ನಾಳೆ ಅಪ್ಪು ಸಿನಿಮಾ ರೀ ರಿಲೀಸ್​; ಅಂದು ಶತದಿನೋತ್ಸವ ಸಮಾರಂಭದಲ್ಲಿ ರಜನಿಕಾಂತ್ ಏನೆಂದು ಹೇಳಿದ್ದರು? Video

author-image
Bheemappa
Updated On
ಇಂದು ಅಪ್ಪು ಸಿನಿಮಾ ರೀ ರಿಲೀಸ್, ಕ್ರೇಜ್ ಏನು ಕಡಿಮೆ ಇಲ್ಲ.. ಪುನೀತ್ ರಾಜ್​ಕುಮಾರ್ ಫ್ಯಾನ್ಸ್​ ಸಂಭ್ರಮ
Advertisment
  • ಅಪ್ಪು ಎಂದು ಸಿನಿಮಾ ಹೆಸರನ್ನು ಇಟ್ಟವರು ಯಾರು ಹೇಳಿ?
  • ಪುನೀತ್ ರಾಜ್​ಕುಮಾರ್ ಬರ್ತ್​ಡೇಗೆ ಅಪ್ಪು ಚಿತ್ರ ರಿಲೀಸ್
  • ಅಪ್ಪು ಸಿನಿಮಾ ಡೈರೆಕ್ಟ್ ಮಾಡಿದ ನಿರ್ದೇಶಕರು ಯಾರು..?

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರು ಮೊದಲ ಬಾರಿಗೆ ಹೀರೋ ಆಗಿ ಅಭಿನಯಿಸಿದ ಮೊಟ್ಟ ಮೊದಲ ಸಿನಿಮಾ ಅಪ್ಪು. 2002ರಲ್ಲಿ ಬೆಳ್ಳೆ ತೆರೆಗೆ ಅಪ್ಪಳಿಸಿದ್ದ ಈ ಸಿನಿಮಾ ಶತದಿನೋತ್ಸವ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. ವಜ್ರೇಶ್ವರಿ ಕಂಬೈನ್ಸ್​ ಬ್ಯಾನರ್​ನಲ್ಲಿ ಮೂಡಿ ಬಂದಿದ್ದ ಅಪ್ಪು ಮೂವಿ ಮಾರ್ಚ್​ 14 ಅಂದರೆ ನಾಳೆ ಮರು ಬಿಡುಗಡೆ ಆಗುತ್ತಿದ್ದು ಟಿಕೆಟ್​ಗಳೆಲ್ಲಾ ಸೋಲ್ಡ್​ ಔಟ್​ ಆಗುತ್ತಿವೆ.

ಪುನೀತ್ ರಾಜ್‍ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ಮೊಟ್ಟ ಮೊದಲ ಮೂವಿ ಅಪ್ಪು ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ನಾಳೆ ಬಿಡುಗಡೆ ಆಗುತ್ತಿದ್ದ ಕಾರಣ ಸಿನಿಮಾ ಮಂದಿರಗಳಲ್ಲಿ ಟಿಕೆಟ್​ಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಆನ್​ಲೈನ್​ ಬುಕ್ ಮೈ ಶೋನಲ್ಲೂ ಬುಕ್ಕಿಂಗ್ ಆರಂಭವಾಗಿದ್ದು, ಫಸ್ಟ್​ ಶೋನ ಟಿಕೆಟ್​ಗಳೆಲ್ಲಾ ಬಹುತೇಕ ಮಾರಾಟವಾಗಿವೆ. ಇನ್ನುಳಿದಂತೆ ಬೆಂಗಳೂರಿನ ವಿವಿಧ ಥಿಯೇಟರ್​ಗಳಲ್ಲಿ ಬೆಳಗಿನ ಜಾವದ ಶೋಗಳು ನಡೆಯಲಿದೆ. ಹೀಗಾಗಿ ಅಪ್ಪು ಅಭಿಮಾನಿಗಳು ಸೇರಿದಂತೆ ಜನರು ಸಂಭ್ರಮಾಚರಣೆಗೆ ವೇದಿಕೆ ಸಿದ್ಧವಾಗುತ್ತಿದೆ.

publive-image

ಅಪ್ಪು ಸಿನಿಮಾ 26 ಏಪ್ರಿಲ್ 2002 ರಂದು ತೆರೆಗೆ ಅಪ್ಪಳಿಸಿತ್ತು. ಸಿನಿಮಾದಲ್ಲಿ ಲವ್​ಟ್ರ್ಯಾಕ್, ಫ್ಯಾಮಿಲಿ, ಫ್ರೆಂಡ್ಸ್​, ಕಾಲೇಜು, ಕಾಮಿಡಿ ಎಲ್ಲವೂ ಇದ್ದಿದ್ದರಿಂದ 100 ದಿನಗಳನ್ನು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪೂರೈಸಿತ್ತು. ಸಿನಿಮಾ ಶತದಿನೋತ್ಸವ ಪ್ರದರ್ಶನ ಕಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ವಸಂತ್ ನಗರದಲ್ಲಿನ ಅಂಬೇಡ್ಕರ್ ಭವನದಲ್ಲಿ ಅಪ್ಪು ಮೂವಿ 100 ದಿನಗಳ ಸಂಭ್ರಮ ಭರ್ಜರಿಯಾಗಿ ಆಚರಿಸಲಾಗಿತ್ತು.

ಪುನೀತ್ ರಾಜ್​ಕುಮಾರ್ ಅವರ ಮೊದಲ ಸಿನಿಮಾವಾಗಿದ್ದರಿಂದ ವರನಟ ಡಾ.ರಾಜ್​ಕುಮಾರ್ ಅವರು ಅಪ್ಪು ಸಿನಿಮಾದ ಶತದಿನೋತ್ಸವ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಕರೆಸಿದ್ದರು. ಇದರ ಜೊತೆಗೆ ಪದ್ಮಭೂಷಣ ವಿಜೇತೆ ಹಿರಿಯ ನಟಿ ಬಿ.ಸರೋಜಾದೇವಿ, ಜಯಂತಿ ಸೇರಿದಂತೆ ಹಲವು ಗಣ್ಯರು ವಿಶೇಷ ಅಥಿತಿಗಳಾಗಿದ್ದರು. ಪಾರ್ವತಮ್ಮ ರಾಜ್​ಕುಮಾರ್, ರಾಜ್​ಕುಮಾರ್ ಸಹೋದರ ವರದನ್ನ, ಗೆಳೆಯರಾದ ತಿಪಟೂರು ರಾಮಸ್ವಾಮಿ ಇದ್ದರು.

ಇದನ್ನೂ ಓದಿ:ರೈಲ್ವೆ ಇಲಾಖೆಯಲ್ಲಿ 1003 ಉದ್ಯೋಗಗಳು.. ಅರ್ಜಿ ಸಲ್ಲಿಕೆಗೆ 15 ವರ್ಷ ಮೇಲ್ಪಟ್ಟವರಿಗೆ ಅವಕಾಶ

publive-image

ಈ ಸಂಬಂಧ ಅಂದಿನ ವಿಶೇಷ ವಿಡಿಯೋವನ್ನು ಪಿಆರ್‌ಕೆ ಪ್ರೊಡಕ್ಷನ್ ಯುಟ್ಯೂಬ್​ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್, ಡಾ.ರಾಜ್‌ಕುಮಾರ್ ಅವರು ಅಪ್ಪು ಮೂವಿ ಹಾಗೂ ಅಪ್ಪು ಕುರಿತು ಮಾತನಾಡಿರುವುದು ಇದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆ, ಆಕ್ಷನ್, ಡೈಲಾಗ್ ಎಲ್ಲ ಮೆಚ್ಚಿಕೊಂಡು ರಜನಿಕಾಂತ್ ಅವರು ವೇದಿಕೆ ಮೇಲೆ ಹಾಡಿ ಹೊಗಳಿದ್ದರು.

ಅಂದು ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡಿದ್ದು ಎಂದರೆ.. ಅಪ್ಪು ಸಿನಿಮಾದ ಶತಮಾನೋತ್ಸವ. ಇದು ಒಂದು ಸಿಂಹದ ಮರಿ. ಇದು ಈಗ ತಾನೆ ಎದ್ದು ಘರ್ಜನೆ ಮಾಡುತ್ತಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನು ಏನೇನು ಮಾಡುತ್ತೋ ಎನ್ನುವುದನ್ನು ನಾವೆಲ್ಲಾ ನೋಡಬೇಕು. ಇದಕ್ಕಾಗಿ ನಾನಂತೂ ಕಾತುರನಾಗಿದ್ದೇನೆ. ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಮಾಡಿದ ಫೈಟ್, ಡೈಲಾಗ್ ಎಲ್ಲ ಚೆನ್ನಾಗಿ ಇದೆ. ಸಿನಿಮಾ ಸೂಪರ್ ಆಗಿದೆ.

publive-image

ವೇದಿಕೆ ಮೇಲೆ ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್ ಅವರು ಬರುತ್ತಿದ್ದಂತೆ ತಂದೆಗೆ ಹಾಗೂ ರಜನಿಕಾಂತ್​ ಅವರ ಪಾದ ಮುಟ್ಟಿ ನಮಸ್ಕಾರ ಮಾಡಿದ್ದರು. ಅಪ್ಪು ಸಿನಿಮಾದಲ್ಲಿ ಡಾ.ರಾಜ್​ಕುಮಾರ್ ಅವರು ಹಿನ್ನೆಲೆ ಗಾಯನ ನೀಡಿದ್ದರು. ಇನ್ನೊಂದು ವಿಶೇಷ ಎಂದರೆ ಈ ಸಿನಿಮಾಕ್ಕೆ ಶಿವರಾಜ್​ಕುಮಾರ್ ಅವರೇ ಅಪ್ಪು ಎಂದು ಹೆಸರಿಟ್ಟಿದ್ದರು. ಇಂದಿನ ತೆಲುಗಿನ ಫೇಮಸ್​ ಡೈರೆಕ್ಟರ್​ ಆಗಿರುವ ಪುರಿ ಜಗನಾಥ್​ ಅವರು ಅಂದು ಅಪ್ಪು ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದು ಪುರಿ ಜಗನಾಥ್ ಅವರ ಮೊದಲ ಸಿನಿಮಾವಾಗಿತ್ತು. ಗುರು ಕಿರಣ್ ಅವರು ಸಂಗೀತ ನೀಡಿದ್ದರು.

ಅಪ್ಪು ಸಿನಿಮಾ ಅಂದೇ 200 ದಿನಗಳ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. ಬಾಲನಟನಾಗಿಯೇ ಅಭಿಮಾನಿಗಳ ಮನ ಗೆದ್ದಿದ್ದ ಪುನೀತ್ ರಾಜ್​ಕುಮಾರ್ ಅವರು ಯುವಕನಾಗಿ ಅಭಿನಯ ಮಾಡಿದ ಮೇಲೆ ಇಡೀ ಕರ್ನಾಟಕವೇ ಹಾಡಿ ಹೊಗಳಿತ್ತು. ಸಿನಿಮಾದಲ್ಲಿ ರಕ್ಷಿತಾ ಪ್ರೇಮ್ ಅವರು ಹೀರೋಯಿನ್​ ಆಗಿ ಮಿಂಚಿದ್ದರು. ಆಗಸ್ಟ್ 10, 2002 ರಂದು ಅಪ್ಪು ಸಿನಿಮಾದ ಶತದಿನೋತ್ಸವ ಸಮಾರಂಭವನ್ನು ಆಚರಣೆ ಮಾಡಲಾಗಿತ್ತು.


">March 12, 2025


">March 12, 2025


">March 13, 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment