/newsfirstlive-kannada/media/post_attachments/wp-content/uploads/2024/08/psi-parashuram.jpg)
ಯಾದಗಿರಿ ಪಿಎಸ್​ಐ ಪರಶುರಾಮ​ ಅನುಮಾನಸ್ಪದ ಸಾವು ವರ್ಗಾವಣೆ ದಂಧೆಗೆ ಬಲಿಯಾದರಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ. ಈ ಬಗ್ಗೆ ಖುದ್ದು ಪಿಎಸ್​ಐ ಪತ್ನಿ ಗಂಭೀರ ಆರೋಪ ಮಾಡಿದ್ದರು. ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಮಗ ಪಂಪನಗೌಡ ವರ್ಗಾವಣೆಗಾಗಿ ಹಣ ಕೇಳಿದ್ದರು. ಇದೇ ಕಾರಣಕ್ಕೆ ತನ್ನ ಗಂಡ ಮಾನಸಿಕವಾಗಿ ಕುಗ್ಗಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/08/PSI-DEATH.jpg)
ಇದನ್ನೂ ಓದಿ:ಯಾದಗಿರಿ PSI ಅನುಮಾನಾಸ್ಪದ ಸಾವಿಗೆ ದೊಡ್ಡ ಟ್ವಿಸ್ಟ್.. ಅಸಲಿಗೆ ಆಗಿದ್ದೇನು? ಕಂಪ್ಲೀಟ್ ಮಾಹಿತಿ ಇಲ್ಲಿದೆ
ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೊಪ್ಪಳದ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಪಿಎಸ್​ಐ ಪರಶುರಾಮ​ ತಂದೆ ಜನಕಮುನಿ ಹಾಗೂ ತಾಯಿ ಗಂಗಮ್ಮ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ನನ್ನ ಮಗ ವರ್ಗಾವಣೆಯಾದ ಮೇಲೆ ಹಣಬೇಕು ಎಂದು ಹೇಳಿದ್ದ. ಹಣವನ್ನು ನಿಮ್ಮ ಅಣ್ಣನ ಬಳಿ ಕೇಳು ಎಂದು ಹೇಳಿದ್ದೆ. ಬಡತನದಲ್ಲಿ ಕೂಲಿ ಕೆಲಸ ಮಾಡಿ ಓದಿದ್ದ ಅಂತಾ ತಾಯಿ ಗಂಗಮ್ಮ ಕಣ್ಣೀರು ಹಾಕುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/08/psi-parashuram1.jpg)
ಮಗನೊಂದಿಗೆ ವಾಸವಿದ್ದ ಗಂಗಮ್ಮ ಕಳೆದ ಸೋಮವಾರ ಸ್ವಗ್ರಾಮಕ್ಕೆ ಮರಳಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರ ತಾಯಿ, ನನ್ನ ಮಗ ಸಾಯುವ ಮುನ್ನಾ ಎರಡು ದಿನ ಹಿಂದೆ ಗ್ರಾಮಕ್ಕೆ ಬಂದೆ. ನನ್ನ ಬಳಿ ಪರಶುರಾಮ​ ವರ್ಗಾವಣೆ ವಿಷಯ ಪ್ರಸ್ತಾಪಿಸಿದ್ದ. ಅಷ್ಟೊಂದು ಹಣವನ್ನು ಎಲ್ಲಿಂದ ಕೊಡುತ್ತಾನೆ ಎಂದು ಅಸಹಾಯಕತೆ ತೋಡಿಕೊಂಡಿದ್ದ. ಅವನ ಮನಸು ಅರಿಯದೇ ಹೋದೆ. ನಾವು ಬಡವರು, ಅಷ್ಟು ಹಣ ಎಲ್ಲಿಂದ ತರಬೇಕು. ಇರುವ ಕೆಲಸ ಮಾಡೋಣ ಬಿಡು ಅಂತ ಹೇಳಿದ್ದ. ಈ ಸಮಯದಲ್ಲಿ ನೀನು ಊರಿಗೆ ಹೋಗಬೇಡ ಎಂದು ಹೇಳಿದ್ದ. ಖಿನ್ನತೆಗೆ ಒಳಗಾಗಿದ್ದ ಮಗನನ್ನು ಬಿಟ್ಟು ಬಂದೆ. ಕರೆ ಮಾಡಿ ಮಗನನ್ನು ಎಬ್ಬಿಸುವಂತೆ ಗಂಡನಿಗೆ ಹೇಳಿದೆ. ನನ್ನ ಗಂಡ ಹೋಗಿ ನೋಡಿದಾಗ ಮಗ ಸಾವನ್ನಪ್ಪಿದ್ದಾನೆ. ಗಂಡ ತಿಳಿಸಿದಾಗಲೇ ನಿಧನರಾದ ವಿಷಯ ಗೊತ್ತಾಗಿದೆ. ವರ್ಗಾವಣೆಯೇ ನನ್ನ ಮಗನನ್ನು ಸಾವಿನೆಡೆ ಕೊಂಡೊಯ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us