/newsfirstlive-kannada/media/post_attachments/wp-content/uploads/2025/06/PNB_YOUTH.jpg)
ಚಂಡೀಗಢ: ವೀಸಾ ಅರ್ಜಿಯನ್ನು ಪದೇ ಪದೇ ಅಧಿಕಾರಿಗಳು ತಿರಸ್ಕಾರ ಮಾಡಿದ ಹಿನ್ನೆಲೆಯಲ್ಲಿ ಯುವಕನೊಬ್ಬ ತನಗೆ ತಾನೇ ಗುಂಡು ಹಾರಿಸಿಕೊಂಡು ಜೀವ ಬಿಟ್ಟಿದ್ದಾನೆ. ಪಂಜಾಬ್ನ ಬರ್ನಾಲ್ ಜಿಲ್ಲೆಯ ಸುಖಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಜಿಲ್ಲೆಯ ಸುಖಪುರ ಗ್ರಾಮದ ದಿಲ್ಪ್ರೀತ್ ಸಿಂಗ್ (19) ಪ್ರಾಣ ಬಿಟ್ಟ ಯುವಕ. ಈತನ ಸಂಬಂಧಿಕರು ಕೆನಾಡದಲ್ಲಿ ವಾಸವಾಗಿದ್ದಾರೆ. ಹೀಗಾಗಿ ತಾನು ಕೆನಾಡಕ್ಕೆ ಪ್ರಯಾಣ ಬೆಳೆಸಬೇಕೆಂದು ವೀಸಾಗೆ ಅರ್ಜಿ ಹಾಕಿದ್ದನು. ಆದರೆ ಅಧಿಕಾರಿಗಳು ಯುವಕನ ವೀಸಾ ಅರ್ಜಿ ಹಾಕಿದಾಗೆಲ್ಲಾ ಪದೇ ಪದೇ ತಿರಸ್ಕಾರ ಮಾಡಿ ವಾಪಸ್ ಕಳುಹಿಸುತ್ತಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಕೊನೆಯ ಬಾರಿ ಅರ್ಜಿ ತಿರಸ್ಕಾರ ಮಾಡಿದಾಗ ಬೇಸರಗೊಂಡ ಯುವಕ ಮನೆಗೆ ಬಂದಿದ್ದನು.
ಇದನ್ನೂ ಓದಿ: ಶಿವರಾಜ್‌ಕುಮಾರ್ ಜೀವನ ಚರಿತ್ರೆ ರಿಲೀಸ್.. ಸಮಾರಂಭದಲ್ಲಿ ಚಿರ ಯುವಕನಂತೆ ಹಾಡಿಕುಣಿದ ಕರುನಾಡ ಚಕ್ರವರ್ತಿ
ದೊಡ್ಡ ನಿರ್ಣಯದೊಂದಿಗೆ ಮನೆಗೆ ಬಂದವನೇ ರೂಮ್ ಒಳಗೆ ಹೋಗಿ ಒಬ್ಬನೇ ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ಮನೆಯಲ್ಲಿದ್ದ ತನ್ನ ಅಂಕಲ್ನ ಲೈಸನ್ಸ್ ಇರುವಂತಹ ಡಬಲ್ ಬ್ಯಾರೆಲ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಜೀವ ಬಿಟ್ಟಿದ್ದಾನೆ. ಈ ಶಬ್ಧ ಕೇಳಿ ಪಕ್ಕದ ಕೋಣೆಯಲ್ಲಿ ಕುಳಿತ್ತಿದ್ದ ತಾಯಿ ಹಾಗೂ ಅಜ್ಜಿ ಓಡೋಡಿ ಬಂದು ಭಯದಿಂದ ಕೂಗಾಡಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ಸ್ಥಳೀಯರು ಬಂದು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಡಬಲ್ ಬ್ಯಾರಲ್ ರೈಫಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮುಗಿದ ಮೇಲೆ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ