/newsfirstlive-kannada/media/post_attachments/wp-content/uploads/2024/05/PUNE_Porsche_CAR.jpg)
ಮುಂಬೈ: ಪುಣೆಯಲ್ಲಿ ಆಪ್ರಾಪ್ತನೊಬ್ಬ ಐಷಾರಾಮಿ ಪೋರ್ಶ್​ ಕಾರಿನಲ್ಲಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರು ಸಾವಿಗೆ ಕಾರಣನಾಗಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ರಾಪ್ತನಿಗೆ ಕೋರ್ಟ್​ ಕೆಲ ನಿಯಮಗಳನ್ನು ವಿಧಿಸಿದ್ದು ಅವುಗಳನ್ನು ಬಾಲಕ ರಿಮಾಂಡ್ ರೂಮ್​ನಲ್ಲಿ ಪಾಲನೆ ಮಾಡಬೇಕಿದೆ.
ಇಬ್ಬರ ಸಾವಿಗೆ ಕಾರಣನಾದ ಬಾಲಾಪರಾಧಿ ವೇದಾಂದ್ ಅಗರ್ವಾಲ್​​ನನ್ನ ಸದ್ಯ ರಿಮಾಂಡ್ ರೂಮ್​ಗೆ ಜೂನ್​ 5ರವರೆಗೆ ಹಾಕಲಾಗಿದೆ. ಆರೋಪಿ ಬಾಲಕ ರಿಮಾಂಡ್​ ರೂಮ್​ನಲ್ಲಿ ಬೆಳಗಿನ ಜಾವ ಎದ್ದು ನಿತ್ಯ ಕರ್ಮಗಳನ್ನ ಮುಗಿಸಿ, ಪ್ರಾರ್ಥನೆ ಮಾಡಬೇಕು. ಬೆಳಗ್ಗೆ 8 ರಿಂದ 10 ಗಂಟೆ ಒಳಗೆ ತಿಂಡಿ ತಿನ್ನಬೇಕು. ಅವಲಕ್ಕಿ, ಉಪ್ಪಿಟ್ಟು, ಮೊಟ್ಟೆ ಮತ್ತು ಹಾಲಿನಂತ ಆರೋಗ್ಯಕರ ಉಪಹಾರ ತಿನ್ನಬೇಕು. 3 ಗಂಟೆಗಳ ಕಾಲ ಅಧ್ಯಯನ ಮಾಡಬೇಕು ಎಂದು ಹೇಳಲಾಗಿದೆ.
/newsfirstlive-kannada/media/post_attachments/wp-content/uploads/2024/05/Pune-Accident-Case.jpg)
ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಕೈದಿಗಳೆಲ್ಲ ರಿಮಾಂಡ್​​ ರೂಮ್​ನ ತರಗತಿಗಳಿಗೆ ಹಾಜರಾಗಬೇಕು. ಸಂಜೆ 4 ಗಂಟೆಗೆ ಸ್ನ್ಯಾಕ್ಸ್​ ನೀಡಲಾಗುತ್ತದೆ. ಇದರ ನಂತರ 1 ಗಂಟೆ ಟಿವಿ ನೋಡಿ, 2 ತಾಸು ವಾಲಿಬಾಲ್ ಅಥವಾ ಫುಟ್ಬಾಲ್ ಆಡಬಹುದು. ರಿಮಾಂಡ್​ ರೂಮ್​ಗೆ ವಾಪಸ್ ಆದ ಬಳಿಕ ತರಕಾರಿ, ದಾಲ್, ಅನ್ನ ಮತ್ತು ರೊಟ್ಟಿಗಳನ್ನು ಒಳಗೊಂಡ ಊಟ ರಾತ್ರಿ ವೇಳೆ ತಿನ್ನಬೇಕು ಎಂದು ತಿಳಿದು ಬಂದಿದೆ.
ಭೀಕರ ಘಟನೆಯಲ್ಲಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದರು ಬಾಲಾಪರಾಧಿಗೆ 15 ಗಂಟೆ ಒಳಗೆ ಜಾಮೀನು ಮಂಜೂರು ಮಾಡಿದ್ದಕ್ಕಾಗಿ ತೀವ್ರ ಟೀಕೆ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಜೂನ್​ 5ರವರೆಗೆ ರಿಮಾಂಡ್ ರೂಮ್​ಗೆ ಕಳುಹಿಸಲಾಗಿದ್ದು, ಮೇಲಿನ ನಿಯಮಗಳನ್ನು ಬಾಲಕ ಪಾಲಿಸಬೇಕಿದೆ ಎಂದು ಹೇಳಲಾಗಿದೆ.
ಮೊದಲು ಬಾಲಾಪರಾಧಿಗೆ ವಿಧಿಸಿದ್ದ ಷರತ್ತುಗಳು
- ಷರತ್ತು 01: ಅಪಘಾತದ ಕುರಿತು ಪ್ರಬಂಧ ಬರೆಯಬೇಕು!
- ಷರತ್ತು 02: ಟ್ರಾಫಿಕ್ ಪೊಲೀಸ್ ವಿಭಾಗದಲ್ಲಿ 15 ದಿನ ಕೆಲಸ!
- ಷರತ್ತು 03: ಕುಡಿತ ಬಿಡೋ ಚಿಕಿತ್ಸೆಗೆ ಕೌನ್ಸೆಲಿಂಗ್‌ಗೆ ಹಾಜರಾಗಬೇಕು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us