/newsfirstlive-kannada/media/post_attachments/wp-content/uploads/2025/07/RAJANATH-SING-IN-LOKASABHA-2.jpg)
ಪಾರ್ಲಿಮೆಂಟ್ನಲ್ಲಿ ಇವತ್ತು ‘ಅಪರೇಷನ್ ಸಿಂಧೂರ್’ ಬಗ್ಗೆ ಚರ್ಚೆಗೆ ಸಮಯ ನಿಗದಿಯಾಗಿದೆ. ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಹಲ್ಗಾಮ್ ದಾಳಿಯನ್ನು ದೇಶದಲ್ಲೇ ಬೆಳೆದ ಉಗ್ರರು ನಡೆಸಿರಬಹುದು ಎಂದು ಪಿ.ಚಿದಂಬರಂ ಹೇಳಿದ್ದಾರೆ. ಉಗ್ರರು ಪಾಕಿಸ್ತಾನದಿಂದ ಬಂದಿದ್ದರು ಅನ್ನೋದನ್ನು ಯಾವ ಸಾಕ್ಷ್ಯ ಪ್ರೂವ್ ಮಾಡಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಪಿ.ಚಿದಂಬರಂರಿಂದ ಪೆಹಲ್ಗಾಮ್ ಉಗ್ರರ ಬಗ್ಗೆ ಈ ಪ್ರಶ್ನೆಯಿಂದ ವಿವಾದ ಸೃಷ್ಟಿಯಾಗಿದೆ. ಕಾಂಗ್ರೆಸ್ ಪಕ್ಷವು ಪಾಕಿಸ್ತಾನಕ್ಕೆ ಸಂಪೂರ್ಣ ಕ್ಲೀನ್ ಚಿಟ್ ನೀಡಿದೆ ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್ ಪಕ್ಷವು ದೇಶದ ವೈರಿಯನ್ನು ಯಾವಾಗಲೂ ರಕ್ಷಿಸುತ್ತಿದೆ ಎಂದು ಬಿಜೆಪಿಯ ಅಮಿತ್ ಮಾಳವೀಯಾ ಹೇಳಿದ್ದಾರೆ.
ಇದನ್ನೂ ಓದಿ: ರಕ್ಷಿತಾ ಬೆನ್ನಲ್ಲೇ ವಿಜಯಲಕ್ಷ್ಮೀ ಕೌಂಟರ್..? ಮಾರ್ಮಿಕ ಪೋಸ್ಟ್ ಮಾಡಿದ ದರ್ಶನ್ ಪತ್ನಿ
ಎನ್‌ಐಎ ಉಗ್ರರನ್ನು ಗುರುತಿಸಿದೆಯೇ? ಉಗ್ರರು ಎಲ್ಲಿಂದ ಬಂದರು? ಎಂದು ಪಿ.ಚಿದಂಬರಂ ಪ್ರಶ್ನಿಸಿದ್ದಾರೆ. ನಮಗೆ ಗೊತ್ತಿರುವ ಪ್ರಕಾರ, ದಾಳಿಕೋರರು ದೇಶದಲ್ಲೇ ಬೆಳೆದವರು ಎಂದು ಪಿ.ಚಿದಂಬಂರಂ ಹೇಳಿದ್ದಾರೆ. ಉಗ್ರರು ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ನೀವು ಏಕೆ ಊಹಿಸಿಕೊಳ್ಳುತ್ತೀರಿ? ಅದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಪಿ.ಚಿದಂಬರಂ ಹೇಳಿದ್ದಾರೆ. ಅಪರೇಷನ್ ಸಿಂಧೂರ್ ವೇಳೆ ಭಾರತಕ್ಕೆ ಆದ ನಷ್ಟವನ್ನು ಸರ್ಕಾರ ಮುಚ್ಚಿಟ್ಟಿದೆ. ಯುದ್ಧದ ವೇಳೆ ಎರಡೂ ಕಡೆಯೂ ನಷ್ಟವಾಗುತ್ತೆ. ಭಾರತಕ್ಕೆ ಆದ ನಷ್ಟವನ್ನು ಮುಚ್ಚಿಡಲಾಗಿದೆ. 2ನೇ ವಿಶ್ವ ಮಹಾಯುದ್ಧದ ವೇಳೆ ಬ್ರಿಟನ್ಗೆ ಆದ ನಷ್ಟವನ್ನು ಆಗಿನ ಬ್ರಿಟನ್ ಪ್ರಧಾನಿ ವಿನಸ್ಟನ್ ಚರ್ಚಿಲ್ ಒಪ್ಪಿಕೊಂಡಿದ್ದರು. ಭಾರತವು ಈಗ ಆಗಿರುವ ನಷ್ಟವನ್ನು ಒಪ್ಪಿಕೊಳ್ಳಬೇಕು ಎಂದು ಪಿ.ಚಿದಂಬಂರಂ ಹೇಳಿದ್ದಾರೆ. ಅಪರೇಷನ್ ಸಿಂಧೂರ್ ಬಗ್ಗೆ ಭಾರತದ ಪ್ರಧಾನಿ ಮೋದಿ ಏಕೆ ಮಾತನಾಡುತ್ತಿಲ್ಲ? ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ಇಂದು ಅಪರೇಷನ್ ಸಿಂಧೂರ್ ಬಗ್ಗೆ ಚರ್ಚೆ
ಪಾರ್ಲಿಮೆಂಟ್ನಲ್ಲಿ ಇಂದು ಅಪರೇಷನ್ ಸಿಂಧೂರ್ ಬಗ್ಗೆ ಚರ್ಚೆ ನಡೆಯಲಿದೆ. ಲೋಕಸಭೆಯಲ್ಲಿ ಇಂದು ಆಡಳಿತ- ವಿಪಕ್ಷದ ನಡುವೆ ಅಪರೇಷನ್ ಸಿಂಧೂರ್ ಬಗ್ಗೆ ಟಾಕ್ ಫೈಟ್ ನಡೆಯಲಿದೆ. ಲೋಕಸಭೆಯಲ್ಲಿ ಮಧ್ಯಾಹ್ನದ ಬಳಿಕ ನಡೆಯುವ ಚರ್ಚೆಯನ್ನು ಕೇಂದ್ರದ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಆರಂಭಿಸುವರು. ಅಪರೇಷನ್ ಸಿಂಧೂರ್ ಮೇಲಿನ ಚರ್ಚೆಯನ್ನು ಆರಂಭಿಸುವ ರಾಜನಾಥ್ ಸಿಂಗ್ ಅವರು, ಭಾರತ, ಪಾಕಿಸ್ತಾನದ ಉಗ್ರಗಾಮಿ ಹೆಡ್ ಕ್ವಾರ್ಟರ್ಗಳನ್ನೇ ಧ್ವಂಸಗೊಳಿಸಿದೆ. ಭಾರತ ಹಿಂದೆಂದೂ ಈ ರೀತಿಯ ಕ್ರಮವನ್ನು ಪಾಕಿಸ್ತಾನದ ಉಗ್ರರ ವಿರುದ್ಧ ಕೈಗೊಂಡಿರಲಿಲ್ಲ. ಲಷ್ಕರ್ ಇ ತೋಯ್ಬಾ, ಜೈಷ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಗಳ ಹೆಡ್ ಕ್ವಾರ್ಟರ್ ಗಳನ್ನೇ ಭಾರತದ ಸೇನೆ ಧ್ವಂಸಗೊಳಿಸಿದೆ.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳ ಪಾಲಿಗೆ ರಣಚಂಡಿಯಾದ ರಮ್ಯಾ.. ಈಗ ನಿಂದಿಸಿದ ಫ್ಯಾನ್ಸ್ಗೆ ಢವಢವ ಶುರು..!
ಇದಕ್ಕಾಗಿ ಸೇನೆಯ ಶೌರ್ಯ, ಪರಾಕ್ರಮವನ್ನು ನಾವೆಲ್ಲಾ ಪ್ರಶಂಸಿಸಬೇಕು. ಭಾರತೀಯ ಸೇನೆ, ವಾಯುಪಡೆ, ನೌಕಾಪಡೆಗೆ ಅಭಿನಂದನೆ ಸಲ್ಲಿಸಬೇಕು. ಭಾರತೀಯ ಸೇನೆ ಗಡಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಪೆಹಲ್ಗಾಮ್ ದಾಳಿಕೋರರು ಪಾಕಿಸ್ತಾನಿಯರು ಎಂದು ರಾಜನಾಥ್ ಸಿಂಗ್ ಭಾಷಣ ಮಾಡುವ ಸಾಧ್ಯತೆ ಇದೆ. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಚರ್ಚೆಯಲ್ಲಿ ಭಾಗಿಯಾಗುವರು. ಅಪರೇಷನ್ ಸಿಂಧೂರ್ ಯಶಸ್ಸಿನ ಬಗ್ಗೆ ಅಮಿತ್ ಶಾ ಮಾತನಾಡುವರು. ಶಿಮ್ಲಾ ಶಾಂತಿ ಒಪ್ಪಂದವನ್ನು 1972 ರಲ್ಲಿ ಮಾಡಿಕೊಂಡಿದ್ದೇ ತಪ್ಪು ಎಂದು ಬಿಜೆಪಿ ಲೋಕಸಭಾ ಸದಸ್ಯರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ. 1971 ರಲ್ಲಿ ಪಾಕಿಸ್ತಾನದ ವಿರುದ್ಧದಲ್ಲಿ ಗೆದ್ದ ಬಳಿಕ ಶಿಮ್ಲಾ ಶಾಂತಿ ಒಪ್ಪಂದ ಮಾಡಿಕೊಂಡಿದ್ದೇಕೆ ಎಂದು ಬಿಜೆಪಿ ಲೋಕಸಭಾ ಸದಸ್ಯರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವರು.
ಇದನ್ನೂ ಓದಿ: ಈ ಜೋಡಿಗೆ ಕ್ರಿಕೆಟ್ ಜಗತ್ತು ಫಿದಾ.. ಆಂಗ್ಲರಿಗೆ ಜಡೇಜಾ-ಸುಂದರ್ ಕೊಟ್ಟ ಕಾಟ ಅಷ್ಟಿಷ್ಟಲ್ಲ..!
ಇನ್ನೂ ವಿಪಕ್ಷಗಳಿಂದಲೂ ಘಟಾನುಘಟಿ ನಾಯಕರು ಚರ್ಚೆಯಲ್ಲಿ ಭಾಗಿಯಾಗುವರು. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿ ಸಂಸದರು, ಡಿಎಂಕೆ ಸದಸ್ಯರು ಸೇರಿದಂತೆ ವಿಪಕ್ಷದ ನಾಯಕರು ಕೂಡ ಚರ್ಚೆಯಲ್ಲಿ ಭಾಗಿಯಾಗುವರು. ಅಪರೇಷನ್ ಸಿಂಧೂರ್ ಯಶಸ್ಸು, ಅದೇ ವೇಳೆ ಭಾರತಕ್ಕೆ ಆದ ನಷ್ಟದ ಬಗ್ಗೆಯೂ ಚರ್ಚೆಯಾಗಲಿ ಎಂದು ವಿಪಕ್ಷ ಸದಸ್ಯರು ಪಟ್ಟು ಹಿಡಿಯುವರು. ಜೊತೆಗೆ ಭವಿಷ್ಯದಲ್ಲಿ ಭಾರತದಲ್ಲಿ ಉಗ್ರರ ಚಟುವಟಿಕೆ ನಡೆಯದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚೆಗೆ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಭಾರತ ಸರ್ಕಾರ, ಇದುವರೆಗೂ ಭಾರತಕ್ಕಾದ ನಷ್ಟದ ಬಗ್ಗೆ ಮಾಹಿತಿ ನೀಡಿಲ್ಲ. ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿ ತರೂರ್ ಇಂದು ಮಾತನಾಡುವ ಸಾಧ್ಯತೆ ಕಡಿಮೆ. ಭಾರತದ ಡಿಜಿಎಂಓ ಕೂಡ ಯುದ್ಧದ ವೇಳೆ ಕೆಲವೊಂದು ನಷ್ಟಗಳು ಆಗುತ್ತಾವೆ ಎಂದಿದ್ದರು. ರಫೇಲ್ ಫೈಟರ್ ಜೆಟ್ಗಳು ಅಪರೇಷನ್ ಸಿಂಧೂರ್ ವೇಳೆ ನಿಜಕ್ಕೂ ಪತನವಾಗಿವೆಯೇ ಇಲ್ಲವೇ ಎಂಬ ಮಾಹಿತಿಗೆ ವಿಪಕ್ಷಗಳು ಆಗ್ರಹಿಸಲಿವೆ.
ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ 2 ವಿನ್ನರ್ ಸುನೀಲ್ಗೆ ಸಿಕ್ಕ ಹಣ ಎಷ್ಟು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ