newsfirstkannada.com

ಮೇಕಪ್ ರಾಣಿ ಪವಿತ್ರಾ ಗೌಡಗೆ ಇದೆಂಥಾ ಕ್ರೇಜ್‌.. ಪೆಡಿಕ್ಯೂರ್‌, ಮೆಡಿಕ್ಯೂರ್‌ ಬೆನ್ನಲ್ಲೇ ಲಿಪ್‌ಸ್ಟಿಕ್ ರಹಸ್ಯ ಬಯಲು

Share :

Published June 27, 2024 at 6:09am

  ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ A1 ಆರೋಪಿಯಾಗಿರುವ ಪವಿತ್ರಾ ಗೌಡ

  ಪವಿತ್ರಾ ಗೌಡ ಮಾಡಿದ್ದ ಆ ತಪ್ಪಿನಿಂದ ವಿಜಯನಗರ ಪಿಎಸ್ಐಗೆ ನೋಟಿಸ್

  ರೇಣುಕಾಸ್ವಾಮಿ ಕೊಲೆಯಾದ ಮೇಲೆ ಮೆಡಿಕ್ಯೂರ್, ಪೆಡಿಕ್ಯೂರ್‌ಗೆ ಹೋದ್ರು

ಸ್ಯಾಂಡಲ್‌ವುಡ್ ಸ್ಟಾರ್ ನಟನೊಬ್ಬನ ಸಂಸಾರದ ಹಾದಿ ತಪ್ಪಲು ಕೊಲೆ ಆರೋಪ ಹೊತ್ತು ಕಂಬಿ ಹಿಂದೆ ಬಂಧಿಯಾಗಲು ಅಮಾಯಕ ಬಡ ಕುಟುಂಬದ ಹುಡುಗರ ಭವಿಷ್ಯಕ್ಕೆ ಕಾರ್ಮೊಡ ಆವರಿಸಲು ಕಾರಣವಾಗಿದ್ದು ಇದೇ ಪವಿತ್ರಾಗೌಡ. ಒಂದು ಜೀವ ಹೋಗಿದೆ. ಹತ್ತಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಮನೆ ಮಗನನ್ನ ಕಳೆದುಕೊಂಡು ಹೆತ್ತವರ ಆಕ್ರಂದನ. ಗಂಡನನ್ನ ಕಳೆದುಕೊಂಡ ಹೆಂಡತಿಯ ನೋವು. ಸಾಲು ಸಾಲು ದುರಂತಗಳಿಗೆ ಅನೇಕ ಕಾರಣಗಳಲ್ಲಿ ಒಂದು ಕಾರಣ ಇದೇ ಇದೇ ಪವಿತ್ರಾಗೌಡ.

ಬ್ಯೂಟಿ ಕಾನ್ಷಿಯಸ್ ಪವಿತ್ರಾಗೌಡ ಮೇಕಪ್​ ಇಲ್ಲದೇ ಇರಲ್ವಾ?
ಪವಿತ್ರಾಗೌಡ ಜಾಗದಲ್ಲಿ ಮನಸಾಕ್ಷಿ ಉಳ್ಳವರು ಬೇರೆ ಯಾರೇ ಆಗಿದ್ರೂ. ಅವರ ಮುಖದಲ್ಲೊಂದು ಪಾಪಪ್ರಜ್ಞೆಯ ಭಾವ ಇರುತ್ತಿತ್ತು. ಆದ್ರೆ ಪವಿತ್ರಾಗೆ ಮನಸಾಕ್ಷಿ ಇಲ್ವಾ? ಅಥವಾ ಈಕೆ ಪಾಪಪ್ರಜ್ಞೆಯೇ ಇಲ್ಲದ ನಿಷ್ಕರುಣಿನಾ? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ: ಅದೊಂದು ತಪ್ಪಿನಿಂದ ಚಿಕ್ಕ ವಯಸ್ಸಿಗೆ ದುರಂತ ಅಂತ್ಯ.. ತೇಜಸ್ ಸಾವಿನ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ! 

ನೀಲಿ ಬಣ್ಣದ ಚೂಡಿದಾರ ಹಾಕೊಂಡು ಮನೆ ಮೆಟ್ಟಿಲು ಇಳ್ಕೊಂಡು ಬರ್ತಿರುವ ಪವಿತ್ರಾಗೌಡ ಮುಖದಲ್ಲಿ ಒಂದು ನಗುವಿದೆ. ಮನಸಾಕ್ಷಿ ಇಲ್ಲದವರಿಗೆ ಇದೆಲ್ಲ ಕಾಮನ್. ಆದ್ರೆ ಈ ವೇಳೆ ಈಕೆ ಮುಖ ಫಳ ಫಳ ಅಂತ ಹೊಳೀತಾ ಇತ್ತು. ಈ ವೇಳೆ ಪವಿತ್ರಾ ಮಹಿಳಾ ಸಾಂತ್ವಾನ ಕೇಂದ್ರದಲ್ಲಿದ್ದರು.

ಅವತ್ತು ಇದೇ ಸಾಂತ್ವಾನ ಕೇಂದ್ರದಿಂದಲೇ ಈಕೆಯನ್ನ ಸ್ಥಳ ಮಹಜರಿಗೆ ಅಂತ ಮನೆಗೆ ಕರ್ಕೊಂಡು ಬಂದಿದ್ದರು. ಆದ್ರೆ ಮನೆ ಒಳಗೆ ಹೋದ ಪವಿತ್ರಾಗೂ ಮಹಜರು ಕಾರ್ಯ ಮುಗಿದ್ಮೇಲೆ ಬಂದ ಪವಿತ್ರಾಗೂ ವ್ಯತ್ಯಾಸ ಇತ್ತು. ಅಂದ್ರೆ ಏನನ್ನೂ ಸಾಧಿಸಿ ಬಂದಿರುವ ತೇಜಸ್ಸು ಆಕೆ ಮುಖದಲ್ಲಿತ್ತು. ಹಾಗಂತ ಅದು ಹೇಳಿಕೊಳ್ಳುವ ಸಾಧನೆಯೇನು ಅಲ್ಲ.

ಕೊಲೆ ಕೇಸ್‌ನಲ್ಲಿ ಮಹಜರು ದಿನ ಪವಿತ್ರಾಗೌಡ ವಿಡಿಯೋದಲ್ಲಿ ಸ್ಮೈಲ್ ಮಾಡ್ಕೊಂಡೇ ಮನೆಯಿಂದ ಹೊರಗಡೆ ಬಂದಿದ್ದರು. ಇದಷ್ಟೇ ಅಲ್ಲಾ ಮಾಧ್ಯಮಗಳನ್ನ ನೋಡಿ ಮೂಗು ಕೂಡ ಮುರಿದಿದ್ದರು. ಆದ್ರೆ ಅವತ್ತು ಮಹಜರಿಗೆ ಅಂತ ಮನೆಗೆ ಬಂದಿದ್ದ ಪವಿತ್ರಾ ಮಾಡಿದ ಐನಾತಿ ಕೆಲಸಕ್ಕೆ ಪಾಪ ಅಮಾಯಕ ಲೇಡಿ ಇನ್​ಸ್ಪೆಕ್ಟರ್​ಗೆ ಸಂಕಷ್ಟ ಎದುರಾಗಿದೆ. ದರ್ಶನ್ ಸೇರಿ 13 ಕುಟುಂಬಗಳ ಬದುಕಿನ ಮೇಲೆ ಚಪ್ಪಡಿ ಕಲ್ಲು ಎಳೆದಿರುವ ಈ ರೀಲ್ಸ್ ರಾಣಿಯಿಂದ, ಈಗ ವಿಜಯನಗರದ ಲೇಡಿ ಪಿಎಸ್​ಐ ವಿಚಾರಣೆ ಎದುರಿಸುವ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: ಹೆಂಡತಿಯನ್ನ ಕಟ್ಟಿ ಹಾಕಿ, ಗಂಡನಿಗೆ ಚೂರಿ ಇರಿತ​.. ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ ಗ್ಯಾಂಗ್ 

ಮೇಕಪ್ ರಾಣಿ ಪವಿತ್ರಾ ಗೌಡಗೆ ಇದೆಂಥಾ ಕ್ರೇಜ್‌?
ಬಹುಶಃ ಕೊಲೆ ಆರೋಪ ಹೊತ್ತಿರುವ ಯಾರ ಮುಖದಲ್ಲೂ ಇಂಥಾ ಹೊಳಪು ನೀವು ನೋಡಿರಲ್ಲ. ಒಂದು ಕೊಲೆಯಾಗಿದೆ. ಅದೇ ಕೊಲೆಯಲ್ಲಿ ಆಕೆ ಬಂಧನವಾಗಿದೆ.. ಆದ್ರೂ ಈ ಮೇಕಪ್ ರಾಣಿಗೆ ಮಾತ್ರ ತನ್ನ ವೈಯ್ಯಾರದ ಚಿಂತೆ. ಅದೇನು ಅಜ್ಜಿಗೆ ಅರಿವೆ ಚಿಂತೆಯಾದ್ರೆ ಮೊಮ್ಮಗಳಿಗೆ ಮದುವೆ ಚಿಂತೆ ಅಂತಾರಲ್ಲ. ಹಾಗೆ ಪೊಲೀಸರು ಕೊಲೆಗೆ ಸಂಬಂಧಪಟ್ಟ ವಸ್ತುಗಳನ್ನ ಜಪ್ತಿ ಮಾಡ್ತಿದ್ರೆ ಈ ಐನಾತಿ ಗ್ಯಾಪ್‌ನಲ್ಲಿ ಮೇಕಪ್​ ಮಾಡ್ಕೊಂಡಿದ್ದಾಳಂತೆ. ಅಲೆಲೆ ಈಕೆ ಮಾಡಿರುವ ಸಿನಿಮಾಗೂ ಈಕೆ ಮಾಡೋ ಕೆಲಸಕ್ಕೂ ಕರೆಕ್ಟ್ ಆಗಿದೆ ನೋಡಿ.. ಛತ್ರಿಗಳು ಸಾರ್. ಛತ್ರಿಗಳು.

ಅಯ್ಯೋ ಮೇಕಪ್.. ಅಂತ ನೀವು ಶಾಕ್ ಆಗಬಹುದು.. ಆದ್ರೆ ಇದು ಸತ್ಯ.. ನಡೆದಿರೋದನ್ನೆ ನಾವು ನಿಮಗೆ ಹೇಳ್ತಿರೋದು. ಕಳೆದ ಜೂನ್ 15ರಂದು ಮಹಜರಿಗೆ ಅಂತ ಪೊಲೀಸರು ರೀಲ್ಸ್ ರಾಣಿ ಪವಿತ್ರಾಳನ್ನ ಮನೆಗೆ ಕರ್ಕೊಂಡು ಬಂದಿದ್ರೆ ಈಕೆ ವಾಶ್‌ರೂಮ್‌ಗೆ​ ಹೋಗಿ ಬರ್ತಿನಿ ಅಂತ ಹೋಗಿ ಅಲ್ಲಿ ಮೇಕಪ್ ಮಾಡ್ಕೊಂಡು ಬಂದಿದ್ದಾಳೆ. ತುಟಿಗೆ ಲಿಪ್​​ಸ್ಟಿಕ್ ಹಾಕೊಂಡು ಬಂದಿದ್ದಾರೆ. ಆದ್ರೆ ಅವತ್ತು ಇದು ಯಾರ ಗಮನಕ್ಕೂ ಬಂದಿಲ್ಲ. ಈಗ ವಿಡಿಯೋಗಳಲ್ಲಿ ಈಕೆ ವೈಯಾರ ನೋಡಿ ಹಿರಿಯ ಅಧಿಕಾರಿಗಳು ಈ ಬಗ್ಗೆ ಅವತ್ತು ಪವಿತ್ರಾಳನ್ನ ಕರ್ಕೊಂಡು ಬಂದಿದ್ದ ಮಹಿಳಾ ಅಧಿಕಾರಿಯನ್ನ ಪ್ರಶ್ನೆ ಮಾಡ್ದಾಗ ಪವಿತ್ರಾಗೌಡ ಮೇಕಪ್ ರಹಸ್ಯ ಬಯಲಾಗಿದೆ.

ಲಿಪ್‌ಸ್ಟಿಕ್ ಹಚ್ಚಿದ್ದ ಪವಿತ್ರಾಗೌಡ.. PSI ನೇತ್ರಾಗೆ ಸಂಕಷ್ಟ
ಅವತ್ತು ಮಹಜರಿಗೆ ಅಂತ ಬಂದಿದ್ದ ಪವಿತ್ರಾ ಮನೆಯಲ್ಲಿದ್ದ ವಾಷ್​ರೂಮ್​​ಗೆ ಹೋಗಿ ತುಟಿಗೆ ಲಿಪ್​ಸ್ಟಿಕ್ ಹಚ್ಚಕೊಂಡು ಬಂದಿದ್ದರು. ಈಗ ಈ ವಿಚಾರ ರಿವೀಲ್ ಆಗಿದ್ದು, ಅವತ್ತು ಲಿಪ್​ಸ್ಟಿಕ್ ಹಚ್ಚಿಕೊಳ್ಳೋದಕ್ಕೆ ಅವಕಾಶ ಮಾಡಿಕೊಟ್ಟಿದ್ದಾಗಿ ವಿಜಯನಗರ ಪಿಎಸ್​ಐ ನೇತ್ರಾಗೆ ನೋಟಿಸ್ ನೀಡಲಾಗಿದೆ.

ವಿಚಾರ ಏನಂದ್ರೆ ಅವತ್ತು ಲಿಪ್​ಸ್ಟಿಕ್ ಹಚ್ಕೊಂಡು ಬಂದಿದ್ದು, ಈ ಪೊಲೀಸ್ ಅಧಿಕಾರಿಗೂ ಗೊತ್ತಿರಲಿಲ್ಲ. ಜೂನ್ 15 ರಂದು ಪವಿತ್ರಾಗೌಡ ಮಾಡಿದ ಕೆಲಸಕ್ಕೆ ಪಾಪ PSI ನೇತ್ರಾಗೆ ಸಂಕಷ್ಟ ಎದುರಾಗಿದೆ.ಕರ್ತವ್ಯ ಲೋಪದಡಿ ವಿಜಯನಗರ ಮಹಿಳಾ ಪಿಎಸ್ಐಗೆ, ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ನೋಟಿಸ್ ನೀಡಿದ್ದಾರೆ. ಇಷ್ಟು ದಿನ ಈ ಪವಿತ್ರಾಗೌಡ ಕಾರಣಕ್ಕೆ ದರ್ಶನ್ ಆ್ಯಂಡ್ ಗ್ಯಾಂಗ್​ ಸಂಕಟ ಅನುಭವಿಸಿದ್ರೆ.. ಈಕೆ ಮಾಡಿದ ಘನಂದಾರಿ ಕೆಲಸದಿಂದಾಗಿ ಈಗ ಪೊಲೀಸ್ ಅಧಿಕಾರಿಗಳು ಕೂಡ ವಿಚಾರಣೆ ಎದುರಿಸುವಂತ ಪರಿಸ್ಥಿತಿ ಬಂದಿದೆ.

ಕೊಲೆಯಾದ ಮಾರನೇ ದಿನವೂ ಸಲೂನ್​​ಗೆ ಹೋಗಿದ್ದ ಪವಿತ್ರಾಗೌಡ
ಪವಿತ್ರಾ ಗೌಡ ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳದೇ ಇದ್ರೂ ಆಕೆಗೆ ಬಣ್ಣದ ಲೋಕದ ಬಗೆಗಿನ ಆಸಕ್ತಿ ಚೂರೂ ಕಡಿಮೆಯಾಗಿರಲಿಲ್ಲ. ನಿಜ ಹೇಳ್ಬೇಕು ಅಂದ್ರೆ, ಆಕೆಗೆ ಸೌಂದರ್ಯದ ಬಗ್ಗೆ ಹೆಚ್ಚು ಗಮನವಿತ್ತಂತೆ. ಹೀಗಾಗಿ, ತಾವು ಸಣ್ಣ ಆಗ್ಬೇಕು, ಫಿಟ್​ನೆಸ್ ಮೇಂಟೇನ್​ ಮಾಡ್ಬೇಕು ಅಂತಾ ಜಿಮ್ಮು, ಏರೋಬಿಕ್ಸ್​ ಅಂತೆಲ್ಲಾ ಸೇರಿಕೊಂಡಿದ್ದರು ಎನ್ನಲಾಗಿದೆ. ಇನ್ನು, ಪವಿತ್ರಾ ತಮ್ಮ ಮೇಕಪ್​ ಬ್ಯೂಟಿಗಾಗಿಯೇ ಸಾವಿರಾರು ರೂಪಾಯಿ ಹಣವನ್ನ ಈಸಿಯಾಗಿ ಖರ್ಚು ಮಾಡ್ತಿದ್ರಂತೆ. ಪವಿತ್ರಾಗೌಡಗ ಸೌಂದರ್ಯದ ಮೇಲೆ ಅದೆಷ್ಟು ಕ್ರೇಜ್ ಅನ್ನೋದಕ್ಕೆ ಕೊಲೆಯಾದ ಮಾರನೇ ದಿನ ಆಕೆ ಸಲೂನ್​ಗೆ ಹೋಗಿದ್ದೇ ದೊಡ್ಡ ಉದಾಹರಣೆ. ಕೋರಮಂಗಲದಲ್ಲಿರುವ ಸಲೂನ್‌ಗೆ ಹೋಗಿ, ಪೆಡಿಕ್ಯೂರ್, ಮೆಡಿಕ್ಯೂರ್ ಮಾಡಿಸ್ಕೊಂಡು 3 ಗಂಟೆ ಕಳೆದಿದ್ದಳು. ಈಗ ಇದೇ ಮೇಕಪ್​ ಕಾರಣಕ್ಕಾಗಿಯೇ ಅಮಾಯ ಲೇಡಿ ಪಿಎಸ್​ಐ ಸಂಕಷಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ‘ಅತ್ತಿಗೆ ನಿಮ್ಮ ಜೊತೆ ನಾವಿದ್ದೇವೆ’; ದರ್ಶನ್​ ಪತ್ನಿ ವಿಜಯಲಕ್ಷ್ಮಿಗೆ ಧೈರ್ಯ ತುಂಬಿದ ಅಭಿಮಾನಿಗಳು

ಮನುಷ್ಯ ಮನಸಾಕ್ಷಿ ಇದ್ದವರಿಗೆ ಜೀವ ಮತ್ತು ಜೀವನದ ಬೆಲೆ ಗೊತ್ತಿರುತ್ತೆ. ಆದ್ರೆ ಪವಿತ್ರಗೌಡನಂತವರಿಗೆ ಜೀವಕ್ಕಿಂತ ತಮ್ಮ ಸ್ವಾರ್ಥವೇ ಹೆಚ್ಚಾಗಿರುತ್ತೆ. ಇಡೀ ಪ್ರಕರಣಕ್ಕೆ ರೂವಾರಿಯಾಗಿರುವ ಪವಿತ್ರಾಗೌಡ ಈಗ ಪೊಲೀಸ್ ಅಧಿಕಾರಿಯ ಸಂಕಷ್ಟಕ್ಕೂ ಕಾರಣವಾಗಿದ್ದೂ ನಿಜಕ್ಕೂ ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಕಪ್ ರಾಣಿ ಪವಿತ್ರಾ ಗೌಡಗೆ ಇದೆಂಥಾ ಕ್ರೇಜ್‌.. ಪೆಡಿಕ್ಯೂರ್‌, ಮೆಡಿಕ್ಯೂರ್‌ ಬೆನ್ನಲ್ಲೇ ಲಿಪ್‌ಸ್ಟಿಕ್ ರಹಸ್ಯ ಬಯಲು

https://newsfirstlive.com/wp-content/uploads/2024/06/pavitra1-1.jpg

Load More