/newsfirstlive-kannada/media/post_attachments/wp-content/uploads/2024/10/bigg-boss28.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಶೋ ಶುರುವಾದ ಮೊದಲ ದಿನದಿಂದಲೂ ಇಲ್ಲಿಯವರೆಗೂ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ರಾಮಾಚಾರಿ ಸೀರಿಯಲ್ ನಟಿ ಐಶ್ವರ್ಯಾ ಸಾಲಿಮಠ ಮನೆಗೆ ಹೊಸ ಅತಿಥಿ ಆಗಮನ; ವಿಡಿಯೋ..
ಅಷ್ಟೇ ಯಾಕೆ ಈ ಬಾರಿಯ ಹೊಸ ಅಧ್ಯಾಯದ ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ರೂಲ್ಸ್ ಬ್ರೇಕ್ ಮಾಡುತ್ತಲೇ ಇದ್ದಾರೆ. ಬಿಗ್ಬಾಸ್ಗೆ ಬಂದ ಪ್ರತಿ ಸ್ಪರ್ಧಿಗಳು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ರಾತ್ರಿ ಬಿಟ್ಟರೆ ಬೆಳಗಿನ ಸಂದರ್ಭದಲ್ಲಿ ಸರ್ಧಿಗಳು ಮನೆಯಲ್ಲಿ ಮಲಗುವ ಹಾಗಿಲ್ಲ. ಬಹಳ ಮುಖ್ಯವಾಗಿ ಸ್ಪರ್ಧಿಗಳು ಮೈಕ್ ಧರಿಸಿಕೊಂಡೇ ಮಾತನಾಡಬೇಕು. ಯಾರು ಕೂಡ ಮೂಖ ಧ್ವನಿಯಲ್ಲಿ ಗುಸುಗುಸು ಅಂತ ಮಾತಾಡುವಂತಿಲ್ಲ. ಹೀಗೆ ನಾನಾ ರೀತಿಯಲ್ಲಿ ಬಿಗ್ಬಾಸ್ ನಿಯಮಗಳಿವೆ.
ಆದರೆ ಈ ಬಾರಿ ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ರೂಲ್ಸ್ ಬ್ರೇಕ್ ಮಾಡುತ್ತಲೇ ಇದ್ದಾರೆ. ಎರಡನೇ ವಾರದಲ್ಲಿ ಬಿಗ್ಬಾಸ್ ಮನೆ ಮಂದಿಗೆ ದೊಡ್ಡ ಶಿಕ್ಷೆಯೊಂದನ್ನು ನೀಡಿದ್ದರು. ಕೆಲವರು ಬ್ಲೈಂಡ್ಸ್ ಡೌನ್ ಆಗಿದ್ದಾಗ ಇಣುಕಿ ನೋಡಿದ್ದಕ್ಕೆ ಇಡೀ ಮನೆಯ ಎಲ್ಲಾ ಸ್ಪರ್ಧಿಗಳಿಗೂ ನಾಮಿನೇಷನ್ ಶಿಕ್ಷೆ ಕೊಟ್ಟಿದ್ದರು. ಇದೀಗ ಮನೆಯೊಳಗೆ ಮತ್ತೆ ಅಂಥದ್ದೇ ಇನ್ನೊಂದು ಘಟನೆ ನಡೆದಿದೆ. ಭವ್ಯಾ ಗೌಡ ಮತ್ತು ಅನುಷಾ ರೈ ಮಾಡಿದ ತಪ್ಪಿನಿಂದಾಗಿ ಮನೆಯ ಎಲ್ಲರೂ ಶಿಕ್ಷೆಯನ್ನು ಅನುಭವಿಸುವಂತೆ ಆಗಿದೆ.
ವ್ಯಾಯಾಮ ಮಾಡುವ ನೆಪದಲ್ಲಿ ಭವ್ಯಾ ಹಾಗೂ ಅನುಷಾ ಮೈಕ್ ಧರಿಸದೇ ಸಾಕಷ್ಟು ಮಾತನಾಡಿದ್ದಾರೆ. ಅಲ್ಲೇ ನಿಂತುಕೊಂಡಿದ್ದ ಸಹ ಸ್ಪರ್ಧಿಗಳು ಕೂಡ ಅವರ ತಪ್ಪನ್ನು ಎತ್ತಿ ಹೇಳಿಲ್ಲ. ಇದನ್ನು ಗಮನಿಸಿದ ಬಿಗ್ಬಾಸ್ ಟೆಲಿಫೋನ್ ಬೂತ್‌ಗೆ ಕರೆ ಮಾಡಿ ಕ್ಯಾಪ್ಟನ್ ಶಿಶಿರ್‌ಗೆ ಹೇಳಿದ್ದಾರೆ. ಈ ತಪ್ಪಿಗೆ ಶಿಕ್ಷೆಯಾಗಿ ಬಿಗ್ ಬಾಸ್ ಮುಂದಿನ ಆದೇಶದವರೆಗೂ ಮನೆಯ ಯಾವ ಸದಸ್ಯರು ಜಿಮ್ ಅನ್ನು ಬಳಸುವಂತಿಲ್ಲ ಹಾಗೂ ಬೆಡ್ಗಳನ್ನು ಬಳಸುವಂತಿಲ್ಲ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ