/newsfirstlive-kannada/media/post_attachments/wp-content/uploads/2025/04/Govt-employees.jpg)
ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತಿದೆ. ಸರ್ಕಾರಿ ನೌಕರರು ಶ್ರದ್ಧೆ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಿಜಕ್ಕೂ ಅದಕ್ಕೆ ಅರ್ಥ ಬರುತ್ತದೆ. ಆದರೆ ಜವಾಬ್ದಾರಿಗಳಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಸರ್ಕಾರಿ ನೌಕರರಿಗೆ ಪಾಠ ಕಲಿಸಲು ಪಂಜಾಬ್ ಸರ್ಕಾರ ಮುಂದಾಗಿದೆ. ಸರ್ಕಾರದ ಕೆಲಸಕ್ಕೆ ಅಡ್ಡಿಯಾಗದಂತೆ ಸಂಪರ್ಕ ಸಾಧಿಸಲು ಮಹತ್ವದ ಆದೇಶವನ್ನ ಜಾರಿಗೆ ಬಂದಿದೆ.
ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ಸರ್ಕಾರ ತನ್ನ ನೌಕರರಿಗೆ ದಿನದ 24 ಗಂಟೆ ಫೋನ್ ರಿಸೀವ್ ಮಾಡಬೇಕು ಅನ್ನೋ ಆದೇಶ ಹೊರಡಿಸಿದೆ. ಅದರ ಅನ್ವಯ, ರಜೆ ಇದ್ರೂ ಸರ್ಕಾರಿ ನೌಕರರು ಅಧಿಕಾರಿಗಳು ಹಾಗೂ ಕಚೇರಿಯ ಫೋನ್‌ಗಳನ್ನ ಸ್ವೀಕರಿಸಲೇಬೇಕು. ತುರ್ತು ಸಂದರ್ಭದಲ್ಲಿ ಆಡಳಿತಾತ್ಮಕ ಕೆಲಸಕ್ಕೆ ಅಡ್ಡಿಯಾಗಬಾರದು ಅನ್ನೋ ಉದ್ದೇಶಕ್ಕೆ ಈ ನಿಯಮ ಜಾರಿಗೆ ತಂದಿದೆ.
ಇದನ್ನೂ ಓದಿ: ಜನಿವಾರ, ಮಾಂಗಲ್ಯ ತೆಗೆಯೋ ಆದೇಶ ವಾಪಸ್.. ರೈಲ್ವೇ ಇಲಾಖೆಯಿಂದ ಅಧಿಕೃತ ಮಾಹಿತಿ; ಏನಿದೆ?
ಫೋನ್ ಸ್ವಿಚ್ ಆಫ್ ಮಾಡುವಂತಿಲ್ಲ!
ಪಂಜಾಬ್‌ನಲ್ಲಿ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ತಮ್ಮ ಫೋನ್‌ಗಳನ್ನು ಆಫ್ ಮಾಡುವಂತಿಲ್ಲ. ಸರ್ಕಾರಿ ನೌಕರರಿಗೆ ಕೆಲಸದ ಅವಧಿ ಮುಗಿದ ಮೇಲೂ ಈ ನೀತಿ ಅನ್ವಯವಾಗುತ್ತದೆ. ಅಷ್ಟೇ ಅಲ್ಲ ರಜಾ ದಿನಗಳಲ್ಲೂ ಫೋನ್ ಸ್ವಿಚ್ ಆಫ್ ಆಗುವಂತಿಲ್ಲ ಎಂದು ಸೂಚಿಸಲಾಗಿದೆ.
ಸರ್ಕಾರದ ನಿರ್ಧಾರಕ್ಕೆ ಕಾರಣವೇನು?
ಪಂಜಾಬ್ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರ ಸ್ವಿಚ್ ಆಫ್ ಚಾಳಿಯೇ ಬಹುದೊಡ್ಡ ಕಿರಿಕಿರಿಯಾಗಿತ್ತು. ಕೆಲಸದ ಅವಧಿ ಮುಗಿಯುತ್ತಿದ್ದಂತೆ ಅಧಿಕಾರಿಗಳು, ಸಿಬ್ಬಂದಿ ಮೊಬೈಲ್ ಸ್ವಿಚ್ ಆಫ್ ಹಾಗೂ ಫ್ಲೈಟ್ ಮೋಡ್‌ಗಳಿಗೆ ಹಾಕುತ್ತಿದ್ದರು. ಇದರಿಂದ ಆಡಳಿತದ ಸಂಪರ್ಕ ಸಾಧಿಸೋದು ಕಷ್ಟವಾಗಿತ್ತು. ಫೋನ್‌ಗಳ ಸ್ವಿಚ್ ಆಫ್‌ನಿಂದ ಸರ್ಕಾರ ಹಾಗೂ ಆಡಳಿತಾಧಿಕಾರಿಗಳ ಮಧ್ಯೆ ಕಿರಿಕಿರಿ ಆಗುತ್ತಾ ಇತ್ತು. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಸಿಎಂ ಭಗವಂತ್ ಮಾನ್ ಅವರ ಸರ್ಕಾರ ನೌಕರರಿಗೆ 24 ಗಂಟೆ ಫೋನ್ ರಿಸೀವ್ ಮಾಡಬೇಕು ಅನ್ನೋ ಆದೇಶ ನೀಡಿದೆ. ಆದರೆ ಪಂಜಾಬ್‌ನಲ್ಲಿ 2017ರಲ್ಲಿ ಅಮರಿಂದರ್ ಸಿಂಗ್ ಸರ್ಕಾರ ಕೂಡ ಇದೇ ರೀತಿ ಸರ್ಕಾರಿ ನೌಕರರಿಗೆ ಕಟ್ಟು ನಿಟ್ಟಿನ ಆದೇಶ ನೀಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ