ಇನ್ನು ಕೆಲವು ಪಂಚ್​ಗಳು ಬಾಕಿ ಇವೆ.. ನಿವೃತ್ತಿ ಘೋಷಿಸಿದ ಆರ್‌. ಅಶ್ವಿನ್ ಯಾಕೆ ಹೀಗೆ ಹೇಳಿದ್ರು?

author-image
Gopal Kulkarni
Updated On
ಇನ್ನು ಕೆಲವು ಪಂಚ್​ಗಳು ಬಾಕಿ ಇವೆ.. ನಿವೃತ್ತಿ ಘೋಷಿಸಿದ ಆರ್‌. ಅಶ್ವಿನ್ ಯಾಕೆ ಹೀಗೆ ಹೇಳಿದ್ರು?
Advertisment
  • ಮಾಧ್ಯಮಗಳ ಮುಂದೆ ತಮ್ಮ ನಿವೃತ್ತಿ ಘೋಷಿಸಿದ ಆರ್ ಅಶ್ವಿನ್
  • ಇನ್ನೂ ಕೆಲವು ಪಂಚ್​ಗಳು ಬಾಕಿ ಇದ್ದವು, ಕ್ಲಬ್​ ಕ್ರಿಕೆಟ್​ನಲ್ಲಿ ನಡೆಯಲಿದೆ
  • ಬಿಸಿಸಿಐ, ತಂಡದ ಆಟಗಾರರು, ಕೋಚ್​ಗಳಿಗೆ ಥ್ಯಾಂಕ್ಸ್ ಹೇಳಿದ ಅಶ್ವಿನ್

ಭಾರತ ಕ್ರಿಕೆಟ್​ ತಂಡದ ಸರ್ವಶ್ರೇಷ್ಠ ಆಫ್​ ಸ್ಪಿನರ್​ ಆರ್ ಅಶ್ವಿನ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ವಿದಾಯ ಹೇಳಿದ್ದಾರೆ. ಇನ್ನೂ ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಪಂದ್ಯಗಳು ಇನ್ನೂ ಬಾಕಿ ಇರುವಾಗಲೇ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿಕೊಂಡಿದ್ದಾರೆ.ಟೆಸ್ಟ್​ ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್ ಕಿತ್ತ ಭಾರತೀಯ ಬೌಲರ್​ಗಳಲ್ಲಿ ಎರಡನೇ ಸ್ಥಾನವನ್ನು ಹೊಂದಿರುವ ಅಶ್ವಿನ್ ಇಂದು ನಿವೃತ್ತಿ ಘೋಷಿಸಿದಾಗ ಇನ್ನು ಕೆಲವು ಪಂಚ್​ಗಳು ಬಾಕಿ ಇದ್ದವು ಎಂದಿರುವ ಅಶ್ವಿನ್. ಮುಂದೆ ಪ್ಲೇ ಕ್ಲಬ್​ನಲ್ಲಿ ಕ್ರಿಕೆಟ್ ಬದುಕು ಮುಂದುವರಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ ಅಶ್ವಿನ್ ನಾನು ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳುವುದಿಲ್ಲ. ಭಾರತೀಯ ಕ್ರಿಕೆಟರ್ ಆಗಿ ಇಂದು ನನ್ನ ಕೊನೆಯ ದಿನ ಎಂದು ಬ್ರಿಸ್ಬನ್​ನಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯೆದರು ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಅಶ್ವಿನ್ ಜೊತೆ ನಾಯಕ ರೋಹಿತ್ ಶರ್ಮಾ ಕೂಡ ಇದ್ದರು. 38 ವರ್ಷದ ಆರ್ ಅಶ್ವಿನ್ ಅಡಿಲೆಡ್​ನಲ್ಲಿ ನಡೆದ ಡೇ ನೈಟ್ ಟೆಸ್ಟ್​​ನಲ್ಲಿ ಆಡಿ ಒಂದು ವಿಕೆಟ್ ಕಬಳಿಸಿದ್ದರು. ಗಬ್ಬಾದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್​​ನಿಂದ ಅಶ್ವಿನ್​ರನ್ನು ಕೈ ಬಿಡಲಾಗಿತ್ತು. ಪ್ಲೇಯಿಂಗ್ 11 ನಲ್ಲಿ ಅಶ್ವಿನ್ ಜಾಗಕ್ಕೆ ರವೀಂದ್ರ ಜಡೇಜಾರನ್ನು ಕರೆತರಲಾಗಿತ್ತು.

ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆರ್. ಅಶ್ವಿನ್ ದಿಢೀರ್‌ ಗುಡ್‌ ಬೈ.. BCCI ಈ ಅಚ್ಚರಿ ನಿರ್ಧಾರಕ್ಕೆ ಹೇಳಿದ್ದೇನು?

ತಮ್ಮ ನಿವೃತ್ತಿಯ ವಿಚಾರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ಭಾರತೀಯ ಕ್ರಿಕೆಟಿಗನಾಗಿ ಇಂದು ನನ್ನ ಕೊನೆಯ ದಿನ. ಇನ್ನು ಕೆಲವು ಪಂಚ್​ಗಳು ಬಾಕಿ ಇದ್ದವು ಅಂತ ನಾನು ಭಾವಿಸಿದ್ದೇನೆ. ಆದ್ರೆ ಅದನ್ನು ಕ್ಲಬ್​ ಕ್ರಿಕೆಟ್​ನಲ್ಲಿ ಮುಂದುವರಿಸಲಿದ್ದೇನೆ. ಆದ್ರೆ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನನ್ನದು ಇಂದು ಕೊನೆಯ ದಿನ ಎಂದು ಹೇಳಿದ್ದಾರೆ. ನಾನು ಇಲ್ಲಿ ಸಾಕಷ್ಟು ಫನ್​ ಜೊತೆಗೆ ಅನೇಕ ನೆನಪುಗಳನ್ನು ಪಡೆದಿದ್ದೇನೆ. ರೋಹಿತ್, ತಂಡದ ಸಹ ಆಟಗಾರರ ನೆನಪುಗಳಿವೆ. ನಾನು ಅನೇಕರಿಗೆ ಧನ್ಯವಾದಗಳನ್ನು ಹೇಳಬೇಕು. ಬಿಸಿಐಗೆ, ನನ್ನ ತಂಡದ ಸಹ ಅಟಗಾರರಿಗೆ, ಎಲ್ಲಾ ಕೋಚ್​ಗಳಿಗೆ ನಾನು ಈ ಸಮಯದಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ ಅಂತ ಅಶ್ವಿನ್ ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment