newsfirstkannada.com

2 ವರ್ಷದ ಡೇಟಿಂಗ್​ಗೆ 3 ಗಂಟು ಹಾಕಿದ ಜೋಡಿ.. ಪುಲ್ಕಿತ್​​ ಜೊತೆ ಸಪ್ತಪದಿ ತುಳಿದ ‘ಗೂಗ್ಲಿ’ ಹುಡುಗಿ

Share :

Published March 16, 2024 at 1:58pm

    ಬಾಲಿವುಡ್​ ನಟನನ್ನು ವರಿಸಿದ ಚಿರು ಸಿನಿಮಾ ನಟಿ

    ಪುಲ್ಕಿತ್​ ಸಾಮ್ರಾಟ್​​ ಜೊತೆ ಗೂಗ್ಲಿ ಬೆಡಗಿಯ ಮದುವೆ

    ವಿವಾಹದ ಫೋಟೋ ಹಂಚಿಕೊಂಡ ಕೃತಿ ಕರಬಂಧ

ಗೂಗ್ಲಿ ಬೆಡಗಿ ಕೃತಿ ಕರಬಂಧ ಮತ್ತು ಬಾಲಿವುಡ್​ ನಟ ಪುಲ್ಕಿತ್​ ಸಾಮ್ರಾಟ್​ ವಿವಾಹವಾಗಿದ್ದಾರೆ. ಈ ಸಂತಸದ ಕ್ಷಣವನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆಯೇ ಈ ಜೋಡಿ ನಿನ್ನೆ ವಿವಾಹವಾಗಿದ್ದಾರೆ. ಕುಟುಂಬ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಇವರ ವಿವಾಹದ ಸುದ್ದಿ ಕಳೆದ ಕೆಲವು ದಿನಗಳಿಂದಲೇ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆ ಕೂಡ ಸೋರಿಕೆಯಾಗಿತ್ತು. ಅದರಂತೆ ಕೃತಿ ಮತ್ತು ಪುಲ್ಕಿತ್​ ನಿನ್ನೆ ಅದ್ಧೂರಿಯಾಗಿ ವಿವಾಹಬಂಧಿಯಾಗಿದ್ದಾರೆ.

ಚಿರು ಸಿನಿಮಾ ನಟಿ ಕೃತಿ ಕರಬಂಧ ಮತ್ತು ಪುಲ್ಕಿತ್​ ಸಾಮ್ರಾಟ್​​​ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಈ ಹಿಂದಿನಿಂದಲೂ ಕೇಳಿಬಂದಿತ್ತು. 2 ವರ್ಷಗಳಿಂದ ಈ ಜೋಡಿ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇದೀಗ ಈ ಜೋಡಿ ವಿವಾಹವಾಗಿದ್ದಾರೆ.

View this post on Instagram

A post shared by Kriti Kharbanda (@kriti.kharbanda)

ಎರಡನೇ ವಿವಾಹ!

ಅಂದಹಾಗೆಯೇ ಪುಲ್ಕಿತ್​ಗೆ ಇದು ಎರಡನೇ ಮದುವೆಯಾಗಿದ್ದು, ಈ ಮೊದಲು ಅಂದರೆ 2014ರಲ್ಲಿ ಸಲ್ಮಾನ್​ ಖಾನ್​ ಸಹೋದರೆ ಶ್ವೇತಾ ರೋಹಿರಾ ಜೊತೆಗೆ ವಿವಾಹವಾಗಿತ್ತು. ಬಳಿಕ 2015ರಲ್ಲಿ ಇವರಿಬ್ಬರ ಸಂಬಂಧ ಮುರಿದುಬಿತ್ತು. ಬಳಿಕ ಇಬ್ಬರು ವಿಚ್ಛೇದನದ ಮೂಲಕ ದೂರವಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ವರ್ಷದ ಡೇಟಿಂಗ್​ಗೆ 3 ಗಂಟು ಹಾಕಿದ ಜೋಡಿ.. ಪುಲ್ಕಿತ್​​ ಜೊತೆ ಸಪ್ತಪದಿ ತುಳಿದ ‘ಗೂಗ್ಲಿ’ ಹುಡುಗಿ

https://newsfirstlive.com/wp-content/uploads/2024/03/Kruti-karabanda.jpg

Load More