newsfirstkannada.com

ಪೋರ್ಷೆ ಕಾರು ಆಕ್ಸಿಡೆಂಟ್ ಕೇಸ್‌ನಲ್ಲಿ ಕಳ್ಳಾಟ.. ಬಾಲಕನ ತಾಯಿ ತಗ್ಲಾಕೊಂಡಿದ್ದೇ ರೋಚಕ; ಅಸಲಿಗೆ ಆಗಿದ್ದೇನು? 

Share :

Published June 1, 2024 at 4:24pm

Update June 1, 2024 at 4:32pm

    ಮಗನನ್ನ ಉಳಿಸಲು ಹೋಗಿ ಜೈಲಿನಲ್ಲಿ ಕುಳಿತ ಇಡೀ ಕುಟುಂಬ

    ಮನೆಯ ಕಾರು ಡ್ರೈವರ್​ಗೆ ಅಪರಾಧ ಒಪ್ಪಿಕೊಳ್ಳಲು ಒತ್ತಾಯ

    ಬಾಲಕನ ತಾಯಿ ಬಂಧನದ ಹಿಂದೆ ಇದೆ ಬಲವಾದ ಒಂದು ಕಾರಣ

ಮುಂಬೈ: ಪುಣೆಯ ಪೋರ್ಷೆ ಕಾರು ಆಕ್ಸಿಡೆಂಟ್​ಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನ ತಾಯಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಪಘಾತ ನಡೆದಾಗ ತನ್ನ ಮಗ ಮದ್ಯಪಾನ ಮಾಡಿಲ್ಲ ಎಂದು ಸಾಬೀತುಪಡಿಸಲು ತಾಯಿ ತನ್ನ ರಕ್ತದ ಮಾದರಿಯನ್ನು ಪರೀಕ್ಷೆಗೆ ನೀಡಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ಅಪ್ರಾಪ್ತ ಬಾಲಕ ವೇದಾಂತ್ ಅಗರ್ವಾಲ್ ಐಷಾರಾಮಿ ಪೋರ್ಷೆ ಕಾರಿನಲ್ಲಿ ಅತಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣವಾಗಿದ್ದನು. ಈ ಪ್ರಕರಣದಲ್ಲಿ ಬಾಲಕನನ್ನು ಕಾಪಾಡಲು ಹೋಗಿ ಇಡೀ ಕುಟುಂಬವೇ ಈಗ ಜೈಲು ಪಾಲಾಗಿದೆ. ವೈದ್ಯರಿಗೆ ರಕ್ತವನ್ನು ಪರೀಕ್ಷೆ ಕೊಡುವಾಗ ಮಗನ ಬದಲಿಗೆ ತಾಯಿ ಶಿವಾನಿ ಅಗರ್ವಾಲ್ ರಕ್ತವನ್ನು ನೀಡಲಾಗಿದೆ. ಹೀಗಾಗಿ ಬ್ಲಡ್​ ಟೆಸ್ಟ್​​ನಲ್ಲಿ ಬಾಲಕ ಮದ್ಯಪಾನ ಮಾಡಿಲ್ಲ ಎಂದು ತಪ್ಪು ವರದಿ ಬಂದಿದೆ. ಇದೆಲ್ಲ ಪೊಲೀಸ್ ತನಿಖೆಯಲ್ಲಿ ಹೊರ ಬಂದಿದ್ದರಿಂದ ಸದ್ಯ ಶಿವಾನಿ ಅಗರ್ವಾಲ್ ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 6 ಬಾರಿ ExitPoll ಲೆಕ್ಕಾಚಾರ ತಲೆಕೆಳಗಾಗಿತ್ತು.. ಲೋಕಸಭಾ ಚುನಾವಣೆಯ ಭವಿಷ್ಯ ನಿಜವಾಗುತ್ತಾ?

ಆರೋಪ ಹೊತ್ತುಕೊಳ್ಳುವಂತೆ ತಮ್ಮ ಮನೆಯ ಕಾರು ಚಾಲಕನಿಗೆ ಒತ್ತಾಯ ಮಾಡಿದ್ದರು. ಹಣದ ಆಮಿಷವನ್ನು ಕೂಡ ಒಡ್ಡಿದ್ದರು. ಆದರೆ ಇದಕ್ಕೆ ಡ್ರೈವರ್ ಒಪ್ಪದಿದ್ದಾಗ ಕಿಡ್ನಾಪ್ ಮಾಡಿರುವ ಆರೋಪದ ಮೇಲೆ ಬಾಲಕನ ತಂದೆ ಹಾಗೂ ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ. ಅಪರಾಧವನ್ನು ಮುಚ್ಚಿಡಲು ಪ್ರಭಾವಿ ಕುಟುಂಬ ಹಲವಾರು ಪ್ರಯತ್ನಗಳು ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪುಣೆಯ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋರ್ಷೆ ಕಾರು ಆಕ್ಸಿಡೆಂಟ್ ಕೇಸ್‌ನಲ್ಲಿ ಕಳ್ಳಾಟ.. ಬಾಲಕನ ತಾಯಿ ತಗ್ಲಾಕೊಂಡಿದ್ದೇ ರೋಚಕ; ಅಸಲಿಗೆ ಆಗಿದ್ದೇನು? 

https://newsfirstlive.com/wp-content/uploads/2024/06/PUNE_CAR_MOTHER_1.jpg

Load More