50ನೇ ವಯಸ್ಸಿಗೆ ತಂದೆಯಾದ ಪಂಜಾಬ್​ ಸಿಎಂ! ಮನೆಗೆ ಲಕ್ಷ್ಮೀಯನ್ನ ಬರಮಾಡಿಕೊಂಡ ಭಗವಂತ್ ಮಾನ್

author-image
AS Harshith
Updated On
50ನೇ ವಯಸ್ಸಿಗೆ ತಂದೆಯಾದ ಪಂಜಾಬ್​ ಸಿಎಂ! ಮನೆಗೆ ಲಕ್ಷ್ಮೀಯನ್ನ ಬರಮಾಡಿಕೊಂಡ ಭಗವಂತ್ ಮಾನ್
Advertisment
  • ಹೆಣ್ಣು ಮಗುವಿನ ತಂದೆಯಾದ ಪಂಜಾಬ್ ಸಿಎಂ ಭಗವಂತ್ ಮಾನ್
  • ಮೊದಲ ಪತ್ನಿಯ ವಿಚ್ಛೇದನ ಬಳಿಕ ವೈದ್ಯೆಯನ್ನು ವಿವಾಹವಾಗಿದ್ದ ಸಿಎಂ
  • 3ನೇ ಬಾರಿಗೆ ತಂದೆಯಾದ ಭಗವಂತ್ ಮಾನ್.. ಸಿಎಂಗೆ ಖುಷಿಯೋ ಖುಷಿ

ಪಂಜಾಬ್ ಸಿಎಂ ಭಗವಂತ್ ಮಾನ್ ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ಕಾರಣ ಅವರು ತಂದೆಯಾಗಿದ್ದಾರೆ. ಅವರ ಪತ್ನಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಲಕ್ಷ್ಮೀಯನ್ನು ಬರಮಾಡಿಕೊಂಡಿದ್ದಾರೆ.

ಪಂಜಾಬ್ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ 2022ರಲ್ಲಿ ಮದುವೆಯಾಗಿದ್ದರು. ಅವರ ಪತ್ನಿ ಡಾ.ಗುರುಪ್ರೀತ್ ಕೌರ್ ಮೊಹಾಲಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನಬೇಡಿ.. ಯಾಕಂದ್ರೆ ಈ ಸ್ಟೋರಿ ಓದಿ

ಭಗವಂತ್ ಮಾನ್ 2015 ರಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನಿಡಿದ ಬಳಿಕ ಗುರುಪ್ರೀತ್ ಕೌರ್ ಅವರನ್ನು ವಿವಾಹವಾದರು. ಈಗಾಗಲೇ ಪಂಜಾಬ್​ ಸಿಏಂಗೆ ಓರ್ವ ಮಗ ಮತ್ತು ಮಗಳಿದ್ದಾರೆ.

ಒಂದೆಡೆ ಲೋಕಸಭಾ ಚುನಾವಣೆ ದಿನಾಂಕ ನಿಗಡಿಯಾಗಿದೆ. ಮತ್ತೊಂದೆಡೆ ಚುನಾವಣೆ ಪ್ರಚಾರ ಮತ್ತಿತರ ಕಾರ್ಯದಲ್ಲಿ ಭಗವಂತ್ ಮಾನ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪುಟ್ಟ ಕಂದನನ್ನು ಪಂಜಾಬ್​ ಸಿಎಂ ಮನೆಗೆ ಬರಮಾಡಿಕೊಂಡಿದ್ದಾರೆ. ಅವರು ಕುಟುಂಬಸ್ಥರು ಮಗು ಜನಿಸಿದ ಸಂತಸದಲ್ಲಿ ತೇಲಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment