/newsfirstlive-kannada/media/post_attachments/wp-content/uploads/2024/10/PUMPKIN-SEEDS-ALMOND.jpg)
ನಾವು ನಿತ್ಯ ಬದುಕಿನಲ್ಲಿ ಅನೇಕ ರೀತಿಯ ಹಣ್ಣು, ಕಾಯಿಗಳ ಬೀಜಗಳನ್ನು ಮತ್ತು ಡ್ರೈಫ್ರೂಟ್ಸ್​ಗಳನ್ನ ಆಹಾರ ಕ್ರಮದಲ್ಲಿ ಜೋಡಿಸಿಕೊಂಡಿರುತ್ತೇವೆ. ಎಲ್ಲವೂ ಕೂಡ ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿರುತ್ತವೆ. ಅದರಲ್ಲೂ ಬಾದಾಮಿ ಹಾಗೂ ಕುಂಬಳಕಾಯಿ ಬೀಜ ಈ ಎರಡು ವಿಶೇಷ ಹಾಗೂ ಅನನ್ಯ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿವೆ. ಈ ಎರಡು ಪದಾರ್ಥಗಳಲ್ಲಿ ವಿಶೇಷವಾದ ನ್ಯೂಟ್ರಿಷಿಯನ್ಸ್​ಗಳಿವೆ ಅವು ನಮ್ಮ ಆರೋಗ್ಯಕ್ಕೆ ಬಹಳ ಲಾಭಗಳನ್ನು ತಂದುಕೊಡುತ್ತವೆ. ಆದ್ರೆ ಇವುಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ ಶಕ್ತಿಯನ್ನು ಹೊಂದಿದೆ ಎಂಬುದರ ಬಗ್ಗೆ ಪದೇ ಪದೇ ಚರ್ಚೆಯಾಗುತ್ತಲೇ ಇರುತ್ತದೆ.
/newsfirstlive-kannada/media/post_attachments/wp-content/uploads/2024/10/PUMPKIN-SEEDS-ALMOND-1.jpg)
ಕುಂಬಳಕಾಯಿ ಬೀಜಗಳನ್ನು ನ್ಯೂಟ್ರಿಷೀಯನ್​​ಗಳ ಶಕ್ತಿಕೇಂದ್ರ ಅಂತಲೇ ಕರೆಯಲಾಗುತ್ತದೆ. ಕೇವಲ 28 ಗ್ರಾಂ ಪಂಪ್​ಕಿನ್ ಸೀಡ್ಸ್​ನಲ್ಲಿ 151 ಕ್ಯಾಲರೀಸ್, 7 ಗ್ರಾಂ ಪ್ರೋಟಿನ್ ಮತ್ತು ಎರಡು ಗ್ರಾಂ ಫೈಬರ್ ಅಂಶ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರ ಜೊತೆಗೆ ಕುಂಬಳಕಾಯಿ ಬೀಜಗಳಲ್ಲಿ ವಿಶೇಷವಾದ ಮ್ಯಾಗ್ನೆಶಿಯಂ, ಕಬ್ಬಿಣ ಸೇರಿದಂತೆ ಹಲವು ರೀತಿಯ ಮಿನರಲ್ಸ್ ಕೂಡ ಹೇರಳವಾಗಿ ಇರುತ್ತದೆ. ಒಮೇಗಾ 6 ಫ್ಯಾಟಿ ಆ್ಯಸಿಡ್​ಗಳು ಕೂಡ ಈ ಒಂದು ಕುಂಬಳಕಾಯಿ ಬೀಜದಲ್ಲಿ ಸಿಗುತ್ತದೆ. ಇವು ಹೃದಯದ ಆರೋಗ್ಯಕ್ಕೆ ತುಂಬಾ ಸಹಾಯಕಾರಿ ಎನ್ನಲಾಗುತ್ತದೆ.
ಕುಂಬಳಕಾಯಿ ಬೀಜಗಳಲ್ಲಿ ಇರುವಂತಹ ಪೋಷಕಾಂಶಗಳನ್ನು ನೋಡುತ್ತಾ ಹೋಗುವುದಾದ್ರೆ, ಈಗಾಗಲೇ ಹೇಳಿದಂತೆ 151ಕ್ಯಾಲರೀರಸ್, 7 ಗ್ರಾಂನಷ್ಟು ಪ್ರೋಟಿನ್, 13 ಗ್ರಾಂನಷ್ಟು ಫ್ಯಾಟ್, 5 ಗ್ರಾಂನಷ್ಟು ಕಾರ್ಬೋಹೈಡ್ರೆಡ್, 1.7 ಗ್ರಾಂನಷ್ಟು ಫೈಬರ್, ಶೇಕಡಾ 37ರಷ್ಟು ಮೆಗ್ನೆಶೀಯಂ, ಜಿಂಕ್ ಶೇಕಡಾ 14ರಷ್ಟು, ಕಬ್ಬಿಣದಂಶ ಶೇಕಡಾ 23ರಷ್ಟು, ಕಾಪರ್​ 19 ರಷ್ಟು ಮತ್ತು ಮ್ಯಾಂಗನೀಸ್ ಶೇಕಡಾ 42ರಷ್ಟು ಇರುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ:ಡಿಸ್ಲೆಕ್ಸಿಯಾದಿಂದ ADHDವರೆಗೆ; ಬಾಲಿವುಡ್​ನ ಹಲವು ನಟ ನಟಿಯರು ಅನುಭವಿಸಿದ್ದಾರೆ ಇಂತಹ ಸಮಸ್ಯೆ
/newsfirstlive-kannada/media/post_attachments/wp-content/uploads/2024/10/PUMPKIN-SEEDS-ALMOND-2.jpg)
ಇತ್ತ ಬಾದಾಮಿಗಳಲ್ಲಿ ಇರುವ ಪೋಷಕಾಂಶಗಳನ್ನು ನೋಡುತ್ತಾ ಹೋದರೆ, ಕುಂಬಳಕಾಯಿ ಬೀಜಕ್ಕೆ ಹೋಲಿಸಿ ನೋಡಿದಾಗ ಇದು ಕೂಡ ಯಾವುದಕ್ಕೂ ಕಡಿಮೆ ಇಲ್ಲ ಎಂಬ ರೀತಿಯಲ್ಲಿ ಪೋಷಕಾಂಶ, ಪೌಷ್ಠಿಕಾಂಶಗಳ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇದನ್ನು ಕುಂಬಳಕಾಯಿ ಬೀಜಗಳಿಗೆ ಹೋಲಿಸಿ ನೋಡಿದಾಗ 28 ಗ್ರಾಂ ಬಾದಾಮಿಗಳಲ್ಲಿ ನಮಗೆ 164 ಕ್ಯಾಲರೀಸ್ ಸಿಗುತ್ತದೆ. 6 ಗ್ರಾಂ ಪ್ರೊಟೀನ್, 3 ಗ್ರಾಂ ಫೈಬರ್ ಅಂಶ ದೊರೆಯುತ್ತದೆ. ಮೆಗ್ನೆಶಿಯಂ ಶೇಕಡಾ 20 ರಷ್ಟು, ಫೈಬರ್ ಅಂಶ 3.5 ಗ್ರಾಂನಷ್ಟು, ವಿಟಮಿನ್ ಇ 37% ರಷ್ಟು ಕ್ಯಾಲ್ಸಿಯಂ ಶೇಕಡಾ 7 ರಷ್ಟು, ಕಬ್ಬಿಣಂಶ ಶೇಕಡಾ 6 ರಷ್ಟು ಕಾಪರ್ ಅಂಶ ಶೇಕಡಾ 14ರಷ್ಟು ದೊರೆಯುತ್ತದೆ.
ಇದನ್ನೂ ಓದಿ: Bhoomi Hunnime: ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಸಂಭ್ರಮ; ಈ ಹಬ್ಬದ ವೈಶಿಷ್ಟ್ಯಗಳೇನು..?
ಈ ಎರಡು ಪದಾರ್ಥಗಳು ಹಲವು ಶ್ರೀಮಂತ ಪೋಷಾಕಾಂಶ ಹಾಗೂ ಪೌಷ್ಠಿಕಾಂಶಗಳನ್ನು ಹೊಂದಿವೆ.ಅತ್ಯುತ್ತಮ ಆರೋಗ್ಯದ ನಿರ್ವಹಣೆಗಾಗಿ ನಾವು ಕುಂಬಳಕಾಯಿ ಬೀಜಗಳನ್ನು ಸೇವಿಸಬೇಕು. ಚರ್ಮ ಮತ್ತು ಕೂದಲು ಸೌಂದರ್ಯಕ್ಕೆ ನಿಮಗೆ ಬಾದಾಮಿ ಸೇವಿಸುವದರಿಂದ ತುಂಬಾ ಲಾಭಗಳಿವೆ. ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು. ಹೆಚ್ಚು ಹೆಚ್ಚು ಮೆಗ್ನಿಶಿಯಂ ಜಿಂಕ್ ಅಂಶ ದೇಹಕ್ಕೆ ಸೇರಬೇಕು. ಉತ್ತಮ ನಿದ್ದೆ ನಿಮ್ಮದಾಗಬೇಕು ಅಂದ್ರು, ಹೆಚ್ಚಿನ ಪೌಷ್ಠಿಕಾಂಶ ಹೊಂದಬೇಕು ಅನಿಸಿದ್ದರೆ ನೀವು ಕುಂಬಳಕಾಯಿ ಬೀಜಗಳಿಗೆ ಪ್ರಧಾನ್ಯತೆ ಕೊಡಿ. ಆದ್ರೆ ಎಚ್ಚರ ಈ ಬೀಜಗಳನ್ನು ಅತಿ ಹೆಚ್ಚು ತಿನ್ನುವುದರಿಂದ ಊರಿಯೂತದಂತಹ ಸಮಸ್ಯೆಗಳು ಶುರುವಾಗುವ ಸಾಧ್ಯತೆಯೂ ಇರುತ್ತದೆ. ಯಾಕಂದ್ರೆ ಪಂಪ್​ಕಿನ್ ಸೀಡ್ಸ್​ಗಳಲ್ಲಿ ಒಮೇಗಾ 6 ಫ್ಯಾಟಿ ಆ್ಯಸಿಡ್​ ಅಂಶ ಹೆಚ್ಚು ಇರುತ್ತದೆ. ಅದು ದೇಹವನ್ನು ಹೆಚ್ಚು ಸೇರುವುದರಿಂದ ಬೇರೆ ಪರಿಣಾಮಗಳು ಉಂಟಾಗುತ್ತವೆ. ಹೀಗಾಗಿ ಇತಿಮಿತಿಯಲ್ಲಿ ಕುಂಬಳಕಾಯಿ ಬೀಜಗಳನ್ನು ತಿನ್ನುವುದು ಒಳ್ಳೆಯದು.
ಇನ್ನು ತೂಕ ಇಳಿಸಲು, ಸಕ್ಕರೆ ಕಾಯಿಲೆಗಳನ್ನು ನಿಯಂತ್ರಿಸಲು ಕೂದಲು ಮತ್ತು ಕೇಶದ ಆರೋಗ್ಯವನ್ನು ಕಾಪಾಡುವ ಉದ್ದೇಶವಿದ್ದಲ್ಲಿ ನೀವು ಬಾದಾಮಿಯ ಮೊರೆ ಹೋಗುವುದು ಒಳ್ಳೆಯದು. ಈ ಎರಡು ಪದಾರ್ಥಗಳು ವಿಶೇಷ ಪೌಷ್ಠಿಕಾಂಶ ಹಾಗೂ ಪೋಷಕಾಂಶಗಳನ್ನು ಹೊಂದಿರುವುದರಿಂದ ಇವುಗಳ ಸೇವನೆಯಿಂದ ಹೆಚ್ಚು ಆರೋಗ್ಯಕರ ಲಾಭಗಳೇ ಇವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us