ಪುಣೆಯಲ್ಲಿ ಶರದ್ ಪವಾರ್ ಪಕ್ಷದ ನಾಯಕನ ಮಗನಿಂದ ಭೀಕರ ಕಾರು ಅಪಘಾತ; ಈ ಪಟ್ಟಣಕ್ಕೆ ಏನಾಗ್ತಿದೆ..?

author-image
Veena Gangani
Updated On
ಪುಣೆಯಲ್ಲಿ ಶರದ್ ಪವಾರ್ ಪಕ್ಷದ ನಾಯಕನ ಮಗನಿಂದ ಭೀಕರ ಕಾರು ಅಪಘಾತ; ಈ ಪಟ್ಟಣಕ್ಕೆ ಏನಾಗ್ತಿದೆ..?
Advertisment
  • ಮಾಜಿ ಕಾರ್ಪೊರೇಟ್ ಮಗ ಸೌರಭ್ ಗಾಯಕ್ವಾಡ್ ವಿರುದ್ಧ ಕೇಸ್​ ದಾಖಲು
  • ಟೆಂಪೋ ಟ್ರಕ್‌ ಹಾಗೂ ಎಸ್‌ಯುವಿ ಕಾರು ಭೀಕರ ಅಪಘಾತದ ದೃಶ್ಯ ಸೆರೆ
  • ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

ಪುಣೆ: ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಬಂದು ಟೆಂಪೋ ಟ್ರಕ್‌ಗೆ ಎಸ್‌ಯುವಿ ಕಾರು ಡಿಕ್ಕಿ ಹೊಡೆದ ಘಟನೆ ಪುಣೆಯ ಮಂಜರಿ ಮುಂಡ್ವಾ ರಸ್ತೆಯಲ್ಲಿ ನಡೆದಿದೆ. ಎಸ್‌ಯುವಿ ಕಾರನ್ನು ಸೌರಭ್ ಗಾಯಕ್ವಾಡ್ ಎಂಬಾತ ಚಲಾಯಿಸುತ್ತಿದ್ದನಂತೆ. ಸೌರಭ್ ಗಾಯಕ್ವಾಡ್ ಅವರು ಮಾಜಿ ಕಾರ್ಪೊರೇಟ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿಯ ನಾಯಕ ಬಂಡು ಗಾಯಕ್ವಾಡ್ ಅವರ ಮಗನಾಗಿದ್ದಾನೆ.

publive-image

ಇದನ್ನೂ ಓದಿ:ರೀಲ್ಸ್​ ಹುಚ್ಚು.. ವಿಡಿಯೋ ಮಾಡಲು ಹೋಗಿ 300 ಅಡಿ ಎತ್ತರದ ಫಾಲ್ಸ್​​ನಿಂದ ಬಿದ್ದು ಇನ್​ಸ್ಟಾ ತಾರೆ ಸಾವು

ಸೌರಭ್ ಗಾಯಕ್ವಾಡ್ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ಸೌರಭ್ ಗಾಯಕ್ವಾಡ್ ಕುಡಿದು ವಾಹನ ಚಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಡಿದ ಅಮಲಿನಲ್ಲಿ ಸೌರಭ್ ಗಾಯಕ್ವಾಡ್ ಎಸ್‌ಯುವಿ ಕಾರನ್ನು ವೇಗವಾಗಿ ಚಲಿಸುತ್ತಿದ್ದ. ಇದೇ ವೇಳೆ ಎದುರುಗಡೆಯಿಂದ ಬರುತ್ತಿದ್ದ ಕೋಳಿಗಳನ್ನು ಹೊತ್ತೊಯ್ಯುತ್ತಿದ್ದ ಟೆಂಪೋ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಹಾಗೂ ಕಾರಿನಲ್ಲಿದ್ದ ಮತ್ತೋರ್ವ ಗಾಯಗೊಂಡಿದ್ದಾರೆ.


">July 17, 2024


ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿಂದೆಯೂ ಕೂಡ ಪುಣೆಯಲ್ಲಿ ಕುಡಿದ ಅಮಲಿನಲ್ಲಿ ಅಪ್ರಾಪ್ತ ತನ್ನ ಪೋರ್ಷೆ ಕಾರಿನಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳನ್ನು ಕೊಂದಿದ್ದ. ಇದಾದ ಬಳಿಕ ಶಿವಸೇನಾ ನಾಯಕನ ಮಗ ತನ್ನ BMW ಅನ್ನು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆಯೊಬ್ಬರನ್ನು ಕೊಂದ ನಂತರ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment