newsfirstkannada.com

ಪೋರ್ಶ್​ ಕಾರು ಆಕ್ಸಿಡೆಂಟ್ ಕೇಸ್​; 2 ಪಬ್​ನಲ್ಲಿ ಸ್ನೇಹಿತರ ಜತೆ ಎಂಜಾಯ್ ಮಾಡಿದ್ದ.. ಎಷ್ಟು ಬಿಲ್​ ಕಟ್ಟಿದ್ದ ಬಾಲಕ?

Share :

Published May 22, 2024 at 11:36am

    ಅಪ್ರಾಪ್ತ ಬಾಲಕನ ಬಗ್ಗೆ ಪೊಲೀಸ್ ಕಮಿಷನರ್ ಏನೇನು ಹೇಳಿದ್ದಾರೆ?

    ಐಷಾರಾಮಿ ಪೋರ್ಶ್ ಕಾರಿನಲ್ಲಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದ

    ನಡು ರಸ್ತೆಯಲ್ಲೇ ಇಬ್ಬರು ಅಮಾನುಷವಾಗಿ ಸಾವು, ಆರೋಪಿಗೆ ಥಳಿತ ​

ಮುಂಬೈ: ಪುಣೆಯ ಆಪ್ರಾಪ್ತನೊಬ್ಬ ಐಷಾರಾಮಿ ಪೋರ್ಶ್​ ಕಾರಿನಿಂದ ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರು ಸಾವಿಗೆ ಕಾರಣವಾದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆಕ್ಸಿಡೆಂಟ್ ನಡೆಯುವುದಕ್ಕೂ ಒಂದೂವರೆ ಗಂಟೆ ಮೊದಲು ಬಾಲಕ 2 ಪಬ್​ಗಳಿಗೆ 48 ಸಾವಿರ ರೂ.ಗಳ ಬಿಲ್ ಪಾವತಿಸಿದ್ದನು ಎಂದು ಹೇಳಲಾಗಿದೆ.

ಈ ಬಗ್ಗೆ ಮಾತನಾಡಿರುವ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು, ಪ್ರಮುಖ ಬಿಲ್ಡರ್ ಒಬ್ಬರ ಮಗ 17 ವರ್ಷದ ವೇದಾಂತ ಅಗರವಾಲ್ ಪೋರ್ಶೆ ಟೈಕಾನ್ ಕಾರಿನಲ್ಲಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರು ಐಟಿ ವ್ಯಕ್ತಿಗಳ ಸಾವಿಗೆ ಕಾರಣನಾಗಿದ್ದಾನೆ. ಈ ಘಟನೆ ನಡೆಯುವುದಕ್ಕೂ 90 ನಿಮಿಷ ಮೊದಲು ಕೋಸಿ ರೆಸ್ಟೋರೆಂಟ್ ಪಬ್‌, ಬ್ಲ್ಯಾಕ್ ಮ್ಯಾರಿಯೊಟ್‌ಗೆ ಭೇಟಿ ನೀಡಿ ₹ 48,000 ಬಿಲ್​ ಕಟ್ಟಿದ್ದಾನೆ. ಇದರಲ್ಲಿ ಆಹಾರ ಹಾಗೂ ಮದ್ಯಪಾನಕ್ಕೆ ಸೇರಿ ಬಿಲ್ ಪಾವತಿಸಿದ್ದಾನೆ. ಹೀಗಾಗಿ ಅಪ್ರಾಪ್ತನನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸದ್ಯ ಅವರ ರಕ್ತವನ್ನು ವಿಧಿವಿಜ್ಞಾನ ವರದಿಗಾಗಿ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಪೋರ್ಶ್​ ಕಾರನ್ನು ಚಲಾಯಿಸುವ ಮೊದಲು ಆರೋಪಿಗಳು ಪಬ್‌ಗಳಲ್ಲಿ ಮದ್ಯ ಸೇವಿಸಿದ್ದಾರೆ. ಬಾಲಕ ಮತ್ತು ಆತನ ಸ್ನೇಹಿತರು ಮದ್ಯ ಸೇವಿಸುತ್ತಿರುವ ಕುರಿತು ಸಾಕಷ್ಟು ಸಿಸಿಟಿವಿ ದೃಶ್ಯಗಳಿವೆ. ರಕ್ತದ ಮಾದರಿ ವರದಿಗಾಗಿ ಕಾಯುತ್ತಿವೆ. ಅಲ್ಲದೇ ನಂಬರ್​ ಪ್ಲೇಟ್ ಇಲ್ಲದೆ ಐಷಾರಾಮಿ ಕಾರನ್ನು ಡ್ರೈವ್ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಬಾಲಕನ ತಂದೆ ವಿಶಾಲ್ ಅಗರವಾಲ್​ನನ್ನು ಬಂಧಿಸಲಾಗಿದೆ. ಅಲ್ಲದೇ ಬಾಲಾಪರಾಧಿಗೆ ಮದ್ಯ ಪೂರೈಸಿದ್ದಕ್ಕಾಗಿ 2 ಹೋಟೆಲ್‌ಗಳ ಮೂವರು ಅಧಿಕಾರಿಗಳನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.

ಪೋರ್ಶ್ ಕಾರಿನ ತಾತ್ಕಾಲಿಕ ರಿಜಿಸ್ಟ್ರೇಷನ್ ರದ್ದು ಮಾಡುವುದು ಜೊತೆಗೆ ಅಪ್ರಾಪ್ತ ಬಾಲಕನಿಗೆ 25 ವರ್ಷ ಆಗುವರೆಗೂ ಡ್ರೈವಿಂಗ್ ಲೈಸೆನ್ಸ್ ನೀಡದಿರಲು ಆರ್‌ಟಿಓ ನಿರ್ಧರಿಸಿದೆ. ಆರೋಪಿ ವಿರುದ್ಧ ಉದ್ದೇಶ ಪೂರ್ವಕವಲ್ಲದ ಹತ್ಯೆ ಬಳಿಕ ಮದ್ಯ ಸೇವಿಸಿ ಕಾರು ಚಾಲನೆ ಸೆಕ್ಷನ್ ಅಡಿ ಕೇಸ್ ದಾಖಲಿಸಲಾಗಿದೆ. ಆದರೆ ಆರೋಪಿ ಬಾಲಕ ಮದ್ಯ ಸೇವನೆಯ ವರದಿ ನೆಗೆಟಿವ್ ಬಂದಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋರ್ಶ್​ ಕಾರು ಆಕ್ಸಿಡೆಂಟ್ ಕೇಸ್​; 2 ಪಬ್​ನಲ್ಲಿ ಸ್ನೇಹಿತರ ಜತೆ ಎಂಜಾಯ್ ಮಾಡಿದ್ದ.. ಎಷ್ಟು ಬಿಲ್​ ಕಟ್ಟಿದ್ದ ಬಾಲಕ?

https://newsfirstlive.com/wp-content/uploads/2024/05/PUNE_CAR_NEW.jpg

Load More