newsfirstkannada.com

ಅಂಜಲಿ ಹತ್ಯೆ ಕೇಸ್​​.. ದೂರು ಕೊಟ್ರೂ ನಿರ್ಲಕ್ಷ್ಯ ಮಾಡಿದ್ದ ಇನ್ಸ್​ಪೆಕ್ಟರ್ ಅಮಾನತು

Share :

Published May 15, 2024 at 10:42pm

    ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪ

    ಕರ್ತವ್ಯ ಲೋಪ ಎಸಗಿದ್ದ ಬೆಂಡಿಗೇರಿ ಠಾಣೆ ಇನ್ಸ್​ಪೆಕ್ಟರ್ ಅಮಾನತು!

    ಬೆಂಡಿಗೇರಿ ಇನ್ಸ್​ಪೆಕ್ಟರ್​ ಜತೆ ಮಹಿಳಾ ಕಾನ್ಸ್​ಟೇಬಲ್​ ಕೂಡ ಸಸ್ಪೆಂಡ್​​

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದ ಆರೋಪದ ಮೇರೆಗೆ ಬೆಂಡಿಗೇರಿ ಠಾಣೆ ಇನ್ಸ್​ಪೆಕ್ಟರ್​ ಮತ್ತು ಮಹಿಳಾ ಕಾನ್ಸ್​ಟೇಬಲ್​​ ಅನ್ನು ಅಮಾನತು ಮಾಡಲಾಗಿದೆ. ಜನರ ತೀವ್ರ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತೆ ರೇಣುಕಾ ಅವರೇ ಈ ಕ್ರಮ ತೆಗೆದುಕೊಂಡಿದ್ದಾರೆ.

ತನ್ನ ಮೊಮ್ಮಗಳಿಗೆ ಜೀವ ಬೆದರಿಕೆ ಇದೆ ಎಂದು ಅಂಜಲಿ ಅಂಬಿಗೇರ ಅಜ್ಜಿ ಬೆಂಡಿಗೇರಿ ಠಾಣೆಗೆ ದೂರು ನೀಡಿದ್ರು. ದೂರು ನೀಡಿದ್ರೂ ನಿರ್ಲಕ್ಷ್ಯ ತೋರಿದ ಆರೋಪ ಕೇಳಿ ಬಂದಿದ್ದು, ಇನ್ಸ್​ಪೆಕ್ಟರ್ ಚಂದ್ರಶೇಖರ ಬಿ. ಚಿಕ್ಕೋಡಿ, ಕಾನ್ಸ್​ಟೇಬಲ್ ರೇಖಾ ಅವರನ್ನು ಅಮಾನತು ಮಾಡಿ ರೇಣುಕಾ ಅವರು ಆದೇಶ ಹೊರಡಿಸಿದ್ದಾರೆ.

ಒಂದು ವಾರದ ಹಿಂದೆಯೇ ಅಂಜಲಿಗೆ ಜೀವ ಬೆದರಿಕೆ ಹಾಕಲಾಗಿತ್ತು. ತನ್ನ ಜೊತೆ ಬರದಿದ್ರೆ ನೇಹಾ ತರ ಕೊಲೆ ಮಾಡುತ್ತೇನೆ ಎಂದು ಹಂತಕ ವಾರ್ನಿಂಗ್ ಮಾಡಿದ್ದ. ಈ ಕೂಡಲೇ ಅಂಜಲಿ ಕುಟುಂಬಸ್ಥರು ಬೆಂಡಿಗೇರಿ ಪೊಲೀಸರಿಗೆ ದೂರು ನೀಡಿದ್ರು. ಆಗ ಪೊಲೀಸ್ರು ಅಂಜಲಿ ಕುಟುಂಬಸ್ಥರಿಗೆ ಬೈದು ವಾಪಸ್​ ಕಳಿಸಿದ್ದು, ನಿರ್ಲಕ್ಷ್ಯ ತೋರಿಸಿದ್ದರು ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಜಲಿ ಹತ್ಯೆ ಕೇಸ್​​.. ದೂರು ಕೊಟ್ರೂ ನಿರ್ಲಕ್ಷ್ಯ ಮಾಡಿದ್ದ ಇನ್ಸ್​ಪೆಕ್ಟರ್ ಅಮಾನತು

https://newsfirstlive.com/wp-content/uploads/2024/05/PSI-Suspend.jpg

Load More