newsfirstkannada.com

ವ್ಯಕ್ತಿಯನ್ನು ಕೊಂದು ಪೆಟ್ರೋಲ್ ಹಾಕಿ ಸುಟ್ಟ ದುಷ್ಕರ್ಮಿಗಳು; ಓರ್ವ ಆರೋಪಿ ಅರೆಸ್ಟ್​, ಮತ್ತೋರ್ವ ಆತ್ಮಹತ್ಯೆ

Share :

Published January 14, 2024 at 11:48am

Update January 14, 2024 at 11:49am

  ಜಮೀನು ವಿವಾದ ಹಿನ್ನೆಲೆ ವ್ಯಕ್ತಿಯ ಕೊಲೆ

  ಶವವನ್ನು ಪೆಟ್ರೋಲ್ ಹಾಕಿ ಸುಟ್ಟ ದುಷ್ಕರ್ಮಿಗಳು

  ವಿಚಾರಣೆಗೆ ಕರೆಯುತ್ತಿದ್ದಂತೆ ಆರೋಪಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ವ್ಯಕ್ತಿಯನ್ನು ಕೊಂದು ಶವವನ್ನು ಪೆಟ್ರೋಲ್ ಹಾಕಿ ಸುಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ವಂಡಮಾನ್ ಜಲಾಶಯದ ಬಳಿ ನಡೆದಿದೆ. ದಾದಿವಾರಪಲ್ಲಿ ಗ್ರಾಮದ ವೆಂಕಟರಮಣ ನಾಯಕ್ (45) ಕೊಲೆಯಾದ ವ್ಯಕ್ತಿ .

ಜನವರಿ 7 ರಂದು ನಡೆದಿರುವ ಕೊಲೆ ಪ್ರಕರಣ ಇದಾಗಿದ್ದು, ಕೊಲೆ ಆರೋಪಿ ಬಾಬುನನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪ್ರಭಾಕರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಮೀನು ವಿವಾದ ಹಿನ್ನೆಲೆ ವೆಂಕಟರಮಣ ನಾಯಕ್​ನನ್ನು ಆರೋಪಿಗಳು ಕೊಲೆ ಮಾಡಿದ್ದಾರೆ. ಬಳಿಕ ಶವ ಸುಟ್ಟು ಹಾಕಿದ್ದಾರೆ. ಇನ್ನು ಈ ಪ್ರಕರಣ ಆಂಧ್ರಪ್ರದೇಶದ ಅಮ್ಮಡಗೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣವನ್ನು ಭೇದಿಸಲು ಹೊರಟ ಪೊಲೀಸರಿಗೆ ಆರೋಪಿ ಬಾಬು ಸಿಕ್ಕಿದ್ದಾನೆ.

ಅತ್ತ ಪೊಲೀಸರು ವಿಚಾರಣೆಗೆ ಕರೆಯುತ್ತಿದ್ದಂತೆ ಆರೋಪಿ ಪ್ರಭಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಯಕ್ತಿಯನ್ನು ಕೊಂದು ಪೆಟ್ರೋಲ್ ಹಾಕಿ ಸುಟ್ಟ ದುಷ್ಕರ್ಮಿಗಳು; ಓರ್ವ ಆರೋಪಿ ಅರೆಸ್ಟ್​, ಮತ್ತೋರ್ವ ಆತ್ಮಹತ್ಯೆ

https://newsfirstlive.com/wp-content/uploads/2024/01/Andra.jpg

Load More