/newsfirstlive-kannada/media/post_attachments/wp-content/uploads/2024/10/Abu-Dhabi-Prince.jpg)
ಅಪ್ಪ ಅಂದ್ರೆ ಆಕಾಶ, ಮಕ್ಕಳ ಗೆಲುವಲ್ಲಿ ತಮ್ಮ ನಗುವನ್ನು ಕಾಣುವ ಜೀವ ಅಂದ್ರೆ ಅದು ಅಪ್ಪ. ಮಕ್ಕಳು ಗೆದ್ದಾಗ, ಏನೋ ಸಾಧನೆ ಮಾಡಿದಾಗ ಅದೆಷ್ಟೋ ವರ್ಷ ಒಳಗಿಟ್ಟುಕೊಂಡು ಬಂದಿದ್ದ ಪ್ರೀತಿ ಕಾರಂಜಿಯಂತೆ ಚಿಮ್ಮಿ ಕುಣಿಯುತ್ತದೆ. ಅದಕ್ಕೆ ಸಾಕ್ಷಿಯೆಂಬಂತೆ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಅಬುಧಾಬಿ ರಾಜಕುಮಾರ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಅವರ ಪುತ್ರಿಯ ಭಾವುಕ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ತಂದೆ ಹಾಗೂ ಮಗಳ ಪ್ರೀತಿಯ ಕಂಡ ಜನರು ಇದು ಅಪ್ಪನ ಪ್ರೀತಿ ಅಂದ್ರೆ ಎಂದು ಕಮೆಂಟಿಸುತ್ತಿದ್ದಾರೆ.
ಇದನ್ನೂ ಓದಿ:ಇಬ್ಬರು ಕನಸಿನಲ್ಲಿ ಪರಸ್ಪರ ಮಾತನಾಡಿದರು! ಸ್ವಪ್ನ ಪ್ರಪಂಚಕ್ಕೆ ಹೊಸ ರೂಪ ಕೊಟ್ಟ ವಿಜ್ಞಾನಿಗಳು..!
ಅಬುಧಾಬಿ ರಾಜುಕುಮಾರರ ಪುತ್ರಿ ಶಮ್ಮಾ ಜೀ ಜಿತ್ಸು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಗಳ ಆಟವನ್ನು ಕಣ್ತುಂಬಿಕೊಳ್ಳಲು ರಾಜಕುಮಾರ ಅಲ್ಲಿಗೆ ಬಂದಿದ್ದರು. ಮಗಳಿಗೆ ಉತ್ಸಾಹ ತುಂಬುತ್ತಾ ಸಾಮಾನ್ಯ ಪ್ರೇಕ್ಷಕರಂತೆ ನಿಂತಿದ್ದರು. ಮಗಳ ಆಟವನ್ನು ಹೆಮ್ಮೆಯ ತಂದೆಯೊಬ್ಬ ಹೇಗೆ ಸಂಭ್ರಮಿಸುತ್ತಾರೋ ಹಾಗೆಯೇ ರಾಜಕುಮಾರ ಸಂಭ್ರಮಿಸುತ್ತಿದ್ದರು. ಯಾವಾಗ ಅವರ ಪುತ್ರಿ ಶಮ್ಮಾ ಸ್ಪರ್ಧೆಯಲ್ಲಿ ಗೆದ್ದು ಬೀಗಿದರೋ, ಅವರು ನೇರವಾಗಿ ನಡೆದಿದ್ದು ತಂದೆಯ ಬಳಿಯೇ. ತಂದೆಯ ಹತ್ತಿರ ಬರುತ್ತಿದ್ದಂತೆ ಓಡಿ ಹೋಗಿ ಬಿಗಿದು ಅಪ್ಪಿಕೊಂಡಿದ್ದಾರೆ ಶಮ್ಮಾ. ಅದೊಂದು ಕ್ಷಣವಂತೂ ಎಂತವರನ್ನೂ ಕೂಡ ಭಾವುಕಗೊಳಿಸುವಂತ ಸನ್ನಿವೇಶವಾಗಿತ್ತು. ಬಳಿಕ ತಮ್ಮ ಪುತ್ರಿಯ ಜೊತೆಗೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಎಲ್ಲ ಕ್ರೀಡಾಪಟುಗಳಿಗೂ ಬಹುಮಾನ ನೀಡಿದರು ರಾಜಕುಮಾರ.
ಇದನ್ನೂ ಓದಿ:ಭಾರತದ ಮೇಲೆ ಮತ್ತೆ ವಿಷ ಕಾರಿದ ಕೆನಡಾ; ವಿದೇಶಾಂಗ ಸಚಿವೆಯಿಂದ ದೊಡ್ಡ ಹೇಳಿಕೆ
ಈ ಒಂದು ವಿಡಿಯೋ ಕಂಡ ಸೋಷಿಯಲ್ ಮೀಡಿಯಾ ಜನರು, ತಂದೆ ತನ್ನ ಮಕ್ಕಳಲ್ಲಿ ಸದಾ ವಿಶೇಷ ಪ್ರೀತಿಯೊಂದನ್ನು ಹೊಂದಿರುತ್ತಾನೆ ಅನ್ನುವುದಕ್ಕೆ ಇದೊಂದು ನಿದರ್ಶನ ಎಂದು ಹೇಳಿದ್ದಾರೆ. ಮತ್ತೊಬ್ಬರು ಅದ್ಭುತ, ಇದು ನಿಜಕ್ಕೂ ಕಣ್ಣಂಚು ಒದ್ದೆ ಮಾಡುವ ಕ್ಷಣ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಮ್ಮ ಬದುಕಿನ ನಿಜವಾದ ಬೆಂಬಲಿಗರು ಅಂದ್ರೆ ಅದು ಅವರೇ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ