/newsfirstlive-kannada/media/post_attachments/wp-content/uploads/2025/01/hsr-layout1.jpg)
ಬೆಂಗಳೂರು: ಹೆಚ್ಎಸ್ಆರ್ ಲೇಔಟ್.. ಎಷ್ಟೋ ಬೆಂಗಳೂರಿನವರಿಗೆ ಈ ಏರಿಯಾದ ಕಂಪ್ಲೀಟ್ ಹೆಸರು ಗೊತ್ತೇ ಇಲ್ಲ. ಹೊಸೂರ್ ಸರ್ಜಾಪುರ ರೋಡ್ ಲೇಔಟ್. ಸದ್ಯ ಈ ಏರಿಯಾ ಬೆಂಗಳೂರಿನ ಮುಂದಿನ ಕೋರಮಂಗಲ ಅಂತಾನೇ ಕರೆಸಿಕೊಳ್ತಾ ಇದೆ. ಕಾರಣ ಈ ಏರಿಯಾದ ಬೆಳವಣಿಗೆ ಹಾಗೂ ಈ ಏರಿಯಾ ಕೊಡ್ತಾ ಇರೋ ಹೊಸ ಸೌಕರ್ಯಗಳು.
ಇದನ್ನೂ ಓದಿ:ತಿಮ್ಮಪ್ಪನ ಸನ್ನಿಧಿಯಲ್ಲಿ ಬಂಗಾರದ ಮನುಷ್ಯರು.. ವರ್ಷದ ಮೊದಲ ದಿನ ಭಕ್ತರಿಗೆ ಸರ್ಪ್ರೈಸ್..! Photos
ಸುಮಾರು ವರ್ಷಗಳ ಹಿಂದೆ ಈ ಲೇಔಟ್ ನಿರ್ಮಾಣವಾದಾಗ, ಇದು ಈ ಮಟ್ಟಿಗೆ ಬೆಳೆಯುತ್ತೆ ಅಂತ ಯಾರೂ ಕೂಡ ಊಹಿಸಿರಲಿಲ್ಲ. ಆದ್ರೆ, ಇದು ಈ ಮಟ್ಟಿಗೆ ಬೆಳವಣಿಗೆ ಕಂಡಿದೆ. ಒಂದು ಸಾಮಾನ್ಯ ರೆಸಿಡೆನ್ಸಿಯಲ್ಬಡಾವಣೆಯಿಂದ, ಐಟಿ ಕಾರಿಡಾರ್ನ ಪ್ರಮುಖ ಏರಿಯಾವಾಗಿ ಹೆಚ್ಎಸ್ಆರ್ ಲೇಔಟ್ ಬದಲಾಗಿದೆ. ಮುಖ್ಯವಾಗಿ ನಮಗೆ ಕಾಣಿಸೋದು ಬದಲಾಗ್ತಾ ಇರೋ ಬೆಂಗಳೂರಿನ ರೀತಿ ಈ ಏರಿಯಾ ಕೂಡ ಬದಲಾಗ್ತಾ ಇದೆ. ಇಲ್ಲಿ ಕಾಸ್ಮೋಪಾಲಿಟನ್ ಕಲ್ಚರ್ ಹೆಚ್ಚಾಗ್ತಾ ಇದೆ. ಜೊತೆಗೆ ಈ ಏರಿಯಾ ಎಲೆಕ್ಟ್ರಾನಿಕ್ ಸಿಟಿ, ಔಟರ್ ರಿಂಗ್ ರಸ್ತೆ, ಹಾಗೂ ಸರ್ಜಾಪುರ ರಸ್ತೆಗೆ ಹತ್ತಿರವಿದೆ. ಈ ಭಾಗಗಳಲ್ಲೇ ಅನೇಕ ಐಟಿ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್ಗಳ ಕಛೇರಿಗಳಿವೆ. ಹಚ್ಚ ಹಸಿರಿನ ಪರಿಸರ ಕೂಡ ಈ ಏರಿಯಾದಲ್ಲಿದೆ.
ಮತ್ತೊಂದು ವಿಷ್ಯ ಏನೆಂದ್ರೆ ಅಕ್ಕಪಕ್ಕದಲ್ಲಿರೋ ಇಂದಿರಾನಗರ, ಕೋರಮಂಗಲ ಏರಿಯಾಗಳಲ್ಲಿ ಬಾಡಿಗೆ ಕೂಡ ಜಾಸ್ತಿ ಇರುತ್ತೆ ಮತ್ತು ಅಷ್ಟು ಸುಲಭಕ್ಕೆ ಆಫೀಸ್ಗಳಿಗೆ ಅಥವಾ ಮನೆಗಳಿಗೆ ಜಾಗ ಸಿಗೋದಿಲ್ಲ. ಹೀಗಾಗಿ, ಕಂಪನಿಗಳು ಹೆಚ್ಎಸ್ಆರ್ ಕಡೆಗೆ ಮುಖ ಮಾಡಿವೆ. ಇದು ಕೂಡ ರಿಯಲ್ ಎಸ್ಟೇಟ್, ಹೆಚ್ಎಸ್ಆರ್ ಲೇಔಟ್ನಲ್ಲಿ ಜಾಸ್ತಿ ಆಗೋದಕ್ಕೆ ಕಾರಣ. ಈ ಎಲ್ಲಾ ಕಾರಣಗಳಿಂದ ಹೆಚ್ಎಸ್ಆರ್ ಲೇಔಟ್ನ ಸೈಟ್ ಹಾಗೂ ಜಾಗದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ.
ಕಳೆದ 2 ವರ್ಷಗಳಲ್ಲಿ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು 30% ರಷ್ಟು ಏರಿಕೆಯಾಗಿದೆ. ಹಾಗೂ ಹೆಚ್ಎಸ್ಆರ್ ಲೇಔಟ್ನ ವಾಣಿಜ್ಯ ಮತ್ತು ಚಿಲ್ಲರೆ ಸ್ಥಳಗಳು ಪ್ರತಿ ಚದರ ಅಡಿಗೆ ಸುಮಾರು ₹200 ಮಾಸಿಕ ಬಾಡಿಗೆ ಮತ್ತು ಇಂದಿರಾನಗರದ ಹಿಂದೆ ಪ್ರತಿ ಚದರಕ್ಕೆ ₹300. ತಿಂಗಳಿಗೆ ಅಡಿ ಬಾಡಿಗೆ ಇದೆ. ಎಲ್ಲಾ ರೀತಿಯಲ್ಲೀ ಅಂದ್ರೆ 360 ಡಿಗ್ರಿನಲ್ಲಿ ಹೆಚ್ಎಸ್ಆರ್ ಬೆಳವಣಿಗೆ ಕಾಣ್ತಾ ಇದೆ. ಒಟ್ಟಿನಲ್ಲಿ ಈ ಏರಿಯಾದ ಬೆಳವಣಿಗೆ ನೋಡಿದ್ರೆ, ಬೆಂಗಳೂರಿನ ಮುಂದಿನ ಕೋರಮಂಗಲ ಆಗೋದ್ರಲ್ಲಿ ಯಾವ ಅನುಮಾನವೂ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ