/newsfirstlive-kannada/media/post_attachments/wp-content/uploads/2024/05/PUNE_Porsche_Car-1.jpg)
ಮುಂಬೈ: ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣವಾಗಿದ್ದ ಪುಣೆಯ ಪೋರ್ಷೆ ಕಾರು ಆಕ್ಸಿಡೆಂಟ್​ ಕೇಸ್​ಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮೇ 19 ರಂದು ನಡೆದ ಪೋರ್ಷೆ ಕಾರು ಅಪಘಾತದ ಸಮಯದಲ್ಲಿ ಮದ್ಯಪಾನ ಮಾಡಿರುವುದಾಗಿ ಅಪ್ರಾಪ್ತ ಬಾಲಕ ವೇದಂತ್ ಅಗರ್ವಾಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆಕ್ಸಿಡೆಂಟ್​ ವೇಳೆ ನಡೆದ ಎಲ್ಲ ಘಟನೆಗಳು ಸಂಪೂರ್ಣವಾಗಿ ನೆನಪಿಲ್ಲ. ಆದ್ರೆ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದು ನಾನೇ ಅಂತ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/05/PUNE_CAR_NEW.jpg)
ಇನ್ನು ಮಗನನ್ನು ಉಳಿಸಿಕೊಳ್ಳಲು ಯತ್ನಿಸಿದ್ದ ಬಾಲಕನ ಪೋಷಕರಾದ ವಿಶಾಲ್ ಅಗರ್ವಾಲ್ ಮತ್ತು ಶಿವಾನಿ ಅಗರ್ವಾಲ್​ರನ್ನ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ಮಗನ ರಕ್ತದ ಮಾದರಿ ಬದಲಿಗೆ ತನ್ನ ರಕ್ತವನ್ನು ಶಿವಾನಿ ಅಗರ್ವಾಲ್ ನೀಡಿದ್ದರು. ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಪ್ರಕರಣವು ಇದರಲ್ಲಿ ಸೇರಿದ್ದರಿಂದ ಜೂನ್ 5 ರವರೆಗೆ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಕೋರ್ಟ್​ ಒಪ್ಪಿಸಿದೆ. ಬಾಲಕನ ಪೋಷಕರಲ್ಲದೆ, ಆತನ ಅಜ್ಜನನ್ನೂ ಪೊಲೀಸರು ಬಂಧಿಸಿದ್ದಾರೆ. ಸಾಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಮತ್ತು ಓರ್ವ ಉದ್ಯೋಗಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪುಣೆಯಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಪೋರ್ಷೆ ಕಾರು ಆಕ್ಸಿಡೆಂಟ್ ಘಟನೆ ಭಾರೀ ಕೋಲಾಹಲ ಎಬ್ಬಿಸಿತ್ತು. ಹೀಗಾಗಿ ಪ್ರಕರಣದ ವಿವಿಧ ಅಂಶಗಳನ್ನು ತನಿಖೆ ಮೂಲಕ ಕಂಡುಕೊಳ್ಳಲು ಪೊಲೀಸರು ತಂಡಗಳನ್ನು ರಚಿಸಿದ್ದರು ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us