ಮಣ್ಣಲ್ಲಿ ಮಣ್ಣಾದ PSI ಪರಶುರಾಮ.. ಕಾಂಗ್ರೆಸ್ MLA ವಿರುದ್ಧ ಆಕ್ರೋಶ; CID ತನಿಖೆಗೆ ಸರ್ಕಾರ ಆದೇಶ

author-image
Gopal Kulkarni
Updated On
ಮಣ್ಣಲ್ಲಿ ಮಣ್ಣಾದ PSI ಪರಶುರಾಮ.. ಕಾಂಗ್ರೆಸ್ MLA ವಿರುದ್ಧ ಆಕ್ರೋಶ; CID ತನಿಖೆಗೆ ಸರ್ಕಾರ ಆದೇಶ
Advertisment
  • ಸ್ವಗ್ರಾಮ ಸೋಮನಾಳದಲ್ಲಿ ಪಿಎಸ್​ಐ ಪರಶುರಾಂ್ ಅಂತ್ಯಕ್ರಿಯೆ
  • ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ, ನ್ಯಾಯಕ್ಕಾಗಿ ಆಗ್ರಹ
  • ಆಕ್ರೋಶ ಭುಗಿಲೆದ್ದ ಬೆನ್ನಲ್ಲಿಯೇ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

ಯಾದಗಿರಿ ಪಿಎಸ್​ಐ ಪರಶುರಾಮ ಅವರ ಅನುಮಾನಾಸ್ಪದ ಸಾವು ರಾಜ್ಯದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ. ಪ್ರತಿಭಟನೆ, ಆಕ್ರೋಶ ಇದೆಲ್ಲದರ ನಡುವೆಯೇ ಈಗ ಪಿಎಸ್​ಐ ಪರಶುರಾಮ ಅಂತ್ಯಕ್ರಿಯೆ ಅವರ ಹುಟ್ಟೂರಾದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆದಿದೆ. ಮೃತದೇಹ ಹುಟ್ಟೂರಿಗೆ ಬಂದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

publive-image

ಪಿಎಸ್‌ಐ ಅನುಮಾನಾಸ್ಪದ ಸಾವು ಖಂಡಿಸಿ ಸ್ವಗ್ರಾಮದಲ್ಲಿ ಪ್ರತಿಭಟನೆಯೂ ನಡೆಯಿತು. ಗ್ರಾಮಕ್ಕೆ ಸಚಿವ ಶಿವರಾಜ್ ತಂಗಡಗಿ ಬಂದು ಅಂತಿಮ ದರ್ಶನ ಪಡೆದರು. ಈ ವೇಳೆ ನಮಗೆ ನ್ಯಾಯ ಬೇಕು, ತಪ್ಪಿತಸ್ಥರನ್ನು  ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಲಾಯಿತು.

ಇದನ್ನೂ ಓದಿ:ಯಾದಗಿರಿ PSI ಅನುಮಾನಾಸ್ಪದ ಸಾವಿಗೆ ದೊಡ್ಡ ಟ್ವಿಸ್ಟ್.. ಅಸಲಿಗೆ ಆಗಿದ್ದೇನು? ಕಂಪ್ಲೀಟ್ ಮಾಹಿತಿ ಇಲ್ಲಿದೆ

publive-image
ಯಾದಗಿರಿಯಿಂದ ಸೋಮನಾಳಕ್ಕೆ ಜೀರೋ ಟ್ರಾಫಿಕ್​ನಲ್ಲಿ ಮೃತದೇಹ ಪೊಲೀಸ್ ಇಲಾಖೆಯವರು ತೆಗೆದುಕೊಂಡು ಬಂದರು. ಸರ್ಕಾರಿ ಶಾಲೆಯ ಎದುರುಗಡೆ ಇರುವ ಅವರ ಜಮೀನಿನಲ್ಲಿ ಪರಶುರಾಮ್ ಅವರ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು. ಈ ವೇಳೆ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿತ್ತು.

publive-image

ಇದನ್ನೂ ಓದಿ: BREAKING: ಪಿಎಸ್‌ಐ ಪರಶುರಾಮ ಸಾವಿನ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್; ಕಾಂಗ್ರೆಸ್‌ ಶಾಸಕ ಅರೆಸ್ಟ್ ಆಗ್ತಾರಾ?

ಆಕ್ರೋಶ ಭುಗಿಲೇಳುತ್ತಿದ್ದಂತೆ CID ತನಿಖೆಗೆ ಆದೇಶ

PSI ಪರಶುರಾಮ್ ಅವರ ಅನುಮಾನಾಸ್ಪದ ಸಾವು ರಾಜ್ಯದ ಹಲವೆಡೆ ದೊಡ್ಡ ಮಟ್ಟದ ಆಕ್ರೋಶವನ್ನೇ ಬಿತ್ತಿತ್ತು. ಪರಶುರಾಮ್ ಪತ್ನಿ ಶ್ವೇತಾ ಅವರು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತನ್ನೂರ್​ ಹಾಗೂ ಅವರ ಪುತ್ರನ ವಿರುದ್ಧವೇ ನೇರಾನೇರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪರಶುರಾಮ್ ಅವರ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವರ್ಗಾವಣೆ ಮಾಡಿದೆ. ಕೂಲಂಕುಷ ತನಿಖೆಗೆ ಸಿಐಡಿ ಡಿಜಿಪಿಗೆ ಗೃಹ ಇಲಾಖೆ ಪತ್ರ ಬರೆಯಲಾಗಿದ್ದು, ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಪುತ್ರನ ಮೇಲೆ ಎಫ್​ಐಆರ್ ದಾಖಲಾಗಿದೆ. ಕಾಂಗ್ರೆಸ್ ಶಾಸಕರ ಮೇಲೆ ಎಫ್​ಐಆರ್ ದಾಖಲಾದ ಬೆನ್ನಲ್ಲೇ ಸರ್ಕಾರದಿಂದ ಸಿಐಡಿ ತನಿಖೆಗೆ ಆದೇಶ ಹೊರಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment