newsfirstkannada.com

ಶಾಸಕ ಚೆನ್ನಾರೆಡ್ಡಿ ಪಾಟೀಲ್ 30 ರಿಂದ 40 ಲಕ್ಷ ಹಣ ಕೇಳಿದ್ದಾರೆ.. PSI ಪರಶುರಾಮ ಪತ್ನಿಯಿಂದ ಗಂಭೀರ ಆರೋಪ

Share :

Published August 3, 2024 at 10:34am

    ಯಾದಗಿರಿ ನಗರ ಠಾಣೆಯ ಪಿಎಸ್ಐ ಪರಶುರಾಮ ಹಠಾತ್ ನಿಧನ

    ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮೇಲೆ ಗಂಭೀರ ಆರೋಪ ಮಾಡಿದ ಪಿಎಸ್​​ಐ ಪತ್ನಿ

    ನಾವು ಎಸ್ಸಿ ಆಗಬೇಕು ಅಂತ ದೇವರಲ್ಲಿ ಕೇಳ್ಕೊಂಡು ಬಂದಿರ್ತಿವಾ? ಎಂದು ಕಣ್ಣೀರು

ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ  ನಿಧನರಾಗಿದ್ದಾರೆ. ಇವರ ನಿಧನದ ಬಳಿಕ ಪತ್ನಿ ಶ್ವೇತಾ ಮಾಧ್ಯಮ ಮುಂದೆ ಬಂದು ಪ್ರತಿಕ್ರಿಯಿಸಿದ್ದು, ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮದ ಮುಂದೆ ಪರಶುರಾಮ ಪತ್ನಿ ಶ್ವೇತಾರವರು, ‘ಶಾಸಕ ಚೆನ್ನಾರೆಡ್ಡಿ ಪಾಟೀಲ್ 30/ 40 ಲಕ್ಷ ಹಣ ಕೇಳಿದ್ದಾರೆ. ಸಾಕಷ್ಟು ಭಾರೀ ಹಣ ಕೇಳ್ತಿರುವ ಬಗ್ಗೆ ‌ನನಗೆ ಹೇಳಿದ್ದಾರೆ. ಎಂಎಲ್ಎ ಹಾಗೂ ಎಂಎಲ್ಎ ಮಗ ಹಣ ಕೇಳಿದ್ದಾರೆ. ಅವರ ಇಬ್ಬರನ್ನೂ ಕರೆಸಿ ಅವರು ಅರೆಸ್ಟ್ ಮಾಡಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಪರಶುರಾಮ ಸಾವು; ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ, ಮೃತ ಅಧಿಕಾರಿಯ ಪತ್ನಿಯೂ ಭಾಗಿ

ಬಳಿಕ ಮಾತು ಮುಂದುವರೆಸಿದ ಅವರು, ‘ಒಬ್ಬ ಪೊಲೀಸ್ ಅಧಿಕಾರಿಗೆ ಆದ್ರೂ ಖಾಕಿ ಧರಿಸಿದವರೆ ಸಪೋರ್ಟ್ ಮಾಡ್ತಿಲ್ಲ. ಯಾರೋ ಎಂಎಲ್ಎಗೆ ಸಪೋರ್ಟ್ ಮಾಡ್ತಿದ್ದಾರೆ. ಅವರು ದುಡ್ಡು ಕೊಡ್ತಾರೆ, ಆದ್ರೂ ಅವರಿಗೆ ಸಪೋರ್ಟ್ ಮಾಡ್ತಾರೆ. ಇನ್ನೂ ಎಷ್ಟು ದುಡ್ಡು ಕೊಟ್ಟು ಎಂಎಲ್ಎಯನ್ನು ಸಾಕ್ತಿರಾ?. ಹಗಲು ರಾತ್ರಿ, ಹೆಂಡ್ತಿ ಮಕ್ಕಳನ್ನ ಬಿಟ್ಟು ದುಡಿತೀರಾ.. ಯಾರಿಗೋಸ್ಕರ? ಎಂಎಲ್ಎಗೋಸ್ಕರ ದುಡಿತೀರಾ..? ಎಷ್ಟು ದಿನ ಎಂಎಲ್ಎಗೆ ಊಟ ಹಾಕ್ತಿರಾ..?. ದುಡ್ಡಿನ ಊಟ ಹಾಕ್ತಿದ್ದೀರಾ..? ಎಷ್ಟು ದಿನ ಹಾಕ್ತಿರಾ..? ಎಫ್ಐಆರ್ ದಾಖಲಿಸಿಕೊಂಡು ನಮಗೆ ನ್ಯಾಯ ಕೊಡಿಸಿ’ ಎಂದು ಪರಶುರಾಮ ಪತ್ನಿ ಶ್ವೇತಾರವರು ಹೇಳಿದ್ದಾರೆ.

ಇದನ್ನೂ ಓದಿ: VIDEO: ರಸ್ತೆ ದಾಟುತ್ತಿದ್ದ ವಿಶೇಷ ಚೇತನ ವ್ಯಕ್ತಿ ಮೇಲೆ ಹರಿದ ಲಾರಿ.. ಕ್ಷಣಾರ್ಧದಲ್ಲೇ ಸಾವು

‘ತಪ್ಪು ಮಾಡಿದರೆ ಅವರನ್ನ ತೆಗೆಬೇಕಿತ್ತು. ಜಾತಿ ಕಾರಣಕ್ಕಾಗಿ ಏಕೆ ತೆಗೆದ್ದೀರಿ. ಈ ಜನರೇಷನ್ ನಲ್ಲೂ ಜಾತಿ ವ್ಯವಸ್ಥೆ ಏನು?. ನಾವು ಎಸ್ಸಿ ಆಗಬೇಕು ಅಂತ ದೇವರಲ್ಲಿ ಕೇಳ್ಕೊಂಡು ಬಂದಿರ್ತಿವಾ?. ಎಂಎಲ್ಎ ತಪ್ಪಿದೆ ಅವರು ಬರಬೇಕು. ಜಾತಿ, ಹಣಕ್ಕಾಗಿ ನನ್ನ ಗಂಡನ ಜೀವ ಹೋಯ್ತು. ನೀವೆಲ್ಲ ಒಬ್ಬ ದಕ್ಷ ಅಧಿಕಾರಿಯನ್ನ ಕಳೆದುಕೊಂಡಿದ್ದೀರಿ. ಎಸ್ಪಿ ಮೇಡಂ ನಮಗೆ ಎಫ್ಐಆರ್ ಕೊಡ್ತಿನಿ ಬನ್ನಿ ಅಂದ್ರು. ಅವರನ್ನ ನಂಬ್ಕೊಂಡು ಖಾಸಗಿ ಆಸ್ಪತ್ರೆಯಿಂದ ಇಲ್ಲಿಗೆ ಬಂದಿದ್ದೀವಿ. ನನ್ನ ಮಕ್ಕಳಿಗೆ ನಾನು ಏನಂತ ಹೇಳಬೇಕು. ಪೊಲೀಸ್ ಇಲಾಖೆಯಲ್ಲಿ ‌ಮಾನವೀಯತೆ ಇಲ್ಲ. ಎಂಟು ತಿಂಗಳ ಗರ್ಭಿಣಿ ಇದ್ದೀನಿ ರಸ್ತೆಯಲ್ಲಿ ಕುರಿಸಿದ್ದಾರೆ. ಪೋಲಿಸ್ ಅಧಿಕಾರಿಗೆ ನ್ಯಾಯ ಸಿಗ್ತಿಲ್ಲ. ಇನ್ನೂ ಸಾರ್ವಜನಿಕರಿಗೆ ಎಲ್ಲಿ ನ್ಯಾಯ ಸಿಗುತ್ತೆ’ ಎಂದು ಪರಶುರಾಮ ಪತ್ನಿ ಶ್ವೇತಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಸಕ ಚೆನ್ನಾರೆಡ್ಡಿ ಪಾಟೀಲ್ 30 ರಿಂದ 40 ಲಕ್ಷ ಹಣ ಕೇಳಿದ್ದಾರೆ.. PSI ಪರಶುರಾಮ ಪತ್ನಿಯಿಂದ ಗಂಭೀರ ಆರೋಪ

https://newsfirstlive.com/wp-content/uploads/2024/08/yadagiri-PSI.jpg

Load More