newsfirstkannada.com

ಪೋರ್ಷೆ ಕಾರು ಆಕ್ಸಿಡೆಂಟ್​​ನಲ್ಲಿ ತಪ್ಪು ಒಪ್ಪಿಕೊಂಡ ಬಾಲಕ.. ಪೊಲೀಸರ ಮುಂದೆ ಬಾಯ್ಬಿಟ್ಟಿದ್ದೇನು?

Share :

Published June 2, 2024 at 4:45pm

Update June 2, 2024 at 5:10pm

    ಮಗನನ್ನ ಉಳಿಸಿಕೊಳ್ಳಲು ಹೋಗಿ ಜೈಲು ಪಾಲಾದ ಕುಟುಂಬಸ್ಥರು

    ಪುಣೆ ಮಾತ್ರವಲ್ಲದೇ ಇಡೀ ದೇಶದ್ಯಾಂತ ಸುದ್ದಿಯಾಗಿದ್ದ ಅಪಘಾತ

    ಘಟನೆ ಕುರಿತು ಪೊಲೀಸರ ಮುಂದೆ ಅಪ್ರಾಪ್ತ ಏನೇನು ಹೇಳಿದ್ದಾನೆ..?

ಮುಂಬೈ: ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣವಾಗಿದ್ದ ಪುಣೆಯ ಪೋರ್ಷೆ ಕಾರು ಆಕ್ಸಿಡೆಂಟ್​ ಕೇಸ್​ಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಮೇ 19 ರಂದು ನಡೆದ ಪೋರ್ಷೆ ಕಾರು ಅಪಘಾತದ ಸಮಯದಲ್ಲಿ ಮದ್ಯಪಾನ ಮಾಡಿರುವುದಾಗಿ ಅಪ್ರಾಪ್ತ ಬಾಲಕ ವೇದಂತ್ ಅಗರ್ವಾಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆಕ್ಸಿಡೆಂಟ್​ ವೇಳೆ ನಡೆದ ಎಲ್ಲ ಘಟನೆಗಳು ಸಂಪೂರ್ಣವಾಗಿ ನೆನಪಿಲ್ಲ. ಆದ್ರೆ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದು ನಾನೇ ಅಂತ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​​​ನ ಮೊದಲ ಪಂದ್ಯದಲ್ಲೇ ಅಮೆರಿಕ ಸೆನ್ಸೇಷನ್.. ಭಾರತಕ್ಕೆ ಎಚ್ಚರಿಕೆ ಕೊಟ್ಟ ಆ್ಯರೋನ್ ಜೇನ್ಸ್​

ಇನ್ನು ಮಗನನ್ನು ಉಳಿಸಿಕೊಳ್ಳಲು ಯತ್ನಿಸಿದ್ದ ಬಾಲಕನ ಪೋಷಕರಾದ ವಿಶಾಲ್ ಅಗರ್ವಾಲ್ ಮತ್ತು ಶಿವಾನಿ ಅಗರ್ವಾಲ್​ರನ್ನ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. ಮಗನ ರಕ್ತದ ಮಾದರಿ ಬದಲಿಗೆ ತನ್ನ ರಕ್ತವನ್ನು ಶಿವಾನಿ ಅಗರ್ವಾಲ್ ನೀಡಿದ್ದರು. ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಪ್ರಕರಣವು ಇದರಲ್ಲಿ ಸೇರಿದ್ದರಿಂದ ಜೂನ್ 5 ರವರೆಗೆ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಕೋರ್ಟ್​ ಒಪ್ಪಿಸಿದೆ. ಬಾಲಕನ ಪೋಷಕರಲ್ಲದೆ, ಆತನ ಅಜ್ಜನನ್ನೂ ಪೊಲೀಸರು ಬಂಧಿಸಿದ್ದಾರೆ. ಸಾಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಮತ್ತು ಓರ್ವ ಉದ್ಯೋಗಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪುಣೆಯಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಪೋರ್ಷೆ ಕಾರು ಆಕ್ಸಿಡೆಂಟ್ ಘಟನೆ ಭಾರೀ ಕೋಲಾಹಲ ಎಬ್ಬಿಸಿತ್ತು. ಹೀಗಾಗಿ ಪ್ರಕರಣದ ವಿವಿಧ ಅಂಶಗಳನ್ನು ತನಿಖೆ ಮೂಲಕ ಕಂಡುಕೊಳ್ಳಲು ಪೊಲೀಸರು ತಂಡಗಳನ್ನು ರಚಿಸಿದ್ದರು ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋರ್ಷೆ ಕಾರು ಆಕ್ಸಿಡೆಂಟ್​​ನಲ್ಲಿ ತಪ್ಪು ಒಪ್ಪಿಕೊಂಡ ಬಾಲಕ.. ಪೊಲೀಸರ ಮುಂದೆ ಬಾಯ್ಬಿಟ್ಟಿದ್ದೇನು?

https://newsfirstlive.com/wp-content/uploads/2024/05/PUNE_Porsche_Car-1.jpg

Load More