ಪತ್ನಿ ಕೊಲೆ ಆರೋಪ; ಪಂಜಾಬ್​ನ ಆಪ್​ ನಾಯಕ, ಪ್ರೇಯಸಿ, ಸುಪಾರಿ ಹಂತಕರ​ ಬಂಧನ

author-image
Gopal Kulkarni
Updated On
ಪತ್ನಿ ಕೊಲೆ ಆರೋಪ; ಪಂಜಾಬ್​ನ ಆಪ್​ ನಾಯಕ, ಪ್ರೇಯಸಿ, ಸುಪಾರಿ ಹಂತಕರ​ ಬಂಧನ
Advertisment
  • ಪತ್ನಿಯ ಹತ್ಯೆ ಕೇಸ್​​ನಲ್ಲಿ ಆಪ್​​ನ ನಾಯಕ ಸೇರಿ ಐವರು ಅಂದರ್​
  • ಪ್ರೇಯಸಿಯೊಂದಿಗೆ ಸೇರಿ ಪತ್ನಿಯ ಹತ್ಯೆಗೆ ಸ್ಕೇಚ್ ಹಾಕಿದ್ದ ಅನೂಖ್​​
  • ಪೊಲೀಸರ ಮುಂದೆ ಕಟ್ಟಕತೆ ಕಟ್ಟಿ ಆ ಬಳಿಕ ಬಲೆಗೆ ಬಿದ್ದ ಆಪ್ ನಾಯಕ

ಪಂಜಾಬ್ ಪೊಲೀಸರು ಸೋಮವಾರ ಆಮ್​ ಆದ್ಮಿ ಪಕ್ಷದ ನಾಯಕ ಹಾಗೂ ಉದ್ಯಮಿ ಅನೋಖ್ ಮಿತ್ತಲ್ ಮತ್ತು ಆತನ ಪ್ರೇಯಸಿ ಹಾಗೂ ನಾಲ್ವರು ಸುಪಾರಿ ಹಂತಕರನ್ನು ಬಂಧಿಸಿದ್ದಾರೆ. ಕಳೆದವಾರ ಕೊಲೆಯಾಗಿದ್ದ ಮಿತ್ತಲ್ ಅವರ ಪತ್ನಿಯ ಹತ್ಯೆಯ ಆರೋಪದ ಮೇಲೆ ಈ ಆರು ಜನರನ್ನು ಬಂಧಿಸಲಾಗಿದೆ.

ಇದನ್ನೂ ಓದಿ:3 ದಿನ ಅಲ್ಲಿ.. 3 ದಿನ ಇಲ್ಲಿ.. 1 ದಿನ ವೀಕ್ ಆಫ್‌; ಇಬ್ಬರ ಹೆಂಡಿರ ಮುದ್ದಿನ ಗಂಡನದ್ದು ವಿಚಿತ್ರ ಒಪ್ಪಂದ!

ಮಾರಕಾಸ್ತ್ರಗಳೊಂದಿಗೆ ಬಂದ ದರೋಡೆಕೋರರು ಕಳೆದ ಶನಿವಾರ ರಾತ್ರಿ ಲಿಪ್ಸಿಯವರನ್ನು ಹತ್ಯೆ ಮಾಡಿದ್ದರು. ಪತಿ ಪತ್ನಿ ಇಬ್ಬರು ರಾತ್ರಿ ಊಟ ಮುಗಿಸಿ ಮನೆಗೆ ಬರುವಾಗ ಪಂಜಾಬ್​ನ ದೆಹ್ಲೊದಲ್ಲಿ ಈ ಘಟನೆ ನಡೆದಿತ್ತು. ಆರಂಭದಲ್ಲಿ ಅನೋಖ್, ನಾನು ರಸ್ತೆ ಪಕ್ಕ ಕಾರ್ ಪಾರ್ಕ್ ಮಾಡಿ ಮೂತ್ರ ವಿಸರ್ಜನೆಗೆ ಅಂತ ಹೊರಟಿದ್ದೆ. ನಾನು ಕಾರಿನಿಂದ ಆಚೆ ಕಾಲು ಇಡುತ್ತಿದ್ದಂತೆ ಐದು ಜನರು ಮಾರಕ ಆಯುಧಗಳೊಂದಿಗೆ ನನ್ನ ಮೇಲೆ ಹಲ್ಲೆ ಮಾಡಿದರು. ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದೆ, ನನಗೆ ಮರಳಿ ಪ್ರಜ್ಞೆ ಬಂದಾಗ ನನ್ನ ಪತ್ನಿ ರಕ್ತದ ಮಡುವಿನಲ್ಲಿ ರಸ್ತೆ ಬದಿ ಬಿದ್ದಿದ್ದಳು. ಅವಳ ಮೈಮೇಲಿದ್ದ ಚಿನ್ನಾಭರಣ ಹಾಗೂ ಕಾರು ಎರಡು ಕೂಡ ಕಾಣೆಯಾಗಿದ್ದವು ಎಂದು ಪೊಲೀಸರ ಎದುರು ಹೇಳಿಕೊಂಡಿದ್ದರು.

ಇದನ್ನೂ ಓದಿ:ವಿಚಿತ್ರ ಸಾಹಸಕ್ಕೆ ಕೈಹಾಕಿದ ಚೀನಾ! ಸಮುದ್ರ ಆಳದಲ್ಲಿ ಸ್ಪೇಸ್ ಸ್ಟೇಷನ್, ಭಯ ಹುಟ್ಟಿಸಿದ ಈ ಕಡಲ ಬೇಟೆ..!

ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ ಅನೋಖ್​ರ ಹೇಳಿಕೆ ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಯ್ತು. ಈ ಕಾರಣದಿಂದ ಸಂಶಯ ಬಂದು ಈ ರಾಬರಿ ಕಥೆ ಇವನೇ ಕಟ್ಟಿದ ಕಾಲ್ಪನಿಕ ಘಟನೆ ಎಂಬ ನಂಬಿಕೆ ಬಲವಾಗುತ್ತಾ ಹೋಯ್ತು. ನಂತರ ವಿಚಾರಣೆಯನ್ನು ತೀವ್ರಗೊಳಿಸಿದಾಗ ಅಸಲಿ ವಿಷಯ ಬಹಿರಂಗವಾಯ್ತು. ಪತ್ನಿಯ ಹತ್ಯೆಯ ಸೂತ್ರದಾರ ಆತನ ಗಂಡನೇ ಎಂಬುದು ಗೊತ್ತಾಯಿತು ಎಂದು ಪೊಲೀಸ್ ಕಮಿಷನರ್​ ಕುಲದೀಪ್ ಸಿಂಗ್ ಚಾಹಲ್ ಹೇಳಿದ್ದಾರೆ.

publive-image

35 ವರ್ಷದ ಅನೋಖ್ ಹಾಗೂ ಆತನ 24 ವರ್ಷದ ಪ್ರೇಯಸಿಯ ಕೈವಾಡ ಲಿಪ್ಸಿ ಹತ್ಯೆಯ ಹಿಂದೆ ಇತ್ತು ಎಂದು ಕಮಿಷನರ್ ಕುಲದೀಪ್ ಹೇಳಿದ್ದಾರೆ. ಪೊಲೀಸರು ಹೇಳುವ ಪ್ರಕಾರ ಅನೋಖ್ ಪತ್ನಿಗೆ ಆತನ ಅಕ್ರಮ ಸಂಬಂಧದ ಬಗ್ಗೆ ಸುಳಿವು ಇತ್ತು. ಇದರಿಂದ ಅವರ ನಡುವೆ ಆಗಾಗಾ ಮನಸ್ತಾಪ ಆಗುತ್ತಿತ್ತು. ಕೊನೆಗೆ ಅನೋಖ್ ಹಾಗೂ ಆತನ ಪ್ರೇಯಸಿ ಲಿಪ್ಸಿ ಹತ್ಯೆಗೆ ಸಂಚು ರೂಪಿಸಿದರು. ನಾಲ್ಕು ಜನ ಸುಪಾರಿ ಹಂತಕರನ್ನು ಸಂಪರ್ಕಿಸಿ ಅವರ ಮೂಲಕ ಹತ್ಯೆ ಮಾಡಿಸಿದ್ದಾರೆ. ಈ ನಾಲ್ವರನ್ನು ಬಂಧಿಸಲಾಗಿದೆ. ಅವರನ್ನು ಅಮೃತ್​ಪಾಲ್ ಅಲಿಯಾಸ್ ಬಲ್ಲಿ, ಗುರದೀಪ್ ಸಿಂಗ್ ಅಲಿಯಾ ಮನ್ನಿ, ಸೋನು ಸಿಂಗ್ ಮತ್ತು ಸಾಗರದೀಪ್ ಸಿಂಗ್ ಅಲಿಯಾಸ್​ ತೇಜಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇವರಿಗೆ ಅನೋಖ್​ ಒಟ್ಟು 5 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದ. 2.5 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಿದ್ದು ಉಳಿದಿದ್ದನ್ನು ಕೆಲಸ ಮುಗಿದ ಬಳಿಕ ಕೊಡುವುದಾಗಿ ಹೇಳಿದ್ದ. ಅನೂಖ್ ಕಳೆದ ನಾಲ್ಕು ತಿಂಗಳ ಹಿಂದೆ ಆಮ್ ಆದ್ಮಿ ಪಕ್ಷವನ್ನು ಸೇರಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment