newsfirstkannada.com

ಪೋಷಕರೇ ಎಚ್ಚರ.. PUB G ಗೀಳಿಗೆ 15 ವರ್ಷದ ಬಾಲಕ ಆಸ್ಪತ್ರೆಗೆ ದಾಖಲು; ಅದು ಹೇಗೆ ಅಂತೀರಾ.. ಈ ಸ್ಟೋರಿ ಓದಿ

Share :

Published July 13, 2023 at 10:40am

    ಪೋಷಕರೇ ಗಮನಿಸಿ.. ಮಕ್ಕಳಿಗೆ ಮೊಬೈಲ್​ ಹುಚ್ಚು ಬಿಡಿಸಿ!

    ಕುಂತಲ್ಲಿ, ನಿಂತಲ್ಲಿ.. ಎಲ್ಲ ಕಡೆಗಳಲ್ಲೂ ಪಬ್‌ ಜಿ.. ಪಬ್‌ ಜಿ ಗೀಳು

    15 ಗಂಟೆಗಳ ಕಾಲ ಗೇಮ್‌ ಆಡುತ್ತಿದ್ದ ಬಾಲಕನ ಸ್ಥಿತಿ ಘನಘೋರ

ಇತ್ತೀಚೆಗೆ ಮೊಬೈಲ್​​ನಲ್ಲಿ ಪುಟಾಣಿ ಮಕ್ಕಳು, ವಿದ್ಯಾರ್ಥಿಗಳು ಹೆಚ್ಚು ಸಮಯ ಕಳೆಯುತ್ತಾರೆ. ಅದು ಕೇವಲ ಪಬ್‌ ಜಿ ಆ್ಯಪ್​ಗಾಗಿ ದಿನದ 24 ಗಂಟೆಯಲ್ಲಿ ಹೆಚ್ಚಿನ ಸಮಯವನ್ನ ಅದಕ್ಕಾಗಿಯೇ ಮೀಸಲಿಡುತ್ತಾರೆ. ಹೌದು, ಹಲವು ಯುವ ಸಮೂಹಕ್ಕೆ ಪಬ್‌ ಜಿ ಗೀಳು ಅಂಟಿಕೊಂಡಿದೆ. ಕುಂತಲ್ಲಿ, ನಿಂತಲ್ಲಿ.. ಎಲ್ಲ ಕಡೆಗಳಲ್ಲೂ ಪಬ್‌ ಜಿ ಆಟದಲ್ಲೇ ಮಕ್ಕಳು ಮುಳುಗುತ್ತಿವೆ. ಗುಂಪು ಗುಂಪಾಗಿ ಪಬ್​​ ಜಿ ಆಟವನ್ನು ಆಡುತ್ತಾ, ಗಲಾಟೆ, ಗದ್ದಲು​​​ ಮಾಡುತ್ತಾ ಅತಿ ಹೆಚ್ಚು ಕಾಲವನ್ನು ಕಳೆಯುತ್ತಾ ಇರುತ್ತಾರೆ. ಅದೆಷ್ಟೋ ಯುವಕ ಹಾಗೂ ಯುವತಿಯರು ಪಬ್​​ ಜಿ ಗೀಳಿಗಾಗಿ ಸರಿಯಾದ ಸಮಯಕ್ಕೆ ಊಟ ನಿದ್ದೆ ಬಿಟ್ಟು ಫೋನ್​​ನಲ್ಲಿ ಕಾಲಹರಣ ಮಾಡುತ್ತಾ ಇರುತ್ತಾರೆ.

ಇದಕ್ಕೆ ಸಾಕ್ಷಿಯೆಂಬಂತೆ ಬಾಲಕನೋರ್ವ ನಿದ್ದೆಗಣ್ಣಿನಲ್ಲೂ “ಬೆಂಕಿ, ಬೆಂಕಿ” ಎಂದು ಕಿರುಚುತ್ತಾ ತನ್ನ ಎರಡು ಕೈಗಳನ್ನು ಆಟದಲ್ಲಿ ಅಲುಗಾಡಿಸುವ ಹಾಗೇ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ. ರಾಜಸ್ಥಾನದ 15 ವರ್ಷದ ಅಲ್ವಾರ್ ಎಂಬ ಬಾಲಕನಿಗೆ ಸ್ಮಾರ್ಟ್‌ಫೋನ್‌ ಎಂದರೆ ಪಂಚ ಪ್ರಾಣ. ಅದರಲ್ಲೂ ಆನ್​ಲೈನ್​​​ ಗೇಮಿಂಗ್ ಅಂದರೆ ಹುಚ್ಚು. ಹೀಗೆ ಆನ್​ಲೈನ್​ನಲ್ಲಿ ಪಬ್​ ಜಿ ಗೇಮ್​​ನಲ್ಲಿ ತಲ್ಲೀನನಾಗಿದ್ದನಂತೆ. ವರದಿಯ ಪ್ರಕಾರ ಆರು ತಿಂಗಳ ಕಾಲ ನಿರಂತರವಾಗಿ ದಿನಕ್ಕೆ 15 ಗಂಟೆಗಳ ಕಾಲ ಮೊಬೈಲ್ ಗೇಮ್‌ಗಳನ್ನು ಆಡುತ್ತಿದ್ದ ಎಂದು ತಿಳಿದು ಬಂದಿದೆ.

PUBG ಹಾಗೂ ಫ್ರೀ-ಫೈರ್‌ನಂತಹ ಆನ್‌ಲೈನ್ ಗೇಮ್‌ಗಳು ಯುವಕರ ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಇದಕ್ಕೆ ಸಾಕ್ಷಿಯೇ ಈ ಬಾಲಕ. 7ನೇ ತರಗತಿಯ ವಿದ್ಯಾರ್ಥಿಯಾಗಿರುವ ಬಾಲಕ ಮೊಬೈಲ್ ಗೇಮಿಂಗ್ ಚಟದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದಾನೆ. ಹೀಗಾಗಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಬಾಲಕನ ಈ ಪರಿಸ್ಥಿತಿಯಿಂದ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆತನ ತಾಯಿ ಹಾಗೂ ರಿಕ್ಷಾ ಚಾಲಕನಾಗಿದ್ದ ತಂದೆಗೆ ದಿಕ್ಕೆ ತೋಚದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಎಚ್ಚರ.. PUB G ಗೀಳಿಗೆ 15 ವರ್ಷದ ಬಾಲಕ ಆಸ್ಪತ್ರೆಗೆ ದಾಖಲು; ಅದು ಹೇಗೆ ಅಂತೀರಾ.. ಈ ಸ್ಟೋರಿ ಓದಿ

https://newsfirstlive.com/wp-content/uploads/2023/07/pubg.jpg

Load More