/newsfirstlive-kannada/media/post_attachments/wp-content/uploads/2024/04/PUC-result-2.jpg)
PUC Result:ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ಈ ವರ್ಷವೂ ಹುಡುಗಿಯರೇ ಮೇಲು ಗೈ ಸಾಧಿಸಿದ್ದಾರೆ. ಸುಮಾರು 84.87 ಶೇಕಡಾವಾರು ಉತ್ತೀರ್ಣಗೊಂಡಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು 6 ಲಕ್ಷ 98 ಸಾವಿರ 378 ವಿದ್ಯಾರ್ಥಿ ಅರ್ಹರಾಗಿದ್ದರು. ಅದರಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 6,81,079. ಒಟ್ಟು 17 ಸಾವಿರ ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲಿ ಗೈರು ಆಗಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5 ಲಕ್ಷ 52 ಸಾವಿರದ 690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗಾಗಿ ಉತ್ತೀರ್ಣದ ಪ್ರಮಾಣ ಶೇ.81. 15ರಷ್ಟಿದೆ. 2023ರಲ್ಲಿ 74.67ರಷ್ಟಿತ್ತು. ಕಳೆದ ಬಾರಿಗಿಂತ ಈ ಬಾರಿ ಕೊಂಚ ಏರಿಕೆ ಕಂಡಿದೆ. ಇನ್ನು ಬಾಲಕರು ಶೇಕಡಾ 76.98 ಉತ್ತೀರ್ಣಗೊಂಡಿದ್ದಾರೆ.
ಕಲಾ ವಿಭಾಗ
ಕಲಾ ವಿಭಾಗದಲ್ಲಿ 1,56,436 ಹೊಸಬರು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 1 ಲಕ್ಷದ 13 ಸಾವಿರದ 752 ತೇರ್ಗಡೆಗೊಂಡಿದ್ದಾರೆ. 72.71 ಶೇಕಡಾವಾರು ಉತ್ತೀರ್ಣಗೊಂಡಿದ್ದಾರೆ.
ವಾಣಿಜ್ಯ ವಿಭಾಗ
ವಾಣಿಜ್ಯ ವಿಭಾಗ 1 ಲಕ್ಷದ 95 ಸಾವಿರದ 909 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 1 ಲಕ್ಷದ 66 ಸಾವಿರದ 362 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಶೇಕಡಾವಾರು ಒಟ್ಟು 84.92 ಉತ್ತೀರ್ಣಗೊಂಡಿದ್ದಾರೆ.
ವಿಜ್ಞಾನ ವಿಭಾಗ
ವಿಜ್ಞಾನ ವಿಭಾಗದಲ್ಲಿ 2 ಲಕ್ಷದ 70 ಸಾವಿರದ 474 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2 ಲಕ್ಷದ 46 ಸಾವಿರದ 744 ತೇರ್ಗಡೆಗೊಂಡಿದ್ದಾರೆ. ಶೇಕಡಾವಾರು 91.23 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
ಇನ್ನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಗದಗ ಕೊನೇ ಸ್ಥಾನ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾಲಕ್ಷ್ಮಿ 598 ಅಂಕ ಟಾಪರ್​ ಆಗಿ ಕಾಣಿಸಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಮೇಧಾ ರಾಜ್ಯಕ್ಕೆ ಫಸ್ಟ್ ಱಂಕ್ ಬಂದಿದ್ದಾರೆ. ಮೇಧಾ NMKRV ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು 596 ಅಂಕ ಪಡೆದಿದ್ದಾರೆ.
ವಿಜ್ಞಾನ ವಿಭಾಗ
ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ನೂತನ ಪ್ರಥಮ ಸ್ಥಾನ-595 ಅಂಕ
ಕಲಾ ವಿಭಾಗ
ಮೇಧಾ
ಅಂಕ : 596
ಕಲಾ ವಿಭಾಗ (ಇಂಗ್ಲೀಷ್)
ಮೇಧಾ NMKRV ಪಿಯು ಕಾಲೇಜು ಜಯನಗರ
ಕಾಮರ್ಸ್
ಜ್ಞಾನವಿ
ಅಂಕ : 597
ವಿಧ್ಯಾನಿಧಿ IND ಪಿಯು ಕಾಲೇಜು
ತುಮಕೂರು
ಪಿಯುಸಿ ರಿಸಲ್ಟ್ ನೋಡಲು​https://karresults.nic.inಸೈಟ್​ಗೆ ಭೇಟಿ ನೀಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us