/newsfirstlive-kannada/media/post_attachments/wp-content/uploads/2025/03/Puneeth_Rajkumar_PANI_POORI_NEW.jpg)
ಬೆಂಗಳೂರು: ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಅವರ 50ನೇ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಅಭಿಮಾನಿಗಳು ವಿಶೇಷವಾಗಿ ಸಂಭ್ರಮಾಚರಣೆ ಮಾಡಲು ಸಿದ್ಧರಾಗಿದ್ದಾರೆ. ಅದೇ ದಿನದಂದು ಅಭಿಮಾನಿಯೊಬ್ಬರು ಮಸಾಲಪೂರಿ, ಪಾನಿಪೂರಿ ಉಚಿತವಾಗಿ ನೀಡುವುದಾಗಿ ಹೇಳಿ ಬ್ಯಾನರ್ ಅಳವಡಿಸಿದ್ದಾರೆ.
ಸಿಲಿಕಾನ್ ಸಿಟಿಯ ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ನವರು ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಫ್ರೀಯಾಗಿ ಮಸಾಲಪೂರಿ, ಪಾನಿಪೂರಿಯನ್ನು ಮಾರ್ಚ್ 17 ರಂದು ಸಂಜೆ ಸಮಯದಲ್ಲಿ ನೀಡುತ್ತಾರೆ. ಪುನೀತ್ ರಾಜ್ಕುಮಾರ್ ಅವರ 50ನೇ ಹುಟ್ಟುಹಬ್ಬ ಪ್ರಯುಕ್ತ ಹಾಗೂ ಟೀಮ್ ಇಂಡಿಯಾ 2025ರ ಐಸಿಸಿ ಚಾಂಪಿಯನ್ ಟ್ರೋಫಿ ಗೆದ್ದಿದ್ದಕ್ಕಾಗಿ ಮಸಾಲಪೂರಿ, ಪಾನಿಪೂರಿ ಉಚಿತವಾಗಿ ನೀಡಲಾಗುತ್ತದೆ.
ಇದನ್ನೂ ಓದಿ:ನಾಳೆ ಅಪ್ಪು ಸಿನಿಮಾ ರೀ ರಿಲೀಸ್; ಅಂದು ಶತದಿನೋತ್ಸವ ಸಮಾರಂಭದಲ್ಲಿ ರಜನಿಕಾಂತ್ ಏನೆಂದು ಹೇಳಿದ್ದರು? Video
ಹೀಗಾಗಿ ಮಸಾಲಪೂರಿ, ಪಾನಿಪೂರಿ ತಿನ್ನಬೇಕು ಎನ್ನುವವರು ಅಂದು ಮಹಾಲಕ್ಷ್ಮಿ ಲೇಔಟ್ನ ಸ್ವಿಮ್ಮಿಂಗ್ ಪೂಲ್ ಎದುರುಗಡೆ ಇರುವ ಅನಿಲ್ ಚಾಟ್ಸ್ ಸೆಂಟರ್ಗೆ ಭೇಟಿ ನೀಡಬಹುದು. ನಿಮಗೆ ಬೇಕಾದಷ್ಟು ಚಾಟ್ಸ್ ತಿಂದು ಬರಬಹುದು. ಈಗಾಗಲೇ ತಮ್ಮ ಅಂಗಡಿ ಮುಂದೆ ಬ್ಯಾನರ್ ಅನ್ನು ಅಳವಡಿಸಿದ್ದಾರೆ. ಜೊತೆಗೆ ಫೋನ್ ನಂಬರ್ ಕೂಡ ಕೊಟ್ಟಿದ್ದಾರೆ.
ಇನ್ನು ಪುನೀತ್ ರಾಜ್ಕುಮಾರ್ ಅವರ ಬರ್ತ್ಡೇಗೆ ಇನ್ನು ಮೂರು ದಿನ ಮೊದಲೇ ಅಂದರೆ ನಾಳೆ ಅಪ್ಪು ಸಿನಿಮಾವನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಈಗಾಗಲೇ ಈ ಸಿನಿಮಾದ ಟಿಕೆಟ್ಗಳೆಲ್ಲಾ ಬಹುತೇಕ ಮಾರಾಟವಾಗಿವೆ. ಫಸ್ಟ್ ಶೋ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಪುನೀತ್ ರಾಜ್ಕುಮಾರ್ ಅವರ ಮೊದಲ ಸಿನಿಮಾವೇ 200 ದಿನಗಳವರೆಗೆ ಪ್ರದರ್ಶನ ಕಂಡಿತ್ತು ಎನ್ನುವುದು ವಿಶೇಷ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ