ಚೆನಾಬ್ ಬ್ರಿಡ್ಜ್ ಯಶಸ್ಸಿನ ಹಿಂದೆ ಬೆಂಗಳೂರು ಪ್ರಾಧ್ಯಾಪಕಿಯ ಶ್ರಮ.. ಯಾರು ಈ ಮಾಧವಿ ಲತಾ..?

author-image
Ganesh
Updated On
ಚೆನಾಬ್ ಬ್ರಿಡ್ಜ್ ಯಶಸ್ಸಿನ ಹಿಂದೆ ಬೆಂಗಳೂರು ಪ್ರಾಧ್ಯಾಪಕಿಯ ಶ್ರಮ.. ಯಾರು ಈ ಮಾಧವಿ ಲತಾ..?
Advertisment
  • ವಿಶ್ವದ ಅತಿ ಎತ್ತರದ ರೈಲ್ವೇ ಬಿಡ್ಜ್ ಚೆನಾಬ್ ಸೇತುವೆ
  • ಚೆನಾಬ್ ಬ್ರಿಡ್ಜ್​​ಗೆ ಭೂಕಂಪ ತಡೆದುಕೊಳ್ಳುವ ಸಾಮರ್ಥ್ಯ
  • 1,486 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ

ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರದ ರಿಯಾಸಿ (Reasi) ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್ (Chenab bridge) ಅನ್ನು ಜೂನ್ 6 ರಂದು ಉದ್ಘಾಟಿಸಿದರು. ಭಾರತೀಯ ರೈಲ್ವೆ ಇಲಾಖೆ ಚಿನಾಬ್ ನದಿಯ ಮೇಲೆ ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಾಣ ಮಾಡಿದೆ. ಜಮ್ಮು ಕಾಶ್ಮೀರವನ್ನು ಭಾರತದ ಉಳಿದ ಭಾಗದ ಜೊತೆಗೆ ಸಂಪರ್ಕ ಕಲ್ಪಿಸುವ ರೈಲ್ವೇ ಮಾರ್ಗ ಇದಾಗಿದೆ. ಈ ರೈಲ್ವೆ ಬ್ರಿಡ್ಜ್‌ಗೆ ಪ್ರಬಲ ಭೂಕಂಪ, ಬಿರುಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ವಿಶೇಷ ಅಂದರೆ ಬ್ರಿಡ್ಜ್​ ನಿರ್ಮಾಣದ ಹಿಂದೆ ಬೆಂಗಳೂರಿನ IISc (Indian Institute of Science) ಮಹಿಳಾ ಪ್ರೊಫೆಸರ್​ ಒಬ್ಬರ ಪಾತ್ರ ಪ್ರಮುಖವಾಗಿದೆ.

ಡಾ.ಜಿ.ಮಾಧವಿ ಲತಾ

ಅಂದ್ಹಾಗೆ ಅವರ ಹೆಸರು ಡಾ.ಜಿ.ಮಾಧವಿ ಲತಾ (Professor Madhavi Latha). ಎಂಜಿನಿಯರ್ ಆಗಿರುವ ಅವರು ಚೆನಾಬ್ ಸೇತುವೆ ನಿರ್ಮಾಣಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ. ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ (USBRL) ಭಾಗವಾಗಿರುವ ಚೆನಾಬ್ ಸೇತುವೆಯು ಎರಡು ಎತ್ತರದ ಬೆಟ್ಟಗಳ ನಡುವೆ ಬಿಲ್ಲಿನ ಆಕಾರದಲ್ಲಿ ಕಬ್ಬಿಣದಿಂದ ನಿರ್ಮಿಸಲಾಗಿದೆ. ಇದರ ನಿರ್ಮಾಣದಲ್ಲಿ ಎಂಜಿನಿಯರಿಂಗ್ ಡಿಸೈನ್ ತುಂಬಾನೇ ಅದ್ಭುತವಾಗಿ ಕೆಲಸ ಮಾಡಿದೆ.

ಇದನ್ನೂ ಓದಿ:ಕೊನೆಗೂ ಭಾರತದಲ್ಲಿ ಲೈಸೆನ್ಸ್ ದಕ್ಕಿಸಿಕೊಂಡ ಸ್ಟಾರ್​ ಲಿಂಕ್; ಇದರ ಹೈ-ಸ್ಪೀಡ್ ಎಷ್ಟು? ರೇಟ್ ದುಬಾರಿನಾ?

publive-image

ಬ್ರಿಡ್ಜ್ ನಿರ್ಮಾಣಕ್ಕೆ ಸುಮಾರು 21 ವರ್ಷಗಳ ಕಾಲ ತೆಗೆದುಕೊಳ್ಳಲಾಗಿದೆ. ಹಿಮಾಲಯದ ಕ್ಲಿಷ್ಟಕರ ಪರಿಸ್ಥಿತಿಗಳ ಸವಾಲುಗಳ ನಡುವೆ ಮಾಧವಿ ಲತಾ ತೆಗೆದುಕೊಂಡ ನಿರ್ಧಾರ, ಮತ್ತು ಅವರ ಪಾತ್ರ, ಪರಿಣಿತಿ ತುಂಬಾನೇ ನಿರ್ಣಾಯಕವಾಗಿತ್ತು. ಮಾಧವಿ ಲತಾ, 2005 ರಿಂದ 2022ರವರೆಗೆ 17 ವರ್ಷಗಳ ಕಾಲ ಚೆನಾಬ್ ಪ್ರಾಜೆಕ್ಟ್​​ನಲ್ಲಿ ಕೆಲಸ ಮಾಡಿದರು. ಈ ಸೇತುವೆ ನಿರ್ಮಾಣ ಕಾರ್ಯದಲ್ಲಿ ಅವರು ಭೂತಾಂತ್ರಿಕ ಸಲಹೆಗಾರರಾಗಿ ತಮ್ಮ ಕೆಲಸವನ್ನು ನಿಭಾಯಿಸಿದ್ದಾರೆ.

120 ವರ್ಷ ಬಾಳಿಕೆ..

ಬಿರುಕು ಬಿಟ್ಟ ಬಂಡೆಗಳು, ಅಲ್ಲಲ್ಲಿದ್ದ ದೊಡ್ಡ ದೊಡ್ಡ ಹೊಂಡ ಕುಳಿಗಳ ಮಧ್ಯೆ ಬ್ರಿಡ್ಜ್​ ನಿರ್ಮಾಣ ತುಂಬಾನೇ ಕಷ್ಟಕರವಾಗಿತ್ತು. ಕೊನೆಗೂ ಅನಿರೀಕ್ಷಿತ ಭೂವೈಜ್ಞಾನಿಕ ಪರಿಸ್ಥಿತಿಗಳನ್ನು ನಿಭಾಯಿಸುವ ಮೂಲಕ ಮಾಧವಿ ಲತಾ ಯಶಸ್ವಿಯಾದರು. ಇಳಿಜಾರಿನ ಸ್ಥಿರತೆ, ಕಲ್ಲುಗಳ ಆಧಾರಗಳು ಮತ್ತು ಅಡಿಪಾಯ ಡಿಸೈನ್​​ಗಳಲ್ಲಿ ಮಾಧವಿ ಲತಾರ ಸಲಹೆಗಳನ್ನು ಅಳವಡಿಸಿಕೊಳ್ಳಲಾಗಿದೆ. ನಿರ್ಮಾಣಗೊಂಡಿರುವ ಸೇತುವೆಯು 120 ವರ್ಷಗಳ ಕಾಲ ಬಾಳಿಕೆ ಬರಲಿದೆ. ಗಂಟೆಗೆ 260 ಕಿ.ಮೀ. ವೇಗದ ಗಾಳಿ ಮತ್ತು ಭೂಕಂಪಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಜಸ್ಟ್ 5 ನಿಮಿಷ ತಬ್ಬಿಕೊಳ್ಳಲು 600 ರೂಪಾಯಿ ಚಾರ್ಜ್‌; ಏನಿದು ‘man mum’ ಟ್ರೆಂಡ್‌?

publive-image

ಮಾಧವಿ ಲತಾ ಯಾರು?

ಮಾಧವಿ ಲತಾ, ಆಂಧ್ರದ ಪ್ರಕಾಶಂ ಜಿಲ್ಲೆಯ ಯದುಗುಂಡ್ಲಪಾಡು (Yedugundlapadu) ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದರು. ಜೆಎನ್‌ಟಿಯುನಿಂದ ಬಿ.ಟೆಕ್, ಎನ್‌ಐಟಿ ವಾರಂಗಲ್‌ನಿಂದ ಎಂ.ಟೆಕ್ (ಗೋಲ್ಡ್ ಮೆಡಲ್) ಮತ್ತು ಐಐಟಿ ಮದ್ರಾಸ್‌ನಿಂದ ಪಿಎಚ್‌ಡಿ (2000) ಪಡೆದುಕೊಂಡಿದ್ದಾರೆ. 2003 ರಿಂದ ಐಐಎಸ್‌ಸಿ (ಬೆಂಗಳೂರು)ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ (Center for sustainable technologies) ಅಧ್ಯಕ್ಷರೂ ಆಗಿದ್ದಾರೆ. 2021 ರಲ್ಲಿ ಭಾರತೀಯ ಭೂತಾಂತ್ರಿಕ ಸೊಸೈಟಿಯಿಂದ ಅತ್ಯುತ್ತಮ ಮಹಿಳಾ ಭೂತಾಂತ್ರಿಕ ಸಂಶೋಧಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ಯಲ್ಲಿ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ IIScನ ಮೊದಲ ಮಹಿಳಾ ಪ್ರಾಧ್ಯಪಕೀಯೂ ಹೌದು.

ಇದನ್ನೂ ಓದಿ: ನೀರಿಲ್ಲದೆ ನರಳುವ ಮೊದಲ ನಗರ.. 2030ಕ್ಕೆ ಸಂಪೂರ್ಣ ಒಣಗಿ ಹೋಗುವ ರಾಜಧಾನಿ ಇದೇ!

publive-image

ಚೆನಾಬ್ ಸೇತುವೆ

ಚೆನಾಬ್ ಸೇತುವೆಯು ಕಾಶ್ಮೀರ ಕಣಿವೆಯಲ್ಲಿ ವರ್ಷಪೂರ್ತಿ ರೈಲು ಸಂಪರ್ಕ ಕಲ್ಪಿಸುತ್ತದೆ. ಇದು ಶ್ರೀನಗರ-ಜಮ್ಮು ಹೆದ್ದಾರಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಗಡಿ ಪ್ರದೇಶಗಳಿಗೆ ಮಿಲಿಟರಿ ಲಾಜಿಸ್ಟಿಕ್ಸ್ ಅನ್ನು ವೇಗಗೊಳಿಸುತ್ತದೆ. 359 ಮೀಟರ್ ಎತ್ತರ (ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರ), 1.3 ಕಿಲೋಮೀಟರ್ ಉದ್ದ ಮತ್ತು 1,486 ಕೋಟಿ ರೂಪಾಯಿ ವೆಚ್ಚದೊಂದಿಗೆ ನಿರ್ಮಾಣಗೊಂಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಚುರುಕು.. ರೈತರ ಮೊಗದಲ್ಲಿ ಮಂದಹಾಸ.. ಮಳೆಯ ಅಬ್ಬರ ಹೆಂಗಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment