ಇಂದು ಅಪ್ಪು ಸಿನಿಮಾ ರೀ ರಿಲೀಸ್, ಕ್ರೇಜ್ ಏನು ಕಡಿಮೆ ಇಲ್ಲ.. ಪುನೀತ್ ರಾಜ್​ಕುಮಾರ್ ಫ್ಯಾನ್ಸ್​ ಸಂಭ್ರಮ

author-image
Bheemappa
Updated On
ಇಂದು ಅಪ್ಪು ಸಿನಿಮಾ ರೀ ರಿಲೀಸ್, ಕ್ರೇಜ್ ಏನು ಕಡಿಮೆ ಇಲ್ಲ.. ಪುನೀತ್ ರಾಜ್​ಕುಮಾರ್ ಫ್ಯಾನ್ಸ್​ ಸಂಭ್ರಮ
Advertisment
  • ಎಷ್ಟು ಥಿಯೇಟರ್​ಗಳಲ್ಲಿ ಅಪ್ಪು ಚಿತ್ರ ಮರು ಬಿಡುಗಡೆ ಆಗುತ್ತಿದೆ?
  • ನಾಯಕ ನಟನಾಗಿ ಅಭಿನಯಿಸಿರುವ ಮೊದಲ ಸಿನಿಮಾ ‘ಅಪ್ಪು’
  • ಅಪ್ಪು 200 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿದ್ದ ಸಿನಿಮಾ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರು ನಾಯಕ ನಟನಾಗಿ ಅಭಿನಯ ಮಾಡಿರುವ ಮೊಟ್ಟ ಮೊದಲ ಸಿನಿಮಾ ಅಪ್ಪು, ಇಂದು ರಾಜ್ಯಾದ್ಯಂತ ಮರು ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು ಜೊತೆಗೆ ಚಿತ್ರಮಂದಿರಗಳಲ್ಲಿ ಫಸ್ಟ್​ ಶೋ ಟಿಕೆಟ್​ ಸೋಲ್ಡ್​ ಔಟ್ ಆಗಿವೆ.

ಮಾರ್ಚ್ 17​ ರಂದು ಪುನೀತ್ ರಾಜ್‍ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಇರುವುದರಿಂದ ಮೂರು ದಿನ ಮೊದಲೇ ಅವರ ಸಿನಿಮಾವನ್ನ ರೀ ರಿಲೀಸ್ ಆಗುತ್ತಿದೆ. 23 ವರ್ಷಗಳ ನಂತರ ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾ ಮತ್ತೆ ತೆರೆ ಮೇಲೆ ಬರುತ್ತಿದೆ. ಪುನೀತ್ ರಾಜ್​ಕುಮಾರ್ ಸಿನಿಮಾ ಥಿಯೇಟರ್​ನಲ್ಲಿ ನೋಡುವ ಅವಕಾಶ ಮತ್ತೆ ಸಿಗುವುದು ಯಾವಾಗ, ಏನೋ ಎಂದು ಅಭಿಮಾನಿಗಳು, ಜನ ಈಗಾಗಲೇ ಟಿಕೆಟ್ ಖರೀದಿಸಿ ಸಿನಿಮಾ ನೋಡಲು ಕಾತುರದಲ್ಲಿದ್ದಾರೆ.

ಇದನ್ನೂ ಓದಿ:ಪುನೀತ್ ರಾಜ್​ಕುಮಾರ್ ಬರ್ತ್​ಡೇ ಸ್ಪೆಷಲ್.. ಮಸಾಲಪೂರಿ, ಪಾನಿಪೂರಿ ಫ್ರೀ.. ಫ್ರೀ.. ಎಲ್ಲಿ?

publive-image

ಬೆಂಗಳೂರು ಮಾತ್ರ ಅಲ್ಲ ರಾಜ್ಯಾದ್ಯಂತ ಇರುವ 100ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಅಪ್ಪು ಸಿನಿಮಾ ಇಂದು ಮರು ಬಿಡುಗಡೆ ಆಗುತ್ತಿದೆ. ಕಳೆದ ವರ್ಷ ಜಾಕಿ ಸಿನಿಮಾವನ್ನು ರೀ ರಿಲೀಸ್ ಮಾಡಲಾಗಿತ್ತು. ಇದಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದರಿಂದ ದಾಖಲೆ ಮಟ್ಟದಲ್ಲಿ ಹಣ ಸಂಗ್ರಹ ಮಾಡಿತ್ತು. ಇದೀಗ ಅಪ್ಪು ಸಿನಿಮಾವನ್ನು ಇಂದು ರೀ ರಿಲೀಸ್ ಮಾಡಲಾಗುತ್ತಿದೆ. ಎಲ್ಲೆಡೆ ಅಪ್ಪು ಚಿತ್ರದ ರಿಲೀಸ್ ಅಬ್ಬರ ಜೋರಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಫೋಟೋಗಳು ವೈರಲ್ ಆಗಿವೆ.

ಇನ್ನು ಅಪ್ಪು ಸಿನಿಮಾ 26 ಏಪ್ರಿಲ್ 2002 ರಂದು ತೆರೆಗೆ ಅಪ್ಪಳಿಸಿತ್ತು. ಸಿನಿಮಾವೂ ಲವ್​ಟ್ರ್ಯಾಕ್, ಫ್ಯಾಮಿಲಿ, ಫ್ರೆಂಡ್ಸ್​, ಕಾಲೇಜು, ಕಾಮಿಡಿ ಎಲ್ಲವನ್ನು ಒಳಗೊಂಡಿದ್ದರಿಂದ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಶತದಿನೋತ್ಸವ ಪೂರೈಸಿತ್ತು. ಕಿರಿಯ ಮಗನ ಸಿನಿಮಾ ಸಕ್ಸಸ್​ ಕಂಡಿದ್ದಕ್ಕೆ ರಾಜ್​ಕುಮಾರ್ ಅವರು ತುಂಬಾ ಸಂತಸ ಪಟ್ಟು ಶತದಿನೋತ್ಸವ ಸಂಭ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್​ ಅವರನ್ನು ಆಹ್ವಾನಿಸಿದ್ದರು. ಅಪ್ಪು ಒಟ್ಟು 200 ದಿನಗಳ ಕಾಲ ಯಶಸ್ವಿ ಅಂದು ಪ್ರದರ್ಶನ ಕಂಡಿತ್ತು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment