/newsfirstlive-kannada/media/post_attachments/wp-content/uploads/2024/11/UP_NEWS1.jpg)
ಪುರುಷ ಟೈಲರ್ಗಳೇ ಇನ್ಮುಂದೆ ನೀವು ಮಹಿಳೆಯರ ಬಟ್ಟೆ ಹೊಲೆಯಲು ಅಳತೆ ತೆಗೆದುಕೊಳ್ಳುವಂತಿಲ್ಲ. ಹೀಗೊಂದು ಶಾಕಿಂಗ್ ಸುದ್ದಿ ನಮ್ಮ ರಾಜ್ಯದಿಂದಲ್ಲ, ಉತ್ತರ ಭಾರತ ರಾಜ್ಯವಾದ ಉತ್ರಪ್ರದೇಶದಿಂದ ಹೊರಬಿದ್ದಿದೆ. ಮಹಿಳಾ ಆಯೋಗ ಪ್ರಸ್ತಾಪಸಿರುವ ಕೆಲ ಅಂಶಗಳು ಸದ್ಯ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ.. ಅದರಲ್ಲೂ ಕೆಲಸ ಮಾಡುವ ಜಾಗದಲ್ಲಿ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಇದೆಲ್ಲ ಬೆಳವಣಿಗೆಗಳ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮಹಿಳಾ ಆಯೋಗ ಮಾಡಿರುವ ಪ್ಲಾನ್ ದೇಶಾದ್ಯಂತ ಸಂಚಲನ ಮೂಡಿಸಿದೆ.
ಇದನ್ನೂ ಓದಿ:ನಿರ್ದೇಶಕ ಗುರುಪ್ರಸಾದ್ ಪ್ರಕರಣದ ತನಿಖೆ ಚುರುಕು.. ಮಹತ್ವದ ಹೇಳಿಕೆ ಪಡೆದ ಪೊಲೀಸರು
‘ಪುರುಷ ಟೈಲರ್ಗಳು ಮಹಿಳೆಯರ ಅಳತೆ ತೆಗೆದುಕೊಳ್ಳುವಂತಿಲ್ಲ’
ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಉತ್ತರಪ್ರದೇಶದ ಮಹಿಳಾ ಆಯೋಗ ಸರ್ಕಾರದ ಮುಂದೆ ಹಲವು ಪ್ರಸ್ತಾವನೆ ಇಟ್ಟಿದೆ. ಮಹಿಳೆಯರನ್ನು ಕೆಟ್ಟ ಸ್ಪರ್ಶದಿಂದ ರಕ್ಷಿಸಲು ಮತ್ತು ಪುರುಷರ ಕೆಟ್ಟ ಉದ್ದೇಶಗಳನ್ನು ತಡೆಯಲು ಪ್ರಸ್ತಾವನೆ ನೀಡಿದೆ. ಲಕ್ನೋದಲ್ಲಿ ಅಕ್ಟೋಬರ್ 28ರಂದು ನಡೆದ ಮಹಿಳಾ ಆಯೋಗದ ಸಭೆಯ ನಂತರ, ಪುರುಷರಿಗೆ ಮಹಿಳೆಯರ ಅಳತೆ ತೆಗೆದುಕೊಳ್ಳಲು ಅವಕಾಶ ನೀಡಬಾರದು. ಬ್ಯೂಟಿ ಪಾರ್ಲರ್ನಲ್ಲಿ ಪುರುಷರು ಮಹಿಳೆಯರ ಕೂದಲನ್ನು ಕತ್ತರಿಸಬಾರದು. ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಸುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿತ್ತು. ಪ್ರಸ್ತಾವನೆಯನ್ನು ಆಯೋಗದ ಅಧ್ಯಕ್ಷೆ ಬಬಿತಾ ಚೌಹಾಣ್ ಮಂಡಿಸಿದ್ದು ಇದಕ್ಕೆ ಸದಸ್ಯರು ಬೆಂಬಲಿಸಿದ್ದಾರೆ.
ಮಹಿಳೆಯರ ರಕ್ಷಣೆಗಾಗಿ ರೂಲ್ಸ್!
- ಸಾರ್ವಜನಿಕ ಸ್ಥಳ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ
- ಅತ್ಯಾಚಾರದಂತ ಪ್ರಕರಣ ತಡೆಯಲು ಮಹಿಳಾ ಆಯೋಗ ಈ ಪ್ಲಾನ್
- ಇನ್ಮುಂದೆ ಪುರುಷ ಟೈಲರ್ಸ್ ಮಹಿಳೆಯರ ಅಳತೆ ತೆಗೆದುಕೊಳ್ಳುವಂತಿಲ್ಲ
- ಜಿಮ್, ಯೋಗ ಕೇಂದ್ರಗಳಲ್ಲಿ ಪುರುಷರು ಮಹಿಳೆಯರಿಗೆ ತರಬೇತಿ ನೀಡುವಂತಿಲ್ಲ
- ಶಾಲಾ ಬಸ್‌ಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ ಮಹಿಳಾ ಸಿಬ್ಬಂದಿ ಇರಲು ಶಿಫಾರಸು
- ಮಹಿಳೆಯರು ಹೋಗುವ ಜಿಮ್‌ಗಳಲ್ಲಿ ಮಹಿಳಾ ತರಬೇತುದಾರರು ಇರಬೇಕು
- ಎಲ್ಲಾ ಜಿಮ್ ತರಬೇತುದಾರರ ಪೊಲೀಸ್ ಪರಿಶೀಲನೆ ನಡೆಸಬೇಕು
- ಮಹಿಳೆ ಪುರುಷರಿಂದ ತರಬೇತಿ ಪಡೆಯಲು ಬಯಸಿದರೆ, ಲಿಖಿತವಾಗಿ ನೀಡಬೇಕು
- ಮಹಿಳೆ, ಬಾಲಕಿಯರ ಶೋಷಣೆಯ ದೂರು ನಿರಂತರ ಬರುತ್ತಿದ್ದರಿಂದ ನಿರ್ಧಾರ
- ಹೆಣ್ಣು ಮಕ್ಕಳು ಪ್ರಯಾಣಿಸುವ ಶಾಲಾ ಬಸ್‌ಗಳಲ್ಲಿ ಮಹಿಳಾ ಉದ್ಯೋಗಿಗಳಿರಬೇಕು
- ಎಲ್ಲ ಜಿಲ್ಲೆಗಳಿಗೂ ಈ ಸಂಬಂಧ ಆದೇಶ ನೀಡಿದ ಮಹಿಳಾ ಆಯೋಗ
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಗೆಲುವಿಗೆ ಮುಖ್ಯ ಪಾತ್ರ ವಹಿಸಿದ್ದ ಭಾರತೀಯರು.. ಈ ಮಹತ್ವದ ಸ್ಥಾನಗಳು ಸಿಗುತ್ತಾ?
[caption id="attachment_95996" align="alignnone" width="800"] ಬಬಿತಾ ಚೌಹಾನ್ (ನೀಲಿ ಸೀರೆಯಲ್ಲಿ ಇರುವರು)[/caption]
ಸಮಾಜದಲ್ಲಿ ಜನರಿಂದ ದೂರುಗಳು ಬರುತ್ತಲೇ ಇವೆ. ಜಿಮ್ನಲ್ಲಿ ಪೋಟೋಗಳನ್ನು ತೆಗೆದುಕೊಂಡು ಬ್ಲ್ಯಾಕ್ಮೇಲ್ ಮಾಡ್ತಾರೆ. ಕೆಟ್ಟ ಸ್ಪರ್ಶಗಳೆಲ್ಲ ಮಹಿಳೆಯರಿಗೆ ಮುಜುಗರ ಉಂಟುಮಾಡುತ್ತದೆ. ಇದನ್ನೆಲ್ಲ ಮನೆಯಲ್ಲಿ ಹೇಳೋಣ ಅಂದ್ರೂ ಆಯ್ಕೆ ಇರಲ್ಲ. ಯಾಕಂದ್ರೆ ಜಿಮ್ಗೆ ಹೋಗಿ ಫಿಟ್ ಆಗಿರಲು ಮಹಿಳೆಯರು ಬಯಸುತ್ತಾರೆ. ಇದು ಅವರ ಅಧಿಕಾರ ಕೂಡ.
ಬಬಿತಾ ಚೌಹಾನ್, ಉತ್ತರ ಪ್ರದೇಶ ಮಹಿಳಾ ಆಯೋಗ ಅಧ್ಯಕ್ಷೆ
ಸದ್ಯ ಇದು ಪ್ರಸ್ತಾವನೆಯಷ್ಟೇ.. ಒಂದು ವೇಳೆ ಅನುಮೋದನೆಗೊಂಡರೆ ಪ್ರಸ್ತಾವನೆ ಅನುಷ್ಠಾನಕ್ಕಾಗಿ ಕರಡು ನೀತಿ ರಚಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಮುಂದೆ ಸಾಧಕ ಬಾಧಕಗಳನ್ನು ಚರ್ಚಿಸಿ ಕಾನೂನು ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ