ಗೆ ಶಿವಣ್ಣ ಹೇಳಿದ್ದೇನು?
ಬದುಕಿನಲ್ಲಿ 2 ಜನ ಇರ್ತಾರೆ ಅಂತಾ ಒಬ್ಬರು ಮಾದರಿಯಾಗೋರು, ಇನ್ನೊಬ್ಬರು ಜೈಲಿಗೆ ಹೋಗಿ ಬಂದೋರು, ತೊಂದರೆ ಕೊಟ್ಟು ನಶಿಸಿ ಹೋಗೋರು, ಎಚ್ಚರಿಕೆ ಕೊಡೋವಂತೋರು. ನನ್ನನ್ನು ಭಯ ಬೀಳಿಸೋ ಶಕ್ತಿ ಯಾರಿಗೂ ಇಲ್ಲ. ಸರಿಯಾದ ದಾರಿಯಲ್ಲಿ ಸಂಪಾದನೆ ಮಾಡಿದೀನಿ.. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಯಾವುದಕ್ಕೂ ಭಯ ಬೀಳಲ್ಲ ಎಂದಿದ್ದಾರೆ. ಬೆನ್ನಲ್ಲೆ ಉಮಾಪತಿ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
ಇದನ್ನೂ ಓದಿ:ಕಂಗನಾಗೆ ಕರೆಂಟ್ ಶಾಕ್.. ತಾವೇ ಕೋಲು ಕೊಟ್ಟು ಪೆಟ್ಟು ತಿಂದ ಕಹಾನಿ ಇದು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ