newsfirstkannada.com

VIDEO- ಚಂದ್ರ, ಸೂರ್ಯನ ಬಳಿಕ ಮಾನವ ಸಹಿತ ಸಮುದ್ರಯಾನ.. ಏನಿದು ಗೊತ್ತಾ ಸಬ್‌ಮರ್ಸಿಬಲ್ ಮತ್ಸ್ಯ- 6000

Share :

12-09-2023

    ಇತ್ತೀಚೆಗಷ್ಟೇ ಚಂದ್ರಯಾನದಲ್ಲಿ ಸಕ್ಸಸ್ ಕಂಡಿದ್ದ ವಿಜ್ಞಾನಿಗಳು

    ಸಮುದ್ರಯಾನದಲ್ಲಿ ಮೂವರು ಹೋಗಿ ಪತ್ತೆ ಮಾಡುವುದೇನು?

    ಮತ್ತೊಂದು ಐತಿಹಾಸಿಕ ಸಾಧನೆ ಮಾಡಲು ಮುಂದಾದ ಭಾರತ

ಚಂದ್ರಯಾನ-3 ಯೋಜನೆ ಕೈಗೊಳ್ಳುವ ಮೂಲಕ ಭಾರತದ ವಿಜ್ಞಾನಿಗಳು ಚಂದ್ರನನ್ನು ಟಚ್ ಮಾಡಿ ಯಶಸ್ವಿಯಾಗಿದ್ದಾರೆ. ಆದಿತ್ಯ-ಎಲ್​1 ಮಿಷನ್ ಲಾಂಚ್ ಮಾಡಿ ಸೂರ್ಯನ ಅಧ್ಯಯನಕ್ಕೂ ಮುನ್ನುಡಿ ಬರೆದಿದ್ದಾರೆ. ಸದ್ಯ ಈ ಎರಡು ಆದ ಬೆನ್ನಲ್ಲೇ ಭಾರತದ ವಿಜ್ಞಾನಿಗಳು ಮತ್ತೊಂದು ಮಹತ್ತರವಾದ ಯೋಜನೆಯಾದ ಸಮುದ್ರಯಾನಕ್ಕೂ ಕೈ ಹಾಕಿದ್ದು ಮುಂದಿನ ವರ್ಷ 3 ಜನ ಸಮೇತ ಸಬ್‌ಮರ್ಸಿಬಲ್ ಮತ್ಸ್ಯ -6000 ಅನ್ನು ನೀರಿನ ಆಳಕ್ಕೆ ಕಳುಹಿಸಲಾಗುತ್ತದೆ.

ಸಬ್‌ಮರ್ಸಿಬಲ್ ಮತ್ಸ್ಯ -6000 ಅನ್ನು ಮುಂದಿನ ವರ್ಷ ಲಾಂಚ್ ಮಾಡಲು ಚೆನ್ನೈನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT) ಯೋಜನೆ ಹಾಕಿಕೊಂಡಿದೆ. ಈ ಸಮುದ್ರಯಾನಕ್ಕೆ ಸಬ್‌ಮರ್ಸಿಬಲ್ ಮತ್ಸ್ಯ -6000 ಎಂದು ಹೆಸರಿಡಲಾಗಿದೆ. ಇದರಲ್ಲಿ ಒಟ್ಟು ಮೂವರು ಪ್ರಯಾಣ ಬೆಳಸಲಿದ್ದು ಇವರು ಸಮುದ್ರದ ಆಳದಲ್ಲಿ 6 ಸಾವಿರ ಮೀಟರ್ ಅಂದರೆ 6 ಕಿಲೋ ಮೀಟರ್ ಆಳದಲ್ಲಿ ಖನಿಜಗಳನ್ನು ಪತ್ತೆ ಮಾಡಲಿದ್ದಾರೆ. ನೀರಿನ ಆಳದಲ್ಲಿ ಕೋಬಾಲ್ಟ್​, ನಿಕ್ಕಲ್​, ಮ್ಯಾಂಗನೀಸ್, ಹೈಡ್ರೋಥರ್ಮಲ್ ಸಲ್ಫೈಡ್‌ ಮತ್ತು ಗ್ಯಾಸ್ ಹೈಡ್ರೇಟ್‌ ಖನಿಜಗಳನ್ನು ಶೋಧನೆ ಮಾಡಲಿದ್ದಾರೆ.

ಮೊದಲು 500 ಮೀಟರ್​ ಆಳದವರೆಗೆ ಪರೀಕ್ಷೆ

ಈಗಾಗಲೇ ಎರಡು ವರ್ಷದಿಂದ ಈ ಸಬ್‌ಮರ್ಸಿಬಲ್ ಮತ್ಸ್ಯ -6000 ಮಿಷನ್ ಅನ್ನು ತಯಾರಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು 500 ಮೀಟರ್​ ಆಳದವರೆಗೆ ಪರೀಕ್ಷೆ ಮಾಡಲಾಗುತ್ತದೆ. ಬಳಿಕ 2024ರಲ್ಲಿ ಚೆನ್ನೈ ಕರಾವಳಿ ಮೂಲಕ ಬಂಗಾಳ ಕೊಲ್ಲಿಯಲ್ಲಿ ನೀರಿನ ಆಳಕ್ಕೆ ಕಳುಹಿಸಲಾಗುತ್ತದೆ. ಹೀಗಾಗಿ ಓಷನ್ ಟೆಕ್ನಾಲಜಿ ವಿಜ್ಞಾನಿಗಳು ಇದರ ವಿನ್ಯಾಸ, ವಸ್ತುಗಳ ಪರಿಕ್ಷೆ, ಪ್ರಮಾಣೀಕರಣ ಸೇರಿದಂತೆ ಇನ್ನು ಕೆಲ ತಂತ್ರಜ್ಞಾನದ ಪರೀಕ್ಷೆಯಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಇಂತಹ ಸಬ್​ಮರ್ಸಿಬಲ್​ ಅನ್ನು ಇಡೀ ವಿಶ್ವದಲ್ಲೇ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾ ಮಾತ್ರ ಅಭಿವೃದ್ಧಿ ಪಡಿಸಿವೆ. ಸದ್ಯ ಆರನೇ ರಾಷ್ಟ್ರವಾಗಿ ಭಾರತ ತಯಾರಿಸುತ್ತಿದ್ದು ಇದರಲ್ಲಿ ಜಯ ಸಿಗಲಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO- ಚಂದ್ರ, ಸೂರ್ಯನ ಬಳಿಕ ಮಾನವ ಸಹಿತ ಸಮುದ್ರಯಾನ.. ಏನಿದು ಗೊತ್ತಾ ಸಬ್‌ಮರ್ಸಿಬಲ್ ಮತ್ಸ್ಯ- 6000

https://newsfirstlive.com/wp-content/uploads/2023/09/Submersible_Matsya.jpg

Load More