VIDEO: ಶೇಖ್ ಹಸೀನಾ ಮನೆಯಲ್ಲಿ ಉಂಡು ತೇಗಿದ ಪುಂಡರು; ಬಾಂಗ್ಲಾದಲ್ಲಿ ಭಯಾನಕ ಲೂಟಿ; ಏನೆಲ್ಲಾ ಆಯ್ತು?

author-image
Gopal Kulkarni
VIDEO: ಶೇಖ್ ಹಸೀನಾ ಮನೆಯಲ್ಲಿ ಉಂಡು ತೇಗಿದ ಪುಂಡರು; ಬಾಂಗ್ಲಾದಲ್ಲಿ ಭಯಾನಕ ಲೂಟಿ; ಏನೆಲ್ಲಾ ಆಯ್ತು?
Advertisment
  • ಬಾಂಗ್ಲಾದೇಶದಲ್ಲಿ ಇನ್ನೂ ಆರದ ವಿದ್ಯಾರ್ಥಿಗಳ ಒಡಳಾಲದ ಕಿಚ್ಚು
  • ಪಾರ್ಲಿಮೆಂಟ್​ಗೆ ನುಗ್ಗಿದ ಗುಂಪು ನಡೆಸಿದ್ದು ಅಕ್ಷರಶಃ ವಿಕೃತಿ, ಅಟ್ಟಹಾಸ
  • ಶೇಖ್ ಹಸೀನಾ ಮನೆಯಲ್ಲಿ ಲೂಟಿಯಾಗಿದ್ದೇನು, ಉಂಡು ತೇಗಿದ್ದೆಷ್ಟು?

ಢಾಕಾ: ಬಾಂಗ್ಲಾದೇಶದಲ್ಲಿ ಹೊತ್ತಿಕೊಂಡಿರುವ ಪ್ರತಿಭಟನೆಯ ಬೆಂಕಿಯ ಕಾವು ಸದ್ಯಕ್ಕೆ ಆರುವಂತೆ ಕಾಣುತ್ತಿಲ್ಲ. ಒಂದು ಕಡೆ ಪ್ರಧಾನಿ ಹುದ್ದೆಯನ್ನು ತ್ಯಜಿಸಿ ದೇಶವನ್ನು ತೊರೆದು ಬಂದಿದ್ದಾರೆ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ. ಅತ್ತ ಹಸೀನಾ ಬಾಂಗ್ಲಾ ತೊರೆಯುತ್ತಿದ್ದಂತೆ, ಇತ್ತ ಬಾಂಗ್ಲಾದೇಶದ ಪಾರ್ಲಿಮೆಂಟ್, ಶೇಕ್ ಮುಜೀಬುರ್ ರೆಹಮಾನ್ ಮೆಮೋರಿಯಲ್ ಮ್ಯೂಸಿಯಂನಲ್ಲಿ ಪ್ರತಿಭಟನೆಕಾರರು ದೊಡ್ಡ ಹುಚ್ಚಾಟ ಮೆರೆದಿದ್ದಾರೆ.

publive-image

ಮ್ಯೂಸಿಯಂಗೆ ಬೆಂಕಿಯಿಟ್ಟ ಪ್ರತಿಭಟನೆಕಾರರು

ಹಸೀನಾ ಶೇಖ್ ದೇಶವನ್ನು ತೊರೆಯುತ್ತಿದ್ದಂತೆ ಇತ್ತ ಪ್ರತಿಭಟನಾಕಾರರ ಅಟ್ಟಹಾಸ ಬೇರೆಯದ್ದೇ ಮಟ್ಟಕ್ಕೆ ಹೋಗಿ ಕೇಕೆಹಾಕಿದೆ. ಢಾಕಾದಲ್ಲಿರುವ ಭಗಬಂಧು ಮೆಮೊರಿಯಲ್ ಮ್ಯೂಸಿಯಂಗೆ ಪ್ರತಿಭಟನೆಕಾರರು ಬೆಂಕಿಯಿಟ್ಟಿದ್ದಾರೆ. ಶೇಖ್​ ಮುಜೀಬುರ್ ರೆಹಮಾನ್ ಮೆಮೊರಿಯಲ್ ಮ್ಯೂಸಿಯಂನ್ನು ಬಾಂಗ್ಲಾದೇಶದ ಸ್ಥಾಪಕ, ಅಧ್ಯಕ್ಷ ಶೇಖ್​ ಮುಜಿಬುರ್​ ರೆಹಮಾನ್​ ನೆನಪಿಗೋಸ್ಕರವೆಂದು ನಿರ್ಮಿಸಲಾಗಿತ್ತು.

ಇದನ್ನೂ ಓದಿ:ಗುಡಿಸಿ ಗುಂಡಾಂತರ.. ಬಾಂಗ್ಲಾ ಪ್ರಧಾನಿ ಪ್ಯಾಲೇಸ್‌ಗೆ ನುಗ್ಗಿದ ಯುವಕರು; ಏನೇನು ಎತ್ಹಾಕೊಂಡು ಬಂದ್ರು ಗೊತ್ತಾ?

ಇಷ್ಟಕ್ಕೆ ಮುಗಿಯದ ಪ್ರತಿಭಟನಾಕಾರರ ರಕ್ಕಸವರ್ತನೆ ಬಾಂಗ್ಲಾದ ಪಾರ್ಲಿಮೆಂಟ್​ಗೂ ನುಗ್ಗಿ ಹಂಗಾಮ ನಡೆಸಿದ್ದಾರೆ. ಪಾರ್ಲಿಮೆಂಟ್​ಗೆ ನುಗ್ಗಿದ ಪಡೆ, ಅಲ್ಲಿ ಸಿಗರೇಟ್ ಹಚ್ಚಿಕೊಂಡು ಹೊಗೆ ಎಳೆದು ಬಿಟ್ಟು ಹುಚ್ಚಾಟ ಮೆರೆದಿದ್ದಾರೆ, ಇನ್ನೂ ಕೆಲವರು ಪಾರ್ಲಿಮೆಂಟ್​ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:ಬಾಂಗ್ಲಾದೇಶದಲ್ಲಿ ಪ್ರಧಾನಿ ತಲೆದಂಡ.. ದೇಶ ಬಿಟ್ಟು ಹೊರಟ ಶೇಖ್ ಹಸೀನಾಗೆ ಭಾರತದಲ್ಲಿ ಆಶ್ರಯ; ಆಗಿದ್ದೇನು?


">August 5, 2024

ಶೇಖಾ ಹಸೀನಾ ಪ್ಯಾಲೇಸ್​ನಿಂದ ಏನೆಲ್ಲಾ ಲೂಟಿಯಾಯ್ತು
ಇನ್ನೂ ಶೇಖ್ ಹಸೀನಾ ಮನೆಗೆ ನುಗ್ಗಿದ ಕಿಡಿಗೇಡಿಗಳು ಅಲ್ಲಿ ಸಿಕ್ಕ ವಸ್ತುಗಳನ್ನೆಲ್ಲಾ ಲೂಟಿ ಮಾಡಿಕೊಮಡು ಓಡಿ ಹೋಗಿದ್ದಾರೆ. ಪೊಲೀಸರ ನಡುವೆ ಗಲಾಟೆ ನಡೆದರು ಸಾವಿರಾರು ಜನರು ಹಸೀನಾ ನಿವಾಸಕ್ಕೆ ನುಗ್ಗಿ ಐಶಾರಾಮಿ ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಏನೆಲ್ಲಾ ಲೂಟಿಯಾಗಿದೆ ಅಂತ ನೋಡ್ತಾ ಹೋಗುವುದಾದ್ರೆ.

ಪ್ರಧಾನಿ ಮನೆಯಲ್ಲಿ ಲೂಟಿಯಾಗಿದೆಷ್ಟು? 

ಹಸೀನಾ ಕುಳಿತುಕೊಳ್ಳುತ್ತಿದ್ದ ಪಿಎಂ ಕುರ್ಚಿ
ಹಾಸಿಗೆ, ದಿಂಬು, ಹೊದಿಕೆ
ಕುರಿ, ಕೋಳಿ, ಬಾತುಕೋಳಿ
ಲ್ಯಾಪ್​ಟಾಪ್​, ಶೋಪೀಸ್​ಗಳು
ಚೀಲದಲ್ಲಿ ಹಲವು ವಸ್ತುಗಳನ್ನು ತುಂಬಿಕೊಂಡು ಎಸ್ಕೇಪ್
ಚಿನ್ನ ಬೆಳ್ಳಿಯ ಆಭರಣಗಳು


">August 5, 2024

ಹೀಗೆ ಕೈ ಸಿಕ್ಕಿದ ಒಂದೊಂದು ವಸ್ತುಗಳನ್ನು ಬಿಡದೇ ಹೊತ್ತುಕೊಂಡು ಹೋಗಿದ್ದಾರೆ. ದೊಣ್ಣೆಗಳೊಂದಿಗೆನೇ ಹಸೀನಾ ಪ್ಯಾಲೆಸ್​ಗೆ ನುಗ್ಗಿದ ಗುಂಪು, ಕೆಲವು ಪೀಠೋಪಕರಗಳನ್ನು ಧ್ವಂಸಗೊಳಿಸಿದೆ. ಕಚೇರಿಯಲ್ಲಿದ್ದ ಫೈಲ್​ಗಳೆಲ್ಲವನ್ನು ಚೆಲ್ಲಾಪಿಲ್ಲಿ ಮಾಡಿ ಹಾಕಿದೆ. ಒಂದೊಂದು ಡ್ರಾವರ್​​ಗಳನ್ನು ಎಳೆದು ಏನಿದೆ ಅಂತ ನೋಡಿ ಸಿಕ್ಕ ವಸ್ತುಗಳನ್ನು ಎತ್ತಿಕೊಂಡು ಕೆಲವರು ಓಡಿದ್ದಾರೆ. ಹಸೀನಾ ಪ್ಯಾಲೆಸ್​ಗೆ ಇಂದು ಅಕ್ಷರಶಃ ಮದ್ದಾನೆ ನುಗ್ಗಿದ ಬಾಳೆ ತೋಟದಂತಾಗಿ ಹೋಗಿತ್ತು. ಕೆಲವರು ಸ್ವಿಮ್ಮಿಂಗ್ ಫೂಲ್​ನಲ್ಲಿ ಈಜಾಡಿ ಮಜ ತೆಗೆದುಕೊಂಡರೆ, ಇನ್ನೂ ಕೆಲವರು ಪ್ಯಾಲೆಸ್​ ಪಕ್ಕದಲ್ಲಿದ್ದ ಸರೋವರದಲ್ಲಿ ದೋಣಿ ವಿಹಾರ ಮಾಡಿ ಆನಂದಪಟ್ಟರು. ಕೆಲವರು ಬೆಡ್​​ರೂಮ್​ಗಳಲ್ಲಿದ್ದ ಐಷಾರಾಮಿ ಮಂಚದ ಮೇಲೆ ಮಲಗಿ ಸುಖಿಸಿದ್ರೆ, ಇನ್ನೂ ಕೆಲವರು ದೊಣ್ಣೆಯಿಂದ ಪ್ಯಾಲೆಸ್​ನಲ್ಲಿ ಸಿಕ್ಕ ಸಿಕ್ಕ ಕಡೆ ದಾಳಿ ಮಾಡಿ ಗಾಜು, ಪೀಠೋಪಕರಣಗಳನ್ನು ಪುಡಿ ಪುಡಿ ಮಾಡಿದ್ರು.


">August 5, 2024

ಬಿರಿಯಾನಿ ತಿನ್ನುವುದನ್ನು ವಿಡಿಯೋ ಮಾಡಿದ ಪ್ರತಿಭಟನಾಕಾರರು

ಢಾಕಾದಲ್ಲಿರುವ ಶೇಖ್ ಹಸೀನಾ ಪ್ಯಾಲೆಸ್​ಗೆ ನುಗ್ಗಿದ ಪ್ರತಿಭಟನಾಕಾರರು, ಪ್ಯಾಲೆಸ್​ನಲ್ಲಿ ಸಿಕ್ಕ ಬಿರಿಯಾನಿ ಹಾಗೂ ಇನ್ನಿತರ ನಾನ್ ವೇಜ್ ಊಟಕ್ಕೆ ಮುಗಿಬಿದ್ದು ಬಕಾಸುರರಂತೆ ಬಾಯಿಗೆ ತುರುಕಿಕೊಂಡು ತಿಂದು ಆನಂದಪಟ್ಟರು. ತಾವು ಮಾಡಿದ ಭೂರಿ ಭೋಜನದ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಬಾಂಗ್ಲಾದಲ್ಲಿ ಹೊತ್ತಿರುವ ಬೆಂಕಿಯಂತೂ ಸದ್ಯಕ್ಕೆ ಆರುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಬೆಂಕಿ, ಕಲ್ಲು ತೂರಾಟ, ಹುಚ್ಚಾಟಗಳೆಲ್ಲಾ ಇನ್ನೂ ಅಲ್ಲಿ ಜಾರಿಯಲ್ಲಿಯೇ ಇವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment