ನಡುಗುವ ಕೈಗಳು, ತೊದಲು ಮಾತು.. ಮುಚ್ಚಿಟ್ಟಿದ್ದ ಗುಟ್ಟು ಕೊನೆಗೂ ರಟ್ಟಾಯ್ತು; ನಟ ವಿಶಾಲ್​ಗೆ​ ಆಗಿದ್ದೇನು?

author-image
Veena Gangani
Updated On
ನಡುಗುವ ಕೈಗಳು, ತೊದಲು ಮಾತು.. ಮುಚ್ಚಿಟ್ಟಿದ್ದ ಗುಟ್ಟು ಕೊನೆಗೂ ರಟ್ಟಾಯ್ತು; ನಟ ವಿಶಾಲ್​ಗೆ​ ಆಗಿದ್ದೇನು?
Advertisment
  • ಫಿಟ್​ ಆಗಿದ್ದ ನಟ ವಿಶಾಲ್​ ಆರೋಗ್ಯಕ್ಕೆ ಏನಾಗಿದೆ ಗೊತ್ತಾ?
  • ಪ್ರಚಾರದ ವೇಳೆ ಮಾತನಾಡಲು ಕಷ್ಟ ಪಡುತ್ತಿದ್ದ ನಟ ವಿಶಾಲ್
  • ಹಲವಾರು ಸಿನಿಮಾಗಳಲ್ಲಿ ಅಭಿನಯ ಮಾಡಿರುವ ನಟ ವಿಶಾಲ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆತ್ಮೀಯ ಗೆಳೆಯ ತಮಿಳು ಸ್ಟಾರ್, ನಟ ವಿಶಾಲ್​​ ಅಭಿಮಾನಿಗಳಿಗೆ ಆತಂಕದ ಜೊತೆ ಆಘಾತ ತರಿಸಿರುವ ಸುದ್ದಿ ಇದು. ಬಿಳಿಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ತಮ್ಮ ಹೊಸ ಸಿನಿಮಾ ‘ಮದಗಜರಾಜ’ ಚಿತ್ರದ ಪ್ರೀ ರಿಲೀಸ್ ಇವೆಂಟ್​​ನಲ್ಲಿ ಭಾಗಿಯಾಗಿದ್ದರು. ವೇದಿಕೆ ಮೇಲೆ ಮೈಕ್ ಹಿಡಿದು ಮಾತನಾಡುವ ವೇಳೆ ಅವರ ಕೈ ನಡುಗ್ತಾ ಇತ್ತು. ಮೈಕ್ ಹಿಡಿಯಲು ಆಗದಷ್ಟೂ ಕೈ ನಡುಗಿದೆ. ಮಾತುಗಳು ತೊದಲುತ್ತಿದ್ದವು. ಪದಗಳ ಉಚ್ಛಾರಣೆ ಕೂಡ ಸರಿಯಾಗಿ ಆಗಿಲ್ಲ. ತೀವ್ರ ಅಸ್ವಸ್ಥರಾದಂತೆ ಕಂಡು ಬಂದ ವಿಶಾಲ್ ದೇಹ ಶೇಕ್ ಆಗ್ತಿದ್ದು ಅವರ ಅಕ್ಷಿಗಳಿಂದ ಕಣ್ಣೀರು ಉಮ್ಮಳಿಸಿತ್ತು.

ಇದನ್ನೂ ಓದಿ:VIDEO: ಅದ್ಧೂರಿಯಾಗಿ ನಡೆದ ಸ್ಟಾರ್ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ

publive-image

ಕಳೆದ ಕೆಲವು ದಿನಗಳಿಂದ ನಟ ವಿಶಾಲ್ ಜ್ವರದಿಂದ ಬಳಲುತ್ತಿದ್ದರು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ವಿಶಾಲ್ ನಡುಗುತ್ತಿದ್ದಾರೆ ಎಂಬ ಮಾತು ವೇದಿಕೆ ಮೇಲಿದ್ದ ನಿರೂಪಕರಿಂದ ಕೇಳಿ ಬಂತು. ಅಸ್ವಸ್ಥರಾಗಿದ್ದರೂ ನಟ ವಿಶಾಲ್ ತಮ್ಮ ಹೊಸ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದರು. ಆದ್ರೆ ಇನ್ನೂ ಯಂಗ್ ಲುಕ್​ನಲ್ಲಿ ಕಾಣುವ 47 ವರ್ಷದ ನಟ ವಿಶಾಲ್ ಆರೋಗ್ಯಕ್ಕೆ ಏನಾಗಿದೆ ಎನ್ನುವ ಪ್ರಶ್ನೆಗಳು ಮೂಡಿವೆ. ಆದ್ರೆ ಅವರ ಆರೋಗ್ಯದ ಕುರಿತ ಯಾವುದೇ ಅಧಿಕೃತ ಮಾಹಿತಿಗಳು ಇದುವರೆಗೆ ಹೊರಬಿದ್ದಿಲ್ಲ, ಇಷ್ಟೇ ಅಲ್ಲದೇ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಅಭಿಮಾನಿಗಳನ್ನು ಆತಂಕಕ್ಕೆ ದೂಡಿದೆ.


">January 5, 2025

ಇನ್ನು, ಮದಗಜರಾಜ 12 ವರ್ಷಗಳ ಹಿಂದೆಯೇ ಅರ್ಧ ಶೂಟಿಂಗ್ ಆಗಿತ್ತು. ಕೆಲ ಕಾರಣಗಳಿಂದ ಸಿನಿಮಾ ಪೂರ್ತಿ ಮಾಡಲು ಆಗಿರಲಿಲ್ಲ. ಆದ್ರೀಗ ಸಿನಿಮಾ ಶೂಟಿಂಗ್​ ಪೂರ್ಣಗೊಂಡಿದ್ದು ಈಗಾಗಲೇ ಟ್ರೈಲರ್​​ನಲ್ಲೇ ಮಿಂಚು ಹರಿಸಿದೆ. ‘ಮದಗಜರಾಜ’ ಸಂಕ್ರಮಣ ಹಬ್ಬಕ್ಕೆ ಬಿಡುಗಡೆಯಾಗಲಿದ್ದು ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ. ಆದ್ರೆ ಅನಾರೋಗ್ಯ ಇದ್ದರೂ ನಟ ವಿಶಾಲ್ ಪ್ರಚಾರಕ್ಕೆ ಯಾಕೆ ಬರಬೇಕಿತ್ತು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment