5 ವರ್ಷದ ಹಿಂದೆ ಬೆಂಗಳೂರು ಆಸ್ಪತ್ರೆಯಿಂದ ಮಗು ಕಳ್ಳತನ; 10 ವರ್ಷ ಜೈಲು, 1 ಲಕ್ಷ ದಂಡ ವಿಧಿಸಿದ ಕೋರ್ಟ್​​!

author-image
Veena Gangani
Updated On
5 ವರ್ಷದ ಹಿಂದೆ ಬೆಂಗಳೂರು ಆಸ್ಪತ್ರೆಯಿಂದ ಮಗು ಕಳ್ಳತನ; 10 ವರ್ಷ ಜೈಲು, 1 ಲಕ್ಷ ದಂಡ ವಿಧಿಸಿದ ಕೋರ್ಟ್​​!
Advertisment
  • 5 ವರ್ಷದ ನಂತ್ರ ಕೇಸ್​​ ವಿಚಾರಣೆ ಮುಗಿದು ಅಪರಾಧಿಗೆ ಶಿಕ್ಷೆ ಪ್ರಕಟ
  • 300ಕ್ಕೂ CCTV, 700ಕ್ಕೂ ಪ್ರಶ್ನೆ, 5000ಕ್ಕೂ ಫೋನ್​ ಅಧ್ಯಯನ
  • ಸಿಸಿಟಿವಿ ದೃಶ್ಯ ಆಧರಿಸಿ ಶಂಕಿತ ವ್ಯಕ್ತಿಯ ಭಾವಚಿತ್ರಗಳ ಚಿತ್ರೀಕರಣ

ವೈದ್ಯೋ ನಾರಾಯಣ ಹರಿ.. ಅಂದ್ರೆ ವೈದ್ಯನೆಂದರೆ ದೇವರಿಗೆ ಸಮಾನ ಅನ್ನೋ ಅರ್ಧ. ಇಲ್ಲೊಬ್ಬ ವೈದ್ಯೆಗೆ ಈ ಮಾತುಗಳು ಅನ್ವಯಿಸಲ್ಲ. ಕಾರಣ ಈ ಕಥೆಯಲ್ಲಿ ಬರೋ ವೈದ್ಯೆ ತಾನು ಮಾಡಿರೋ ಪಾಪದ ಪಟ್ಟಿ ತುಂಬಿ ತುಳುಕಿದ್ದು, ಬರೋಬ್ಬರಿ 5 ವರ್ಷದ ನಂತ್ರ ಆಕೆಗೆ 10 ವರ್ಷ ಜೈಲು ಶಿಕ್ಷೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಕೋರ್ಟ್​​ ಆದೇಶಿಸಿದೆ.

ಇದನ್ನೂ ಓದಿ:ನಿರ್ದೇಶಕ S.S ರಾಜಮೌಳಿಗೆ ಬಿಗ್ ಶಾಕ್.. ಡೆತ್‌ನೋಟ್ ಬರೆದಿಟ್ಟ 34 ವರ್ಷದ ಸ್ನೇಹಿತ!

publive-image

ಮೇ 29, 2020.. ಅಂದು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದ ಓರ್ವ ಮಹಿಳೆ ಬೆಳಗ್ಗೆ 7.50ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗುವಿನ ಆಗಮನದಿಂದ ಖುಷಿಯಾಗಿದ್ದ ದಂಪತಿಗೆ ಅಲ್ಲಿ ಶಾಕ್​ ಎದುರಾಗಿತ್ತು. ತಾಯಿ ಇದ್ದ ವಾರ್ಡ್​​ಗೆ ನುಗ್ಗಿದ್ದ ಮನೋವೈದ್ಯೆ ರಶ್ಮಿ, ಇದು ನಿಮ್ಮ ಆರೋಗ್ಯಕ್ಕೆ ವೈದ್ಯರು ಸೂಚಿಸಿರೋ ಮಾತ್ರೆ ಅಂತೇಳಿ ತಾಯಿಗೆ ಕೂಡಿಸಿದ್ಲು. 45 ನಿಮಿಷಗಳ ನಂತ್ರ ಅವಳು ಕಣ್ಣು ತೆರೆದಾಗ ನವಜಾತ ಗಂಡು ಮಗು ಕಾಣೆಯಾಗಿತ್ತು. ಪಾಪಿ ಮನೋವೈದ್ಯೆ ನವಜಾತ ಗಂಡು ಮಗುವನ್ನ ಕದ್ದು, ಬರೋಬ್ಬರಿ 14.5 ಲಕ್ಷ ರೂ.ಗೆ ಮಾರಾಟ ಮಾಡಿದ್ದಳು.

ಯಾವಾಗ ತಾಯಿ ಕೈಯಲ್ಲಿದ್ದ ಮಗು ಕಣ್ಮರೆಯಾಯ್ತು ದಂಪತಿ ಚಾಮರಾಜಪೇಟೆ ಪೊಲೀಸರಿಗೆ ದೂರು ನೀಡಿದ್ರು. ಪ್ರಕರಣ ಕೈಗೆತ್ತಿಕೊಂಡ ಅಂದಿನ ಇನ್ಸ್​​​ಪೆಕ್ಟರ್​​ ಮೀನಾಕ್ಷಿ ಆ್ಯಂಡ್​ ಟೀಂ ನಾನಾ ಆಯಾಮದಲ್ಲಿ ತನಿಖೆ ನಡೆಸಿತ್ತು. ಆದ್ರೆ ಬರೋಬ್ಬರಿ 1 ವರ್ಷದ ನಂತ್ರ ಮನೋವೈದ್ಯೆ ಪೊಲೀಸರ ಕೈಗೆ ಸಿಕ್ಕಿದ್ದೇ ರೋಚಕ.

ವೈದ್ಯೆ ಸಿಕ್ಕಿದ್ದೇ ರೋಚಕ!

300ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲಿಸಿ, 700ಕ್ಕೂ ಹೆಚ್ಚು ಜನರನ್ನು ಪ್ರಶ್ನಿಸಿ, 5 ಸಾವಿರಕ್ಕೂ ಹೆಚ್ಚು ಫೋನ್​ ಕರೆ ದಾಖಲೆಗಳನ್ನ ಅಧ್ಯಯನ ಮಾಡಿತ್ತು. ಇಷ್ಟೇ ಅಲ್ಲ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಶಂಕಿತ ವ್ಯಕ್ತಿಯ ಭಾವಚಿತ್ರವನ್ನು ಚಿತ್ರಿಕರೀಸಿ, 2020 ಮೇ 29ರಂದು ರಶ್ಮಿ ಆಸ್ಪತ್ರೆಯಲ್ಲಿ ಇದಳು ಅನ್ನೋದನ್ನ ಮೊಬೈಲ್​ ಟವರ್​ ನೆಕ್​ವರ್ಟ್​​ ಸಾಬೀತುಪಡಿಸಿತು. ಅದ್ರಂತೆ ಬರೋಬ್ಬರಿ 1 ವರ್ಷದ ನಂತ್ರ ರಶ್ಮಿಯನ್ನ ಬಂಧಿಸಲಾಗಿತ್ತು. ಆದ್ರೆ ಫ್ರೆಬ್ರವರಿ 19 2021ರಂದು ಆರೋಪಿ ರಶ್ಮಿ ಜಾಮೀನಿನ ಮೇಲೆ ಹೊರ ಬಂದಿದ್ದಳು.

publive-image

ಆದ್ರೆ, ನ್ಯಾಯಾಲಯಕ್ಕೆ ಹಾಜರಾಗಿದ್ದ ರಶ್ಮಿಯನ್ನ ಕಸ್ಟಡಿಗೆ ತೆಗೆದುಕೊಂಡ ಪೊಲೀಸರು ಬಳಿಕ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ರು. ತದನಂತರ ಪೊಲೀಸರು ಕೋರ್ಟ್​​ಗೆ ಜಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದು, ಇದೀಗ ಬರೋಬ್ಬರಿ 5 ವರ್ಷದ ನಂತರ ಪ್ರಕರಣದ ವಿಚಾರಣೆ ಮುಗಿದು ಅಪರಾಧಿ ರಶ್ಮಿಗೆ ​​ಸಿಸಿಹೆಚ್ 51ರ ನ್ಯಾಯಾಧೀಶರಿಂದ ಶಿಕ್ಷೆ ಪ್ರಕಟವಾಗಿದೆ. ಸದ್ಯ ಡಿಎನ್​​ಎ ಆಧರಿಸಿ ಮಗುವಿನ ನಿಜವಾದ ಪೋಷಕರ ಕೈಗೆ ಮಗುವನ್ನ ತಲುಪಿಸಲಾಗಿದ್ದು, ಮಕ್ಕಳನ್ನ ಕದ್ದ ವೈದ್ಯೆ ಸ್ಟೋರಿ ಕಂಡು ಮಗು ಪಡೆದ ಮತ್ತೊಂದು ದಂಪತಿ ಛೀಮಾರಿ ಹಾಕಿದೆ. ಅದೇನೆ ಹೇಳಿ ದಿನೇ ದಿನೇ ಹೆಚ್ಚಾಗ್ತಿರೋ ಮಕ್ಕಳ ಕಳ್ಳತನ ಸ್ಟೋರಿಗೆ ಬ್ರೇಕ್​ ಬೀಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment