ಅಪ್ಪು ಹೆಸರಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಒಂದು ದಿಟ್ಟ ಹೆಜ್ಜೆ.. ಇದು ಭಾರತದಲ್ಲೇ ಮೊಟ್ಟ ಮೊದಲು; ಏನದು?

author-image
Veena Gangani
Updated On
ಅಪ್ಪು ಹೆಸರಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಒಂದು ದಿಟ್ಟ ಹೆಜ್ಜೆ.. ಇದು ಭಾರತದಲ್ಲೇ ಮೊಟ್ಟ ಮೊದಲು; ಏನದು?
Advertisment
  • ಅಪ್ಪು ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದ ಫ್ಯಾನ್ಸ್​ಗೆ ಬಂತು ಹೊಸ APP
  • ಪುನೀತ್ ರಾಜ್‌ಕುಮಾರ್ ಬರ್ತ್​ ಡೇ ದಿನವೇ ಫ್ಯಾನ್ಸ್​ಗೆ ಗುಡ್​ನ್ಯೂಸ್​
  • ಅಪ್ಪು ಹೆಸರಲ್ಲಿ ಒಂದು ದಿಟ್ಟ ಹೆಜ್ಜೆ ಇಟ್ಟ ಅಶ್ವಿನಿ ಪುನೀತ್ ರಾಜ್‌ಕುಮಾರ್‌

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಇಂದು 50ನೇ ವರ್ಷದ ಹುಟ್ಟು ಹಬ್ಬ. ಹೀಗಾಗಿ ನಗರದ ಕಂಠೀರವ ಸ್ಟುಡಿಯೋಗೆ ಅಪ್ಪು ಅಭಿಮಾನಿಗಳು ಆಗಮಿಸಿ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಮತ್ತೊಂದು ಕಡೆ ದೊಡ್ಮನೆ ಕುಟುಂಬದ ಸದಸ್ಯರು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:‘ತುಂಬಾ ನೋವಾಗ್ತಿದೆ’.. ಅಪ್ಪು 50ನೇ ವರ್ಷದ ಬರ್ತ್ ಡೇ ಬಗ್ಗೆ ಶಿವಣ್ಣ ಹೇಳಿದ್ದೇನು?

publive-image

ಇದೀಗ ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಗುಡ್​ನ್ಯೂಸ್​ ಒಂದನ್ನು ಕೊಟ್ಟಿದ್ದಾರೆ. ಹೌದು, ಇಷ್ಟು ದಿನ ಪುನೀತ್ ರಾಜಕುಮಾರ್ ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಶುಭ ಸುದ್ದಿ ಅಂತಲೇ ಹೇಳಬಹುದು.

publive-image

ನೀವೆಲ್ಲರೂ ನಮ್ಮ ಮೇಲೆ ಇಟ್ಟಿರುವ ನಂಬಿಕೆ, ಪ್ರೀತಿ, ಗೌರವನೇ ಅಪ್ಪು ಇನ್ನೂ ನಮ್ಮ ಜೊತೆ ಇದ್ದಾರೆ ಅನ್ನೋದಕ್ಕೆ ಸಾಕ್ಷಿ. ನಿಮ್ಮೆಲ್ಲರ ನಗುವಲ್ಲೇ ನಾನು ಅಪ್ಪು ಅವರನ್ನ ಕಾಣುತ್ತಿದ್ದೇನೆ. ಪ್ರತಿ ದಿನ ಅಪ್ಪು ಅವರನ್ನ ಸೆಲೆಬ್ರೇಟ್ ಮಾಡುವ ಆಸೆ. ಪ್ರತಿ ಕ್ಷಣ ಅಪ್ಪು ಅವರನ್ನ ನೋಡುವ ಆಸೆ. ಮರೆಯಾದರು ಮರೆಯಲು ಸಾಧ್ಯವಿಲ್ಲ. ನಿಮ್ಮ ನಗುವಿನ ಒಡೆಯನನ್ನು ಪ್ರತಿದಿನ ನೋಡಲು ನಿಮಗಾಗಿ ಕಾದಿದೆ ಒಂದು ಗುಡ್‌ನ್ಯೂಸ್. ಅಪ್ಪು ಹೆಸರಲ್ಲಿ ಒಂದು ದಿಟ್ಟ ಹೆಜ್ಜೆ. ಅದುವೆ PRKStarFandom app ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ ಎಂದಿದ್ದಾರೆ.

publive-image

ಏನಿದು PRKStarFandom?

ಇದೇ ಮೊಟ್ಟ ಮೊದಲ ಬಾರಿಗೆ ಅಪ್ಪು ಹೆಸರಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರು PRK Star Fandom ಌಪ್​ ಅನ್ನು ಜಾರಿಗೆ ತರುತ್ತಿದ್ದಾರೆ. ಈ PRK Star Fandom ಌಪ್​ನಲ್ಲಿ ಅಪ್ಪು ಅವರಿಗೆ ಸಂಬಂಧಪಟ್ಟ ಎಲ್ಲ ವಿವರಗಳು ದೊರಕಲಿವೆ. ಅಪ್ಪು ಅವರ ಸಿನಿಮಾ, ಸಾಂಗ್ಸ್​, ಡ್ಯಾನ್ಸ್​, ಭಾಷಣ ಸೇರಿದಂತೆ ಸಾಕಷ್ಟು ಅಂಶಗಳನ್ನು ಒಳಗೊಂಡಿದೆ. ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ನಿಮಿತ್ತ ಈ ಹೊಸ ಌಪ್​ ಅನ್ನು ಜಾರಿಗೆ ತರುತ್ತಿದ್ದಾರೆ. ಇನ್ನೂ ಈ APP ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment